April 25, 2024

Bhavana Tv

Its Your Channel

ಭಟ್ಕಳ ತಾಲೂಕ ಮಟ್ಟದ ಕ್ರೀಡಾಕೂಟದಲ್ಲಿ ಸ.ಮಾ.ಹಿ.ಪ್ರಾ.ಶಾಲೆ ಚಿತ್ರಾಪುರ, ವೈಯಕ್ತಿಕ ಹಾಗೂ ಗುಂಪು ಆಟಗಳಲ್ಲಿ ಉತ್ತಮ ಪ್ರದರ್ಶನ

ಶಿರಾಲಿ: ಸೋಮವಾರ ಸ.ಪ್ರೌಢ ಶಾಲೆ ಗೊರಟೆ ಮೈದಾನದಲ್ಲಿ ನಡೆದ ಭಟ್ಕಳ ತಾಲೂಕ ಮಟ್ಟದ ಕ್ರೀಡಾಕೂಟದಲ್ಲಿ ಸ.ಮಾ.ಹಿ.ಪ್ರಾ.ಶಾಲೆ ಚಿತ್ರಾಪುರ, ವೈಯಕ್ತಿಕ ಹಾಗೂ ಗುಂಪು ಆಟಗಳಲ್ಲಿ ಉತ್ತಮ ಪ್ರದರ್ಶನ ತೋರುವುದರ ಮೂಲಕ ತಾಲೂಕ ಸಮಗ್ರ ವೀರಾಗ್ರಣಿ ಮುಡಿಗೇರಿಸಿಕೊಂಡಿದೆ.

ಶಾಲೆಯ ವಿದ್ಯಾರ್ಥಿನಿ ದೀಕ್ಷೀತಾ ಗಣಪತಿ ನಾಯ್ಕ 600 ಮೀ ಓಟ, 400 ಮೀ ಓಟ, ಹಾಗೂ 80 ಮೀಟರ್ ಹರ್ಡಲ್ಸ್ ನಲ್ಲಿ ಪ್ರಥಮ ಸ್ಥಾನ ಪಡೆಯುವುದರೊಂದಿಗೆ ಭಟ್ಕಳ ತಾಲೂಕ ವೀರಾಗ್ರಣಿ ಬಾಲಕಿ ಆಗಿ ಹೊರಹೊಮ್ಮಿದ್ದಾಳೆ.

ಶಾಲೆಯ ವಿದ್ಯಾರ್ಥಿಗಳಾದ ಕರುಣ ನಾಯ್ಕ 400 ಮೀಟರ್ ಓಟ ಪ್ರಥಮ, 600 ಮೀ ಓಟ ದ್ವಿತೀಯ ಸ್ಥಾನ, ರಶ್ಮೀಕಾ ಗಣಪತಿ ದೇವಡಿಗ 400 ಮೀಟರ್ ಓಟ ದ್ವಿತೀಯ, 80 ಮೀಟರ್ ಹರ್ಡಲ್ಸ್ ದ್ವಿತೀಯ ,100 ಮೀಟರ ಓಟ ತೃತೀಯ, ಹಾಗೂ ಭರತ್ ನಾಯ್ಕ 80 ಮೀಟರ್ ಹರ್ಡಲ್ಸ್ ದ್ವಿತೀಯ, ಚೇತನ ನಾಯ್ಕ 80 ಮೀಟರ್ ಹರ್ಡಲ್ಸ್ ತೃತೀಯ ಸ್ಥಾನ ಪಡೆದಿರುತ್ತಾರೆ.

ಗುಂಪು ಆಟಗಳು:– ಗಂಡು ಮಕ್ಕಳ ಖೋ ಖೋ ಪ್ರಥಮ, ಹೆಣ್ಣು ಮಕ್ಕಳ ಖೋ ಖೋ ಪ್ರಥಮ. ಬಾಲಕಿಯರ ಥ್ರೋಬಾಲ್ ದ್ವಿತೀಯ ಸ್ಥಾನ ಪಡೆದಿರುತ್ತಾರೆ.

ವಿದ್ಯಾರ್ಥಿಗಳಿಗೆ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ರಾಮದಾಸ ಆಗೇರ ತರಬೇತಿ ನೀಡಿದ್ದರು. ಈ ಹಿಂದೆ ತೆಂಗನಗುAಡಿ ಕ್ರೀಡಾಂಗಣದಲ್ಲಿ ಶಿರಾಲಿ ವಲಯ ಮಟ್ಟದ ಕ್ರೀಡಾಕೂಟದಲ್ಲೂ ಚಿತ್ರಾಪುರ ಶಾಲೆ ಸತತ 5 ನೇ ಬಾರಿ ಸಮಗ್ರ ವೀರಾಗ್ರಣಿ ಪಡೆದುಕೊಂಡಿತು.

ಈ ಎಲ್ಲಾ ವಿದ್ಯಾರ್ಥಿಗಳ ಕ್ರೀಡಾ ಸಾಧನೆಗೆ ಶಾಲಾ ಎಸ್.ಡಿ.ಎಮ್.ಸಿಯವರು ಹಾಗೂ ಶಾಲಾ ಮುಖ್ಯಾಧ್ಯಾಪಕರು ಹಾಗೂ ಶಿಕ್ಷಕ ವೃಂದದವರು ಅಭಿನಂದನೆ ಸಲ್ಲಿಸಿರುತ್ತಾರೆ.

error: