April 20, 2024

Bhavana Tv

Its Your Channel

ಬೀನಾ ವೈಧ್ಯ ಶಿಕ್ಷಣ ಸಂಸ್ಥೆಯಲ್ಲಿ ಸಂಭ್ರಮದ ಗಣರಾಜ್ಯೋತ್ಸವ

ಮುರ್ಡೇಶ್ವರದ ಬೀನಾ ವೈದ್ಯ ಶಿಕ್ಷಣ ಸಂಸ್ಥೆಯಲ್ಲಿ ೭೪ ನೇ ಗಣರಾಜ್ಯೋತ್ಸವದ ದ್ವಜಾರೋಹಣವನ್ನು ಸಂಸ್ಥೆಯ ಟ್ರಸ್ಟಿ & ಆಡಳಿತ ನಿರ್ದೇಶಕಿಯಾದ ಡಾ. ಪುಷ್ಪಲತಾ ಮಾಂಕಾಳ್ ವೈದ್ಯ ನೆರವೇರಿಸಿದರು.


ನಂತರದ ವೇದಿಕೆ ಕಾರ್ಯಕ್ರಮವನ್ನು ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಂಸ್ಥೆಯ ಸಲಹಾ ಸಮಿತಿಯ ಸದಸ್ಯರು ಹಾಗೂ ದುರ್ಗಾ ಪರಮೇಶ್ವರಿದೇವಸ್ಥಾನದ ಟ್ರಸ್ಟಿಯಾದ ಶ್ರೀ ನಾರಾಯಣ ದೈಮನೆಯವರು ಉದ್ಘಾಟಿಸಿ ಮಾತನಾಡಿ ಸಂಸ್ಥೆ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಮೌಲ್ಯಧಾರಿತ ಶಿಕ್ಷಣದ ಬಗ್ಗೆ ಪ್ರಶಂಸಿದರು.ಭಾರತ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ಹೊಂದಿರುವ ಇಡೀ ಜಗತ್ತಿನಲ್ಲಿಯೇ ಶ್ರೇಷ್ಟ ಸಂವಿಧಾನವನ್ನು ಹೊಂದಿರುವ ದೇಶವೇ ಭಾರತ. ಭಾರತದ ಪ್ರಜಾ ಪ್ರಭುತ್ವದ ಶ್ರೇಷ್ಠತೆಯನ್ನು ಈ ಸಂದರ್ಭದಲ್ಲಿ ತಿಳಿಸಿ ಹೇಳಿ,೭೪ ಅರ್ಥ ಪೂರ್ಣ ಆಚರಣೆಯಲ್ಲಿ ಭಾಗಿಯಾಗಿರುವುದು ಸಂತಸದ ವಿಷಯ ಎಂದು ಸಂಸ್ಥೆಯ ಸಲಹಾ ಸಮಿತಿಯ ಸದಸ್ಯರು ಹಾಗೂ ಭಟ್ಕಳ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಗಂಗಾಧರ ನಾಯ್ಕ ರವರು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಆಡಳಿತ ನಿರ್ದೇಶಕರಾದ ಶ್ರೀಮತಿ ಡಾ ಪುಷ್ಪಲತ ವೈಧ್ಯರವರು ಭಾರತ ವಿವಿಧತೆಯಲ್ಲಿ ಏಕತೆ ಹೊಂದಿರುವ ರಾಷ್ಟ್ರವಾಗಿದ್ದು,ಸಂವಿಧಾನದ ವಿಶೇಷ ಮತ್ತು ಮೌಲ್ಯಗಳ ಬಗ್ಗೆ ಪರಿಚಯಿಸಿ ಎಲ್ಲರಿಗೂ ಶುಭ ಹಾರೈಸಿದರು.ವೇದಿಕೆ ಮೇಲೆ ಸಂಸ್ಥೆಯ ಪ್ರಾಂಶುಪಾಲರು ಉಪಸ್ಥಿತರಿದ್ದರು. ತದನಂತರ ಹಲವು ಸ್ಪರ್ಧೆಗಳಲ್ಲಿ ವಿಜೇತರಾದ ಸಂಸ್ಥೆಯ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಸ್ವಾತಂತ್ರ‍್ಯ ವೀರರ ವೇಷವನ್ನು ತೊಟ್ಟು ಮಕ್ಕಳ ಛದ್ಮ ವೇಷ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ವಿದ್ಯಾರ್ಥಿಗಳಿಗೆ ಹೌಸ್ ವೈಸ್ “ಪ್ರೋಸ್ ಅಂಡ್ ಕಾನ್ಸ್ ಆಫ್ ಮೊಬೈಲ್ ” ಎಂಬ ವಿಷಯದ ಮೇಲೆ ಪ್ಯಾನೆಲ್ ಡಿಸ್ಕಷನ್ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.ಶಾಲೆಯ ವಿದ್ಯಾರ್ಥಿಗಳಾದ ಸಂಜನಾ ಮತ್ತು ಸಿಂಚನ ಎಲ್ಲರನ್ನೂ ಸ್ವಾಗತಿಸಿ ವಂದಿಸಿದರು. ವಿದ್ಯಾರ್ಥಿಗಳಾದ ಅನುಷಾ ಮತ್ತು ಸಾಕ್ಷಾತ್ ಕಾರ್ಯಕ್ರಮವನ್ನು ನಿರ್ವಹಿಸಿದರು.

error: