April 20, 2024

Bhavana Tv

Its Your Channel

ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದು-ವೆoಕಟೇಶ ದೇಶಪಾಂಡೆ

ಶಿರಾಲಿ:-ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದು. ಶಿಕ್ಷಣದಿಂದ ಮಾತ್ರ ಮುಂದಿನ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ ಎಂದು ರೋಟರಿ ಡಿಸ್ಟ್ರಿಕ್ಟ್ ಗವರ್ನರ್ ವೆಂಕಟೇಶ ದೇಶಪಾಂಡೆ ಹೇಳಿದರು.

ಅವರು ಬೆಳಕೆಯ ಸರ್ಕಾರಿ ಪ್ರೌಢಶಾಲೆ, ಎನ್‌ಎಸ್‌ಎಸ್ ಘಟಕ, ರೋಟರಿ ಕ್ಲಬ್ ಭಟ್ಕಳ ಇವರ ಸಂಯುಕ್ತ ಆಶ್ರಯದಲ್ಲಿ ಇನ್ಸಿನರೇಟರ್( ಸ್ಯಾನಿಟರಿ ಪ್ಯಾಡ್ ಬರ್ನಿಂಗ್ ಮಸೀನ್) ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಭಟ್ಕಳ ರೋಟರಿ ಕ್ಲಬ್ ವತಿಯಿಂದ ವಿದ್ಯಾರ್ಥಿನೀಯರ ಉಪಯೋಗಕ್ಕಾಗಿ ಇನ್ಸಿಲೇಟರ್( ಸ್ಯಾನಿಟರಿ ಪ್ಯಾಡ್ ಬರ್ನಿಂಗ್ ಮಸೀನ್) ಅನ್ನು ಬೆಳಕೆ ಪ್ರೌಢಶಾಲೆಗೆ ದೇಣಿಗೆಯಾಗಿ ನೀಡಿದರು. ಹೆಸ್ಕಾಂನ ಇಂಜಿನಿಯರ್ ಶಿವಾನಂದ ನಾಯ್ಕ ಮಾತನಾಡಿ ಇದೊಂದು ಉತ್ತಮ ಕಾರ್ಯ ಹಾಗೆಯೇ ರೋಟರಿ ಕ್ಲಬ್ ಗ್ರಾಮೀಣ ಭಾಗದ ಶಾಲೆಗಳನ್ನು ದತ್ತು ಪಡೆದು ಮೂಲಭೂತ ಸೌಲಭ್ಯ, ಶೈಕ್ಷಣಿಕ ಸೌಲಭ್ಯಗಳನ್ನು ಒದಗಿಸಿ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಒದಗಿಸಲು ಸಹಕರಿಸುವಂತೆ ಮನವಿ ಮಾಡಿದರು .ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶಾಲೆಯ ಮುಖ್ಯಾಧ್ಯಾಪಕರಾದ ಶಾಲಿನ ನಾಯಕ ಮಾತನಾಡಿ ರೋಟರಿ ಕ್ಲಬ್ ನ ಈ ಸಹಕಾರ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಆರೋಗ್ಯದ ದೃಷ್ಟಿಯಿಂದ ತುಂಬಾ ಅನುಕೂಲಕರವಾಗಿದೆ ಎಂದರು. ಹಾಗೂ ಶಾಲೆಯ ಇನ್ನಿತರ ಸೌಲಭ್ಯದ ಬಗ್ಗೆ ರೋಟರಿ ಕ್ಲಬ ಅಧ್ಯಕ್ಷರಾದ ಶ್ರೀನಿವಾಸ ಪಡಿಯಾರ ಅವರಿಗೆ ಮನವಿ ಪತ್ರವನ್ನು ನೀಡಿದರು.

ಈ ಸಂದರ್ಬದಲ್ಲಿ ರೋಟರಿಯ ಅನಂತ ಮೂರ್ತಿ, ರೋಟರಿ ಅಧ್ಯಕ್ಷ ಶ್ರೀನಿವಾಸ ಪಡಿಯಾರ, ಕಾರ್ಯದರ್ಶಿ ರಾಜೇಶ ನಾಯ್ಕ, ಡಾ.ಗೌರೀಶ ಪಡುಕೋಣೆ, ಪ್ರಶಾಂತ ಕಾಮತ, ಎಸ್‌ಡಿಎಂಸಿ ಅಧ್ಯಕ್ಷ ಹೊನ್ನಪ್ಪ ನಾಯ್ಕ, ಉಪಾಧ್ಯಕ್ಷರಾದ ಲೋಕೇಶ ನಾಯ್ಕ, ಇದ್ದರು. ಎನ್‌ಎಸ್‌ಎಸ್ ಘಟಕದ ಕಾರ್ಯಕ್ರಮಾಧಿಕಾರಿ ಪ್ರಕಾಶ ಶಿರಾಲಿ ಪ್ರಾಸ್ತಾವಿಕ ಮಾತನಾಡಿ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು . ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳು ರೋಟರಿ ಸದಸ್ಯರು ಇದ್ದರು

error: