April 20, 2024

Bhavana Tv

Its Your Channel

ಸಿದ್ಧಾಪುರದಲ್ಲಿ 10,530 ಅರಣ್ಯವಾಸಿಗಳ ಅರ್ಜಿ; ಅರಣ್ಯ ಹಕ್ಕು ನೀಡುವಲ್ಲಿ ಜನಪ್ರತಿನಿಧಿಗಳು ಬದ್ಧತೆ ಪ್ರದರ್ಶಿಸಲಿ – ರವೀಂದ್ರ ನಾಯ್ಕ

ಸಿದ್ಧಾಪುರ: ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಸಿದ್ಧಾಪುರ ತಾಲೂಕಿನಾದ್ಯಂತ 10,530 ಅರಣ್ಯವಾಸಿಗಳು ಅರ್ಜಿ ಸಲ್ಲಿಸಿರುತ್ತಾರೆ. ಅರಣ್ಯ ಭೂಮಿ ಹಕ್ಕು ನೀಡುವಲ್ಲಿ ಜನಪ್ರತಿನಿಧಿಗಳು ಬದ್ಧತೆಯನ್ನು ಪ್ರದರ್ಶಿಸಲಿ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.

ಫೇಬ್ರವರಿ 10 ರಂದು ಅರಣ್ಯವಾಸಿಗಳ ಬೆಂಗಳೂರು ಚಲೋ ಕಾರ್ಯಕ್ರಮದ ಪೂರ್ವಭಾವಿ ಸಭೆಯನ್ನ ಸಿದ್ಧಾಪುರ ತಾಲೂಕಿನ ದೊಡ್ಮನೆ, ವಾಜಗೋಡ, ಕ್ಯಾದಗಿ, ಇಟಗಿ, ಹಲಗೇರಿ, ಬಿದ್ರಕಾನ್, ಕೋಲಸಿರ್ಸಿ, ಕವಂಚೂರು ಮತ್ತು
ಮನಮನೆ ಮುಂತಾದ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಸಂಘಟಿಸಿದ ಸಂದರ್ಭದಲ್ಲಿಮೇಲಿನAತೆ ಹೇಳಿದರು.
ವಾಸ್ತವ್ಯ ಮತ್ತು ಸಾಗುವಳಿಗಾಗಿ ಅರಣ್ಯ ಭೂಮಿಯನ್ನೇ ಅವಲಂಭಿತವಾಗಿರುವ ಅರಣ್ಯವಾಸಿಗಳಿಗೆ ಭೂಮಿ ಹಕ್ಕು ಅನಿವಾರ್ಯ. ಇಲ್ಲದಿದ್ದಲ್ಲಿ ಅರಣ್ಯವಾಸಿಗಳು ನಿರಾಶ್ರಿತರಾಗುತ್ತಾರೆಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಮಾಭ್ಲೇಶ್ವರ ನಾಯ್ಕ ಬೇಡ್ಕಣಿ, ಸುನೀಲ್ ನಾಯ್ಕ ಸಂಪಖAಡ, ಜೆಪಿ ನಾಯ್ಕ ಕಡಕೇರಿ, ಕೃಷ್ಣಪ್ಪನಾಯ್ಕ, ದಿನೇಶ್ ನಾಯ್ಕ ಬೇಡ್ಕಣಿ, ರಾಘು ನಾಯ್ಕ ಕವಂಚೂರು, ವಿದ್ಯಾ ಪ್ರಕಾಶ ನಾಯ್ಕ, ಮಾರುತಿ ನಾಯ್ಕ
ಹಲಗೇರಿ, ಶಾಂತಕುಮಾರ ಪಾಟೀಲ್, ಗೋವಿಂದ ಗೌಡ ಕಿಲ್ಲಾರ, ವಿನಾಯಕ ಮರಾಠಿ ಕೋಡಿಗದ್ದೆ, ಗಣಪತಿ ನಾಯ್ಕ, ಧನಂಜಯ್ ನಾಯ್ಕ ಕೋಡಿಗದ್ದೆ ಮುಂತಾದವರು ಉಪಸ್ಥಿತರಿದ್ದರು.

ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆ:
ಅರಣ್ಯ ಭೂಮಿ ಹಕ್ಕನ್ನು ಪಡೆಯಲು ಅರಣ್ಯ ಹಕ್ಕು ಕಾಯಿದೆಯಿಂದ ಮಾತ್ರ ಸಾಧ್ಯ. ಕಾನೂನಿಗೆ ವ್ಯತಿರಿಕ್ತವಾಗಿ, ಕಾನೂನಿನ ವಿಧಿವಿಧಾನ ಅನುಸರಿಸದೇ ಅರ್ಜಿಗಳು ತೀರಸ್ಕಾರವಾಗುತ್ತಿದ್ದು, ಅರಣ್ಯವಾಸಿಗಳಿಗೆ ಅರಣ್ಯ ಭೂಮಿ ಹಕ್ಕು ನೀಡಲು ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆ ಕಾಣುತ್ತಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

error: