April 19, 2024

Bhavana Tv

Its Your Channel

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಚಿಗುರು ಕಾರ್ಯಕ್ರಮ

ಶಿರಾಲಿಯ ಶ್ರೀ ಮಾರುತಿ ದೇವಸ್ಥಾನದ ಸಭಾಗ್ರಹದಲ್ಲಿ ಕಾರವಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಚಿಗುರು ಕಾರ್ಯಕ್ರಮ ಜರುಗಿತು. ಮಕ್ಕಳಿಂದ ಮಕ್ಕಳಿಗಾಗಿ ಆಯೋಜಿಸಿದ್ದ ಈ ಕಾರ್ಯಕ್ರಮವನ್ನು ಶಾಸಕರಾದ ಸುನೀಲ್ ನಾಯ್ಕ ಕಲಾಪ್ರದರ್ಶನ ನೀಡಲುಬಂದ ಮಕ್ಕಳೊಂದಿಗೆ ಉದ್ಘಾಟಿಸಿದರು.

ನಂತರ ಅವರು ಮಾತನಾಡುತ್ತ ಸರಕಾರವು ಕನ್ನಡ ಸಂಸ್ಕೃತಿ ಇಲಾಕೆಯ ಮೂಲಕ ಕಲೆಗೆ ಉತ್ತಮ ಪ್ರೋತ್ಸಾಹ ನೀಡುತ್ತಿದೆ,ಲಲಿತಕಲೆಗಳು ನಾಲ್ಕುಗೋಡೆಯ ಮದ್ಯ ಇರದೆ ವೇದಿಕೆಯ ಮೇಲೆ ಪ್ರದರ್ಶಿತವಾಗಬೇಕು ಎಂದರು.
ಚಿಗುರು ಕಾರ್ಯಕ್ರಮದ ಸಂಯೋಜಕರಾದ ಝೇಂಕಾರ್ ಸಂಸ್ಥೆಯ ಅಧ್ಯಕ್ಷರಾದ ಪ್ರಸನ್ನ ಪ್ರಭು ಮಾತನಾಡುತ್ತ ಕಲಾ ಕುಸುಮಗಳು ಅರಳಬೇಕಾದರೆ ಪಾಲಕರ ಪ್ರೋತ್ಸಾಹ ಅತ್ಯಗತ್ಯ ಎಂದು ಅಭಿಪ್ರಾಯ ಪಟ್ಟರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಉದ್ಯಮಿ ಡಿ.ಜೆ.ಕಾಮತ್ ಮಕ್ಕಳು ತಮ್ಮ ಸಮಯವನ್ನು ಶಾಲಾ ಶಿಕ್ಷಣಕ್ಕೆ ಮಾತ್ರ ಮೀಸಲಾಗಿಡದೆ ಬದುಕಿನ ಮೌಲ್ಯವನ್ನು ಕಲಿಸುವ ಇನ್ನಿತರ ಕಲಾತ್ಮಕ ಚಟುವಟಿಕಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು. ಪ್ರಾರಂಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಕೆಯ ಉಪ ನಿರ್ದೇಶಕರಾದ ಎನ್ ಜಿ ನಾಯಕರು ಸ್ವಾಗತಿಸಿ ಮಾತನಾಡುತ್ತ ಕಲೆಯನ್ನು ಬೆಳೆಸಲು ಕೈಜೋಡಿಸುವಂತೆ ಕರೆ ನೀಡಿ ಕಲಾವಿದರನ್ನು ಶುಭಹಾರೈಸಿದರು. ಶಿರಾಲಿ ಗ್ರಾಮಪಂಚಾಯತ ಅಧ್ಯಕ್ಷರಾದ ಶ್ರೀಮತಿ ರೇವತಿ ನಾಯ್ಕ ಸಭಾಧ್ಯಕ್ಷತೆ ವಹಿಸಿ ಮಾತನಾಡಿ ಈ ಕಾರ್ಯಕ್ರಮ ನಮ್ಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆಯುತ್ತಿರುವದು ಸಂತಸದ ವಿಷಯ ಎನ್ನುತ್ತಾ ಮಕ್ಕಳು ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೋಗದಂತೆ ಕರೆನೀಡಿದರು. ಕಲಾಶಿಕ್ಷಕ ಸಂಜಯ ಗುಡಿಗಾರ ವಂದನಾರ್ಪಣೆ ಗೈದು ಕಾರ್ಯಕ್ರಮ ನಿರೂಪಿಸಿದರು.ನಂತರ ಮಕ್ಕಳ ವಿವಿಧ ಕಲಾತಂಡ ದವರಿಂದ ಶಾಸ್ತ್ರೀಯ ನ್ರತ್ಯ ರೂಪಕ, ಶಾಸ್ತ್ರೀಯ ಸಂಗೀತ, ಸುಗಮಸಂಗೀತ, ಎಕಪಾತ್ರಾಭಿನಯ,ಜಾನಪದ ಗೀತೆಗಳ ಕಾರ್ಯ ಕ್ರಮ ಮನೋಜ್ಞವಾಗಿ ಮೂಡಿಬಂದವು. ಮಕ್ಕಳು ಪ್ರದರ್ಶಿಸಿದ ಯಕ್ಷಗಾನ ವೀರ ವ್ರಷಸೇನಾ ಸಭಿಕರ ಪ್ರಶಂಸೆಗೆ ಪಾತ್ರವಾಯಿತು.

error: