March 25, 2024

Bhavana Tv

Its Your Channel

ನಟ ಪುನೀತ್ ರಾಜಕುಮಾರ್‌ಗೆ ಶ್ರೀಧರ ಶೇಟ್ ಶಿರಾಲಿಯವರು ರಚಿಸಿದ ಕವಿತೆಯ ಮೂಲಕ ನುಡಿನಮನ

ಶಿರಾಲಿ: ಕನ್ನಡದ ಯುವರತ್ನ ಪುನೀತ್ ರಾಜಕುಮಾರ್ ನೋಡು ನೋಡುತ್ತಲೇ ಕೈಬೀಸಿ ಎದ್ದು ಹೋದದ್ದು, ಇನ್ನೂ ನಂಬಲಾಗದ ಸತ್ಯ. ತನ್ನ ನಟನೆಯೊಂದಿಗೆ ಸಮಾಜಮುಖಿ ಸಹೃದಯೀ ಕಾರ್ಯಗಳಿಂದ ನಮ್ಮೆಲ್ಲರ ಹೃದಯಗಳಲ್ಲಿ ಸ್ಥಾನ ಪಡೆದಿದ್ದ ಪುನೀತ್ ರಾಜಕುಮಾರ್ ಅವರಿಗೆ, ಶ್ರೀಧರ ಶೇಟ್ ಶಿರಾಲಿಯವರು ರಚಿಸಿದ ಕವಿತೆಯ ಮೂಲಕ ನುಡಿನಮನ.ನಾಡಿನ ಖ್ಯಾತ ಗಾಯಕಿ ಶ್ರೀಮತಿ ಸಂಗೀತಾ ರಾಘವೇಂದ್ರ ದಾವಣಗೆರೆಯವರು ಅತ್ಯಂತ ಮಧುರವಾಗಿ ಹಾಡಿದ್ದಾರೆ.

ತನ್ನ ಶ್ರೇಷ್ಠ ನಟನೆಯೊಂದಿಗೆ,ಪರೋಪಕಾರ, ಸಮಾಜಸೇವೆ ಇತ್ಯಾದಿ ಜನಾನುರಾಗಿ ಕಾರ್ಯಗಳಿಂದ ಪುನೀತ್ ರಾಜಕುಮಾರ್ ಕನ್ನಡಿಗರ ಹೃದಯಗಳಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರೆ.ಅವರ ನಿಧನದ ಸುದ್ದಿ ಇನ್ನೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮ ನಾಡಿನಾದ್ಯಂತ ನಡೆಯುತ್ತಿದೆ. ಕನ್ನಡಿಗರು ಬೇರೆಬೇರೆ ವಿಧಾನದ ಮೂಲಕ ತಮ್ಮ ಹೃದಯ ಸಾಮ್ರಾಟನಿಗೆ ನುಡಿನಮನ ಸಲ್ಲಿಸುತ್ತಿದ್ದಾರೆ. ಪುನೀತ್ ರಾಜಕುಮಾರ್ ಅವರು ಭಾಗ್ಯವಂತ ಚಲನಚಿತ್ರದಲ್ಲಿ ಬಾಲನಟನಾಗಿ ಕನ್ನಡ ಚಿತ್ರರಂಗಕ್ಕೆ ಪ್ರವೇಶ ಪಡೆದಿದ್ದರು. ಆ ಚಲನಚಿತ್ರದಲ್ಲಿ ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ ಗೀತೆಯನ್ನು ಪುನೀತ್ ರಾಜಕುಮಾರ್ ಅವರು ತಮ್ಮ ೫ನೇ ವಯಸ್ಸಿನಲ್ಲಿಯೇ ಹಾಡಿ ಜನ ಮೆಚ್ಚುಗೆ ಪಡೆದಿದ್ದರು. ಈ ಹಾಡಿನ ಮೂಲಕವೇ ಶಿರಾಲಿಯ ಕವಿ ಸಾಹಿತಿ ಶ್ರೀಧರ್ ಶೇಟ್ ಅವರು ಪುನೀತ್ ರಾಜಕುಮಾರ್ ಅವರಿಗೆ ವಿಭಿನ್ನವಾಗಿ ನುಡಿ ನಮನದ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ತಮ್ಮ ಹಲವು ಕವಿತೆ ಮತ್ತು ಲೇಖನಗಳ ಮೂಲಕ ಈಗಾಗಲೇ ನಾಡಿನಾದ್ಯಂತ ಖ್ಯಾತಿಯ ನ್ನು ಪಡೆದಿರುವ ಶ್ರೀಧರ್ ಶೇಟ್ ಶಿರಾಲಿಯವರು ಭಟ್ಕಳ ತಾಲೂಕು ಒಂಬತ್ತನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಪಟ್ಟವನ್ನು ಅಲಂಕರಿಸಿದವರು. ಇವರ ಈ ಸಾಹಿತ್ಯಕ್ಕೆ ದಾವಣಗೆರೆಯ ವಿದುಷಿ, ದೂರದರ್ಶನ ಮತ್ತು ಆಕಾಶವಾಣಿಯ ಬಿ ಹೈಗ್ರೇಡ್ ಕಲಾವಿದೆ ಶ್ರೀಮತಿ ಸಂಗೀತ ರಾಘವೇಂದ್ರ ಅವರು ಮಧುರ ಕಂಠದ ಮೂಲಕ ಜೀವವನ್ನು ತುಂಬಿದ್ದಾರೆ. ವಿದುಷಿ ಸಂಗೀತ ರಾಘವೇಂದ್ರ ಅವರು ಚಂದನ ಟಿವಿ, ಉದಯ ಟಿವಿ, ಜಿ ಟಿವಿ, ಶಂಕರ ಟಿವಿ ಕಸ್ತೂರಿ ಟಿವಿ, ಸುವರ್ಣ ಟಿವಿ ಮುಂತಾದ ಹಲವಾರು ಟಿವಿ ಕಾರ್ಯಕ್ರಮಗಳ ಮೂಲಕ ಈಗಾಗಲೇ ನಾಡಿನಾದ್ಯಂತ ಪ್ರಸಿದ್ಧಿಯನ್ನು ಗಳಿಸಿದ್ದಾರೆ. ಶ್ರೀಮತಿ ಸಂಗೀತಾ ರಾಘವೇಂದ್ರ ಅವರು ಸಿಂಗಿoಗ್ ಸ್ಟಾರ್ ಆಫ್ ಕರ್ನಾಟಕ, ದಾವಣಗೆರೆ ಕೋಗಿಲೆ, ಜೂನಿಯರ್ ಲತಾ ಮಂಗೇಶ್ಕರ್, ಗಾನಶ್ರೀ, ಶಿವಮೊಗ್ಗ ಜಿಲ್ಲಾ ಅತ್ಯುತ್ತಮ ಗಾಯಕಿ, ಮುಂತಾದ ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಅವರು ಹಾಡಿರುವ ಪುನೀತ್ ರಾಜಕುಮಾರ್ ಅವರ ಶ್ರದ್ಧಾಂಜಲಿಯ ಈ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಅತಿ ಹೆಚ್ಚು ಜನಪ್ರಿಯತೆಯನ್ನು ಗಳಿಸುತ್ತಿದೆ.

error: