April 23, 2024

Bhavana Tv

Its Your Channel

ಶಿರಾಲಿ ಗ್ರಾಮ ಪಂಚಾಯತ ವ್ಯಾಪ್ತಿಯ ಗ್ರಾಮಗಳಲ್ಲಿ ಸ್ವಚ್ಚತಾ ಹೀ ಸೇವಾ ಆಂದೋಲನ”

ಭಟ್ಕಳ ತಾಲೂಕಿನ ಶಿರಾಲಿ ಗ್ರಾಮ ಪಂಚಾಯತ ವ್ಯಾಪ್ತಿಯ ಗ್ರಾಮಗಳಲ್ಲಿ ಸಂಪೂರ್ಣ ಸ್ವಚ್ಛತೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ದಿನಾಂಕ: 15/09/2022 ರಿಂದ 02/10/2022 ರವರೆಗೆ ಘನಸರ್ಕಾರದ ಸ್ವಚ್ಛತಾ ಹೀ ಸೇವಾ ಆಂದೋಲನ ವನ್ನು ಹಮ್ಮಿಕೊಂಡಿದ್ದು, ದಿನಾಂಕ: 23/09/2022 ಶುಕ್ರವಾರದಂದು ಶಿರಾಲಿ ಬಾಜಾರದಿಂದ ಕೋಟೆಬಾಗಿಲ ಕ್ರಾಸವರೆಗೆ ಸ್ವಚ್ಛತೆಯನ್ನು ಮಾಡಲಾಯಿತು ಮುಂಜಾನೆ ಸಮಯ 7-00 ಗಂಟೆಯಿAದ 9-00 ಗಂಟೆಯವರೆಗೆ ಗ್ರಾಮ ಪಂಚಾಯತದ ಅಧ್ಯಕ್ಷರಾದ ರೇವತಿ ರವಿಶಂಕರ ನಾಯ್ಕ , ಪಂಚಾಯತದ ಉಪಾಧ್ಯಕ್ಷರಾದ ಭಾಸ್ಕರ ದೈಮನೆ, ಸದಸ್ಯರುಗಳ ನೇತ್ರತ್ವದೊಂದಿಗೆ ಹಾಗೂ ಭಟ್ಕಳ ತಾಲೂಕಾ ಪಂಚಾಯತದ ಕಾರ್ಯನಿರ್ವಹಣಾಧಿಕಾರಿಗಳಾದ ಪ್ರಭಾಕರ ಚಿಕ್ಕನಮನೆ ಹಾಗೂ ತಾಲೂಕಾ ಪಂಚಾಯತ ಪ್ರಥಮ ದರ್ಜೆ ಸಹಾಯಕರಾದ ಕೃಷ್ಣಕಾಂತ ರವರ ಸಹಭಾಗಿತ್ವದೊಂದಿಗೆ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾದ ಮಹೇಶ ಎಸ್ ನಾಯ್ಕ ರವರ ನಿರ್ದೇಶನದೊಂದಿಗೆ ತುಂಬಾ ಅಚ್ಚುಕಟ್ಟಾಗಿ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು,

ಶಿರಾಲಿ ಕೋಟೆಬಾಗಿಲ ಕ್ರಾಸ್ ನಲ್ಲಿ ರಾಷ್ಟ್ರೀಯ ಹೆದ್ದಾರಿ ಇಕ್ಕೆಲಗಳಲ್ಲಿ ಅಗಾಧವಾಗಿ ಬಿದ್ದಿರುವ ಕಸದ ರಾಶಿಯನ್ನು ಪಂಚಾಯತದ ವಾಹನದಲ್ಲಿ ಸಾಗಿಸಿ ಪಂಚಾಯತದ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಸಂಗ್ರಹಿಸಲಾಯಿತು, ಸ್ವಚ್ಛತಾ ಹೀ ಸೇವಾ ಘೋಷದೊಂದಿಗೆ ಶಿರಾಲಿ ಬಾಜಾರದಲ್ಲಿ ಪಥಸಂಚಲನವನ್ನು ಮಾಡಲಾಯಿತು ಹಾಗೂ ಹತ್ತಿರದ ಗುಮ್ಮನಹತ್ಕಲ ಮಜಿರೆಯಲ್ಲಿಯ ಅಂಗಡಿ ಹಾಗೂ ಮನೆಗಳಿಗೆ ತೆರಳಿ ಸ್ವಚ್ಛತೆಯ ಬಗ್ಗೆ ತಿಳಿಸಿಹೇಳಲಾಯಿತು. ಹಾಗೂ ಒಣಕಸವನ್ನು ಸಂಗ್ರಹಿಸಲು ಡಸ್ಟ್ ಬಿನ್ ಗಳನ್ನು ವಿತರಿಸಲಾಯಿತು. ಹಾಗೂ ಸಾರ್ವಜನಿಕರಲ್ಲಿ ಸ್ವಚ್ಛತೆಯ ಬಗ್ಗೆ ಹಾಗೂ ಒಣಕಸ ಮತ್ತು ಹಸಿಕಸವನ್ನು ಬೇರ್ಪಡಿಸಿ, ಒಣಕಸವನ್ನು ಸಂಗ್ರಹಿಸಿ ಪಂಚಾಯತ ವಾಹನ ಬಂದಾಗ ನೀಡಬೇಕು ಎಂದು ಹಾಗೂ ಹಸಿ ಕಸವನ್ನು ಮನೆಯ ಹಿತ್ತಲಿನಲ್ಲಿ ವಿಲೇವಾರಿ ಮಾಡುವ ಬಗ್ಗೆ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ತಿಳಿಸಿ ಹೇಳಿದರು,

‘ಸ್ವಚ್ಚತಾ ಹೀ ಸೇವಾ ಆಂದೋಲನ” ಬಗ್ಗೆ ನಮ್ಮ ಪಂಚಾಯತ ಇನ್ನೂ ಹೆಚ್ಚಿನ ಮುತುವರ್ಜಿ ವಹಿಸಿ ಶಿರಾಲಿ ಭಾಗವನ್ನು ಸ್ವಚ್ಛವಾಗಿರಿಸಲು ಪ್ರಯತ್ನಿಸಿ ಆ ಬಗ್ಗೆ ಕ್ರಮವಹಿಸಿ ಎಂದು ಅಧ್ಯಕ್ಷರು ಹೇಳಿದರು.

ಭಟ್ಕಳ ತಾಲೂಕಾ ಪಂಚಾಯತದ ಕಾರ್ಯನಿರ್ವಹಣಾಧಿಕಾರಿಗಳಾದ ಶ್ರೀ ಪ್ರಭಾಕರ ಚಿಕ್ಕನಮನೆಯವರು ಘನಸರ್ಕಾರದ ‘ಸ್ವಚ್ಚತಾ ಹೀ ಸೇವಾ ಆಂದೋಲನ’ದ ಬಗ್ಗೆ ಮಾತನಾಡಿದರು ಹಾಗೂ ಸರ್ವರೊಂದಿಗೆ ಸ್ವಚ್ಛತೆಯ ಬಗ್ಗೆ ತಿಳಿಸಿ ಹೇಳಲು ಮತ್ತು ಡಸ್ಟ್ ಬಿನ್ ವಿತರಿಸುವಲ್ಲಿ ಭಾಗಿಯಾದರು.

ಸ್ವಚ್ಚತಾ ಹೀ ಸೇವಾ ಆಂದೋಲನದಲ್ಲಿ ಪಂಚಾಯತದ ಸದಸ್ಯರೊಂದಿಗೆ, ಪಂಚಾಯತ ಕಾರ್ಯದರ್ಶಿಯವರು, ಪಂಚಾಯತ ದ್ವಿ.ದ.ರಕ್ಕಸಹಾಯಕರು, ಪಂಚಾಯತ ಸಿಬ್ಬಂಧಿಗಳು, ಪಂಚಾಯತದ ಸ್ವಾಮಿ ವಿವೇಕಾನಂದ ಯುವಕಮಂಡಳದ ಪದಾಧಿಕಾರಿಗಳು, ಸಂಜೀವಿನಿ ಒಕ್ಕೂಟದ ಸದಸ್ಯರು ಸಿಬ್ಬಂಧಿಗಳು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಮೀಡಿಯಾದವರು ಭಾಗಿಯಾಗಿದ್ದರು.

error: