April 20, 2024

Bhavana Tv

Its Your Channel

ಡಿ. 10-11 ಶಿರಸಿಯಲ್ಲಿ ರಾಜ್ಯ ಮಟ್ಟದ ಬೃಹತ್ ಅರಣ್ಯವಾಸಿಗಳ ರ‍್ಯಾಲಿ.

ಸಿದ್ಧಾಪುರ: ಅರಣ್ಯವಾಸಿಗಳ ಸಮಸ್ಯೆ ಸಮಗ್ರಕ್ರೂಢೀಕರಿಸಿ ಅರಣ್ಯವಾಸಿಗಳ ಹಿತ ಕಾಪಾಡುವ ಮತ್ತುಭೂಮಿ ಹಕ್ಕಿಗೆ ಅಗ್ರಹಿಸಿ ಡಿಸೆಂಬರ್ 10 ಮತ್ತು11 ರಂದು ಶಿರಸಿಯಲ್ಲಿ ರಾಜ್ಯಮಟ್ಟದ ಬೃಹತ್ ಅರಣ್ಯವಾಸಿಗಳ ರ‍್ಯಾಲಿ ಸಂಘಟಿಸಲಾಗಿದೆ ಎಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.
ಅವರು ದಿ. 12 ರಂದು ಸಿದ್ಧಾಪುರ ತಾಲೂಕಿನ ಹಲಗೇರಿ ಗ್ರಾಮ ಪಂಚಾಯತ ವ್ಯಾಪ್ತಿ ಬಸವೇಶ್ವರಿ ದೇವಾಲಯದ ಆವರಣದಲ್ಲಿ ಜರುಗಿದ ಅರಣ್ಯವಾಸಿಗಳ ಜಾಗೃತ ಕಾರ್ಯಗಾರದಲ್ಲಿ ಅರಣ್ಯವಾಸಿಗಳನ್ನ ಉದ್ದೇಶಿಸಿ ಮಾತನಾಡುತ್ತಿದ್ದರು.

ಅರಣ್ಯವಾಸಿಗಳ ಸಮಸ್ಯೆಗಳಿಗೆ ಕಾನೂನಾತ್ಮಕ ಪರಿಹಾರ ನೀಡುವಲ್ಲಿ ಉಂಟಾದ ವೈಫಲ್ಯದಿಂದ ಇಂದು ಅರಣ್ಯವಾಸಿಗಳು ಅತಂತ್ರರಾಗುವ ಸಂದರ್ಭ ಬಂದೊದಗಿದೆ. ಸಂಘಟನಾತ್ಮಕ ಮತ್ತು ಕಾನೂನಾತ್ಮಕ ಹೋರಾಟ ಮುಂದುವರೆಸಲಾಗುವುದು ಎಂದು ಅವರು ಹೇಳಿದರು.

ಸಮಸ್ಯೆಗಳ ಸರಮಾಲೆ:
ಅರಣ್ಯ ಹಕ್ಕು ಕಾಯಿದೆ ಜ್ಯಾರಿಯಾಗಿ 15 ವರ್ಷಗಳಾದರೂ ಅನುಷ್ಠಾನದಲ್ಲಿ ವೈಫಲ್ಯ, ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆ, ಅರಣ್ಯಾಧಿಕಾರಿಗಳ ದೌರ್ಜನ್ಯ, ಕಿರುಕುಳ, ಮಾನಸಿಕ ಹಿಂಸೆ ಮುಂದುವರಿಕೆ, ಒಕ್ಕಲೆಬ್ಬಿಸಲು ನಿರಂತರ ಕಾನೂನು ಪ್ರಕ್ರೀಯೆ ಹೀಗೆ ಅರಣ್ಯವಾಸಿಗಳು ನಿರಂತರ ಸಮಸ್ಯೆಗಳ ಸರಮಾಲೆಯನ್ನು ಏದುರಿಸುತ್ತಿದ್ದಾರೆ ಎಂದು ರವೀಂದ್ರ ನಾಯ್ಕ ಹೇಳಿದರು.

ಸಭೆಯಲ್ಲಿಮಾರುತಿ ನಾಯ್ಕ ಪ್ರಾಸ್ತಾವಿಕ ಬಾಷಣ ಮಾಡಿದರು. ಕೃಷ್ಣಪ್ಪ ನಾಯ್ಕ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಜಯಂತ ನಾಯ್ಕ ಹೆಜನಿ, ಲಾರ್ಲ ಲೂಯಿಸ್ ಮಾವಿನಗುಂಡಿ, ಜಗದೀಶ್ ನಾಯ್ಕ ಚಂದ್ರಘಟಕಿ, ರಾಮಕೃಷ್ಣ ನಾಯ್ಕ ಹಲಗೇರಿ, ವಿನಾಯಕ ನಾಯ್ಕ, ವಿ ಆರ್ ನಾಯ್ಕ ಹಲಗೇರಿ, ಪರಮೇಶ್ವರ ಗೌಡ ನಿಪ್ಲಿ, ಜಫಾರಸಾಬ ಹಲಗೇರಿ, ಗೀತಾ ಆಚಾರಿ ಹಲಗೇರಿ, ಅಣ್ಣಪ್ಪ ಗೊಂಡ ಪಡವನಬೈಲ್ ಮುಂತಾದವರು ಮಾತನಾಡಿದರು. ವಿನಾಯಕ ನಾಯ್ಕ ಹಲಸಿನಮನೆ ಸ್ವಾಗತಿಸಿದರು.

error: