December 6, 2022

Bhavana Tv

Its Your Channel

ಪ್ರೌಢ ಶಾಲೆಯ ಜಿಲ್ಲಾ ಮಟ್ಟದ ಇಲಾಖಾ ಕ್ರೀಡಾ ಕೂಟದಲ್ಲಿ ಶಿರಾಲಿ ಜನತಾ ವಿದ್ಯಾಲಯದ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆಯೊಂದಿಗೆ ರಾಜ್ಯ ಮಟ್ಟಕ್ಕೆ ಆಯ್ಕೆ

ಶಿರಾಲಿ: ಹೊನ್ನಾವರದ ಎಸ್ ಡಿ ಎಂ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆದ 2022-23 ನೇ ಸಾಲಿನ ಪ್ರೌಢ ಶಾಲೆಯ ಜಿಲ್ಲಾ ಮಟ್ಟದ ಇಲಾಖಾ ಕ್ರೀಡಾ ಕೂಟದಲ್ಲಿ ಶಿರಾಲಿ ಜನತಾ ವಿದ್ಯಾಲಯದ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆಯೊಂದಿಗೆ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಕುಮಾರ ಧನುಷ ಮೋಹನ ನಾಯ್ಕ 3000ಮೀ, 1500ಮೀ, 800ಮೀ .ಓಟದಲ್ಲಿ ಪ್ರಥಮ ಸ್ಥಾನ ಪಡೆದು ವೈಯಕ್ತಿಕ ವೀರಾಗ್ರಣಿ ಪಡೆದು ಕೊಂಡಿರುತ್ತಾನೆ.

ಕು. ವರ್ಷಾ ಎನ್ ನಾಯ್ಕ 3 ಕಿ.ಮೀ.ನಡಿಗೆ ಪ್ರಥಮ. ಕು. ಅರ್ಪಿತಾ ಎಸ್ ದೇವಾಡಿಗ 3 ಕಿ.ಮೀ.ನಡಿಗೆ ದ್ವಿತೀಯ , ಕು. ನವೀನ ಎಲ್ ದೇವಾಡಿಗ 5 ಕಿ.ಮೀ.ನಡಿಗೆ ದ್ವಿತೀಯ, ಕು. ಇಂದಿರಾ ಎಂ ಗೊಂಡ.3000 ಮೀ.ಓಟದಲ್ಲಿ ದ್ವಿತೀಯ, ಪಡೆದು ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.

ಇವರಿಗೆ ತರಬೇತಿಯನ್ನು ನೀಡಿದ ದೈಹಿಕ ಶಿಕ್ಷಣ ಶಿಕ್ಷಕರಾದ ಅರುಣ ಗೌಡ ಹಾಗೂ ಸಾಧನೆಗೈದ ವಿದ್ಯಾರ್ಥಿಗಳಿಗೆ
ಆಡಳಿತ ಮಂಡಳಿ ಕೆನರಾ ವೆಲ್ ಫೇರ್ ಟ್ರಸ್ಟ್ ಅಂಕೋಲ, ಶಾಲಾಭಿವೃದ್ಧಿ ಸಮಿತಿ ಹಾಗೂ ಪೂರ್ವ ವಿದ್ಯಾರ್ಥಿಗಳ ಪರಿವಾರದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಮುಖ್ಯಾಧ್ಯಾಪಕ ರು ಹಾಗೂ ಸಿಬ್ಬಂದಿ ವರ್ಗ ಮತ್ತು ಊರು ನಾಗರಿಕರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

About Post Author

error: