March 29, 2024

Bhavana Tv

Its Your Channel

ಶ್ರೀ ಮಾರುತಿ ಪತ್ತಿನ ಸಂಘಕ್ಕೆ ೨.೦೫ ಕೋಟಿ ಲಾಭ

ಶಿರಾಲಿ: ಶ್ರೀ ಮಾರುತಿ ಸಹಕಾರಿ ಪತ್ತಿನ ಸಂಘದ ೨೨ನೇ ವಾರ್ಷಿಕ ಮಹಾ ಸಭೆಯು ಶಿರಾಲಿಯ ಶ್ರೀ ಮಾರುತಿ ದೇವಸ್ಥಾನದ ಸಭಾಗೃಹದಲ್ಲಿ ಜರುಗಿತು.

ಸಂಘದ ಅಧ್ಯಕ್ಷರಾದ ಅಶೋಕ ಪೈ ಯವರು ಸಭೆಯನ್ನು ಉದ್ಘಾಟಿಸಿ ಮಾತನಾಡುತ್ತಾ ಸಂಘವು ಪ್ರಸ್ತುತ ಸಾಲಿನಲ್ಲಿ ೭೧.೨೧ ಕೋಟಿಗೂ ಮಿಕ್ಕಿ ಠೇವಣಿ ಸಂಗ್ರಹಿಸಿ ಸದಸ್ಯರಿಗೆ ರೂ. ೬೨.೪೭ ಕೋಟಿ ಸಾಲವನ್ನು ನೀಡಿ ೯೭.೭೪% ಸಾಲ ವಸೂಲಾತಿಯೊಂದಿಗೆ ಸುಮಾರು ೨.೦೫ ಕೋಟಿಗೂ ಮಿಕ್ಕಿ ಲಾಭಗಳಿಸಿ ಸುಧೃಢವಾಗಿದೆ ಎನ್ನುತ್ತಾ ಸದಸ್ಯರಿಗೆ ೧೨% ಲಾಭಾಂಶ ಘೋಷಿಸಿದರು. ಈ ಬಾರಿಯೂ ಎಸ್.ಎಸ್.ಎಲ್.ಸಿ.ಯಲ್ಲಿ ಗರಿಷ್ಟ ಅಂಕ ಪಡೆದವರಿಗೆ ಪ್ರತಿಭಾ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು. ಕುಮಟಾ ಶಾಖೆಯ ವ್ಯವಸ್ಥಾಪಕರಾದ ಪ್ರಸನ್ನ ಪ್ರಭು ರವರು ಸುಮಾರು ೧೬.೪೭ ಕೋಟಿ ಸಾಲವನ್ನು ನೀಡಿ ೪೨.೦೬ ಲಕ್ಷಕ್ಕೂ ಮಿಕ್ಕಿ ಲಾಭಗಳಿಸಿ, ಸತತ ೭ ವರ್ಷಗಳಿಂದ ೧೦೦% ಸಾಲ ವಸೂಲಾತಿ ಮಾಡಿರುವುದು ನಮ್ಮ ಸಂಘಕ್ಕೆ ಹೆಮ್ಮೆಯ ವಿಷಯವಾಗಿದ್ದು, ಸಂಘದ ಲೆಕ್ಕ ಪರಿಶೋಧನಾ ವರದಿಯಲ್ಲಿ ಸತತ ೧೦ ವರ್ಷಗಳಿಂದ ಸಂಘವು “ಅ” ದರ್ಜೆ ಪಡೆದಿದೆ ಎಂದರು. ಸಂಘದ ವತಿಯಿಂದ ಆಶಾ ಕಾರ್ಯಕರ್ತೆಯರಿಗೆ ಹಾಗೂ ಫಲಾನುಭವಿಗಳಿಗೆ ಅಗತ್ಯ ಪಡಿತರ ಕಿಟ್‌ಗಳನ್ನು ವಿತರಿಸಲಾಗಿದೆ ಎಂದರು.

ಸAಘದ ಉಪಾಧ್ಯಕ್ಷರಾದ ಸುಬ್ರಾಯ ಕಾಮತ ಸಾಂದರ್ಭಿಕವಾಗಿ ಮಾತನಾಡಿ ಸಂಘದ ಮತ್ತಷ್ಟು ಪ್ರಗತಿಗೆ ಸದಸ್ಯರ ಸಹಕಾರವನ್ನು ಕೋರಿದರು. ನಿರ್ದೇಶಕರಾದ ರವೀಂದ್ರ ಪ್ರಭು ಮಾತನಾಡುತ್ತ ಅತೀ ಶೀಘ್ರದಲ್ಲಿ ನಮ್ಮ ಪ್ರಧಾನ ಕಛೇರಿ ಹಾಗೂ ಶಿರಾಲಿ ಶಾಖೆಯನ್ನು ನಮ್ಮ ಸ್ವಂತ ಕಟ್ಟಡಕ್ಕೆ ಸ್ಥಳಾಂತರಿಸಲಾಗುವುದು ಎಂದರು. ನಿರ್ದೇಶಕರಾದ ನರೇಂದ್ರ ನಾಯಕ್ ಮಾತನಾಡುತ್ತ ಇತರ ಪತ್ತಿನ ಸಂಘಗಳಿಗೆ ಹೋಲಿಸಿದಲ್ಲಿ ಗ್ರಾಹಕರಿಗೆ ನಾವು ಅತೀ ಕಡಿಮೆ ಬಡ್ಡಿದರದಲ್ಲಿ ಸಾಲವನ್ನು ನೀಡುತ್ತಾ ಉತ್ತಮ ಸೇವೆಯನ್ನು ನೀಡುತ್ತಿದ್ದೇವೆ ಎಂದರು. ಹಿರಿಯ ಸದಸ್ಯರಾದ ಡಿ.ಜೆ. ಕಾಮತ ಮಾತನಾಡಿ ಸಂಘದ ಲಾಭದಲ್ಲಿ ಸದಸ್ಯರು ಪಾಲುದಾರರಾಗಿರುತ್ತಾರೆ ಎನ್ನುತ್ತ ಸಂಘವು ಮತ್ತಷ್ಟು ಪ್ರಗತಿಪಥದತ್ತ ದಾಪುಗಾಲು ಹಾಕಲಿ ಎಂದು ಹಾರೈಸಿದರು. ಸಂಘದ ನಿರ್ದೇಶಕರಾದ ನಾಗೇಶ ಪೈ ವಂದನಾರ್ಪಣೆಗೈದರು. ಭಟ್ಕಳ ಶಾಖೆಯ ಪ್ರಬಂಧಕರಾದ ಪ್ರಸನ್ನ ಪ್ರಭುರವರು ಕಾರ್ಯಕಲಾಪವನ್ನು ನಿರ್ವಹಿಸಿದರು.

error: