April 20, 2024

Bhavana Tv

Its Your Channel

ನೀರು ಅತ್ಯಮೂಲ್ಯವಾಗಿದ್ದು ನೀರಿನ ಮಿತಬಳಕೆಯ ಬಗ್ಗೆ ವಿದ್ಯಾರ್ಥಿಗಳಿಗೆ ಗಮನ ಹರಿಸಬೇಕು -ಸದಾಶಿವ ಆಚಾರ್ಯ ಕುಂದಾಪುರ

ಶಿರಾಲಿ:-ನೀರು ಅತ್ಯಮೂಲ್ಯವಾಗಿದ್ದು ನೀರಿನ ಮಿತಬಳಕೆಯ ಬಗ್ಗೆ ವಿದ್ಯಾರ್ಥಿಗಳಿಗೆ ಗಮನ ಹರಿಸಬೇಕೆಂದು ಸಿಂಡಿಕೇಟ್ ಬ್ಯಾಂಕ್ ನ ನಿವೃತ್ತ ವ್ಯವಸ್ಥಾಪಕರಾದ ಸದಾಶಿವ ಆಚಾರ್ಯಕುಂದಾಪುರ ಹೇಳಿದರು.

ಬೆಳ್ಕೆಯ ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲೆಯ ವಿಜ್ಞಾನ ಪ್ರಯೋಗ ಶಾಲೆಗೆ ಈ ಹಿಂದೆ ಅಪಾರ ಕೊಡುಗೆ ನೀಡಿದ ಅವರು, ಈಗ ಗ್ರಾಮೀಣ ವ್ಯವಸಾಯ ಸಹಕಾರಿ ಸಂಘ ನಿಯಮಿತ ಬೆಳ್ಕೆ, ಮಂಜುನಾಥ ಎಲ್. ನಾಯ್ಕ ಅಧ್ಯಕ್ಷರು, ಗ್ರಾಮೀಣ ವ್ಯವಸಾಯ ಸಹಕಾರಿ ಸಂಘ ನಿಯಮಿತ ಬೆಳ್ಕೆ ಇವರ ಜೊತೆಗೂಡಿ ಪ್ರಾಯೋಜಿಸಿದ ಕುಡಿಯುವ ನೀರಿನಘಟಕವನ್ನು ಉದ್ಘಾಟಿಸಿ ಮಾತನಾಡಿದರು.
ಅತಿಥಿಗಳಾದ ಮಂಜುನಾಥ ನಾಯ್ಕ ಮಾತನಾಡುತ್ತಾ ವಿದ್ಯಾರ್ಥಿಗಳು ತಮಗೆ ಮಾಡಿಕೊಟ್ಟ ವ್ಯವಸ್ಥೆಯ ಸದುಪಯೋಗವನ್ನು ಪಡೆದುಕೊಂಡು ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಪ್ರಗತಿಯನ್ನು ತೋರಿಸಬೇಕೆಂದು ಹೇಳಿದರು. ಅಧ್ಯಕ್ಷತೆ ವಹಿಸಿದ ಮುಖ್ಯಾಧ್ಯಾಪಕರಾದ ಶಾಲಿನಿ ನಾಯಕ ಮಾತನಾಡುತ್ತಾ ಶುದ್ಧ ನೀರಿನಘಟಕದ ಕಾರಣೀಕರ್ತರಾದ ದಾನಿಗಳ ಸಹಕಾರವನ್ನು ಸ್ಮರಿಸಿ, ಘಟಕವನ್ನು ಪ್ರಾರಂಬಿಸುವಲ್ಲಿ ಅವಿರತವಾಗಿ ಶ್ರಮಿಸಿದ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಪ್ರಕಾಶ ಶಿರಾಲಿ ಅವರ ಕಾರ್ಯಕ್ಕೆ ಪ್ರಶಂಸೆಯನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಗ್ರಾಮೀಣ ವ್ಯವಸಾಯ ಸಹಕಾರಿ ಸಂಘ ದ ಪ್ರಧಾನ ವ್ಯವಸ್ಥಾಪಕರಾದ ಶ್ರೀ ಅಣ್ಣಪ್ಪ ನಾಯ್ಕ, ನಿರ್ದೇಶಕರಾದ ಶ್ರೀ ವೆಂಕಟೇಶ ನಾಯ್ಕ, ಶ್ರೀ ಕೃಷ್ಣ ನಾಯ್ಕ, ಸರ್ಕಾರಿ ಪ್ರೌಢಶಾಲೆಯ ಉಪಾಧ್ಯಕ್ಷರಾದ ಶ್ರೀ ಲೋಕೇಶ ನಾಯ್ಕ ಹಾಗೂ ಶ್ರೀಮತಿ ಶಶಿಕಲಾ ಸದಾಶಿವ ಉಪಸ್ಥಿತರಿದ್ದರು.
ದೈಹಿಕ ಶಿಕ್ಷಣ ಶಿಕ್ಷಕ ಪ್ರಕಾಶ ಶಿರಾಲಿ ಎಲ್ಲರನ್ನು ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಿಸಿದರು.

error: