ಸಿದ್ದಾಪುರ:- ಶ್ರೀ ಸಿದ್ಧಿವಿನಾಯಕ ದೇವರು ಮತ್ತು ಶ್ರೀ ಲಕ್ಷ್ಮೀನರಸಿಂಹ ದೇವರ ಅನುಗ್ರಹದೊಂದಿಗೆ ವೇ/ಮೂ ಶ್ರೀಯುತ ವಿನಾಯಕ ಸುಬ್ರಾಯ ಭಟ್ಟ ಮತ್ತೀಹಳ್ಳಿ ಇವರ ದಿವ್ಯ ಉಪಸ್ಥಿತಿಯಲ್ಲಿ , ಉಪೇಂದ್ರ ಪೈ ಸೇವಾ ಟ್ರಸ್ಟ್ ಸಿರಸಿ ಮತ್ತು ಶ್ರೀ ಸಿದ್ಧಿವಿನಾಯಕ ಯಕ್ಷಮಿತ್ರ ಬಳಗ ನಾಣಿಕಟ್ಟಾ(ಶ್ರೀ ನಟರಾಜ ಎಮ್ ಹೆಗಡೆ &ಗೆಳೆಯರ ಬಳಗ)ದವರ ಸಂಯುಕ್ತ ಆಶ್ರಯದಲ್ಲಿ, ಸಮರ್ಥ ಸಂಯೋಜನೆಯಲ್ಲಿ ಕಲಾ ಪೋಷಕರು,ಕಲಾಭಿಮಾನಿಗಳು,ಕಲಾ ಪ್ರೇಮಿಗಳ ಸಂಪೂರ್ಣ ಸಹಕಾರದೊಂದಿಗೆ,ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರ ಸವಿನೆನಪಿನಲ್ಲಿ, ಅವರ ವೇದಿಕೆಯಲ್ಲಿ, ನಾಣಿಕಟ್ಟಾದಲ್ಲಿ (ಸಿರಸಿ-ಸಿದ್ದಾಪುರ ಹೆದ್ದಾರಿ ಪಕ್ಕ )ಫೆಬ್ರವರಿ- ೨೨-೨೦೨೩, ಬುಧವಾರ , ಮುಸ್ಸಂಜೆ ೬-೩೦ ಘಂಟೆಯಿAದ, “ನಾಣಿಕಟ್ಟಾ ಹಬ್ಬ” ಚಿಕ್ಕ ಮಕ್ಕಳಿಂದ ಸಾಂಸ್ಕ್ರತಿಕ ಕಾರ್ಯಕ್ರಮಗಳು,ಭರತನಾಟ್ಯ,ವೈವಿಧ್ಯಮಯ ಕಾರ್ಯಕ್ರಮಗಳು ಪ್ರಾರಂಭದಲ್ಲಿ ಸುಂದರವಾಗಿ ಜರುಗಿತು.
ನಂತರ ರಾತ್ರಿ ೮-೩೦ ರಿಂದ ಸಭಾಕಾರ್ಯಕ್ರಮದಲ್ಲಿ, ದಿವ್ಯ ಉಪಸ್ಥಿತಿಯನ್ನು ವೇ/ಮೂ/ಶ್ರೀ ವಿನಾಯಕ ಸು ಭಟ್ಟ ಮತ್ತೀಹಳ್ಳಿ ವಹಿಸಿದರು . ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ನಮ್ಮ ಸಿರಸಿ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷರಾದ,ಮತ್ತು ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಉಪೇಂದ್ರ ಪೈ ಸಿರಸಿ ಮಾತನಾಡಿ ನಮ್ಮ ಟ್ರಸ್ಟ್ ವತಿಯಿಂದ ಈ ವರ್ಷ ೨೦ ಯಕ್ಷಗಾನ ಕಾರ್ಯಕ್ರಮಗಳನ್ನು ಆಯಾ ಭಾಗಗಳ ಸಮರ್ಥ ಸಂಘಟಕರನ್ನು ಆಯ್ಕೆ ಮಾಡಿ, ಅಂಥವರಿಗೆ ನೀಡಿ, ಅವರ ಸಂಯುಕ್ತ ಆಶ್ರಯದಲ್ಲಿ ಉತ್ತಮ ಕಾರ್ಯಕ್ರಮಗಳನ್ನು ಮಾಡಿಸುವ ಗುರಿ ನನ್ನದಾಗಿದೆ,ಹಾಗೇ ಶಿಕ್ಷಣಕ್ಕೆ, ಆರೋಗ್ಯ ಕ್ಷೇತ್ರಕ್ಕೆ ನಮ್ಮ ಟ್ರಸ್ಟ್ ವತಿಯಿಂದ ಸಹಾಯ-ಸಹಕಾರ ಮಾಡುತ್ತಾ ಇದ್ದೇವೆ, ಸದ್ಯ ನಮ್ಮ ತಾಲೂಕಾದ ಸಿದ್ದಾಪುರದಲ್ಲಿ ಕೆ.ಜಿ ನಾಯ್ಕ ಹಣಜಿಬೈಲ್ ಅವರ ಅಧ್ಯಕ್ಷತೆಯಲ್ಲಿ “ಸಿದ್ದಾಪುರ ಉತ್ಸವ” ಮಾಡಿ ಯಶಸ್ವಿ ಗೊಂಡಿದೆ.ಸೇವಾ ಟ್ರಸ್ಟ್ ವತಿಯಿಂದ ಹೀಗೆ ಹತ್ತು-ಹಲವು ಸೇವಾ ಕಾಯಕ್ರಮಗಳನ್ನು ಮಾಡಿದ್ದೇವೆ ಎಂದು ನುಡಿದರು.
ಅಧ್ಯಕ್ಷತೆಯನ್ನು ಜಿಲ್ಲೆಯ ಉತ್ತಮ ಸೋಸೈಟಿಗಳಲ್ಲೋಂದಾದ ತ್ಯಾಗಲಿ ಸೇವಾ ಸಹಕಾರಿ ಸಂಘದ ದಕ್ಷ ಅಧ್ಯಕ್ಷರಾದ ನಾರಾಯಣ ಬಿ ಹೆಗಡೆ ಮತ್ತೀಹಳ್ಳಿ ವಹಿಸಿ ಮಾತನಾಡಿ, ಅವರು ಸಾಂಸ್ಕೃತಿಕ ಕಲೆ ಯಕ್ಷಗಾನ, ಅದನ್ನು ಉಳಿಸಿ ಬೆಳಸುವಲ್ಲಿ ನಮ್ಮ -ನಿಮ್ಮೇಲ್ಲರ ಕರ್ತವ್ಯ, ಅದಕ್ಕೆ ಕಳೆದ ೧೯- ೨೦ ವರ್ಷಗಳಿಂದ ನಮ್ಮ ಉಪೇಂದ್ರ ಪೈ ಅವರು ತಮ್ಮ ಶ್ರಮ ವಹಿಸಿ ಕಲೆಗೆ ಶಿಕ್ಷಣಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಿ ಬೆಳೆಸುತ್ತಿದ್ದಾರೆ,ನಮ್ಮ ನಾಣಿಕಟ್ಟಾದ ಶ್ರೀ ಸಿದ್ಧಿವಿನಾಯಕ ಯಕ್ಷಮಿತ್ರ ಬಳಗದ ಎಲ್ಲಾ ಸದಸ್ಯರೂ ಸಹ ಯಕ್ಷಗಾನಕ್ಕೆ, ಸಾಂಸ್ಕೃತಿಕ ಕಲೆಗೆ ಒತ್ತು ನೀಡಿ ಪ್ರೋತ್ಸಾಹ ಮಾಡುತ್ತಾ, ಕಾರ್ಯಕ್ರಮ ಸಂಘಟನೆ ಮಾಡುತ್ತಿದ್ದಾರೆ, ನಮ್ಮ ಪ್ರೋತ್ಸಾಹ ಯಾವತ್ತೂ ಇದೆ, ಇಂತಹ ಸಂಘಟನೆಗೆ ಬೆಂಬಲವನ್ನೂ ತಾವೂ ನೀಡಿ ಕಲೆಯನ್ನು ಉಳಿಸಿ-ಬೆಳೆಸಿ ಎಂದು ನುಡಿದರು.
ಮುಖ್ಯ ಅತಿಥಿಯಾಗಿ ಎ.ಜಿ.ನಾಯ್ಕ ಬರಣಿ, ತ್ಯಾಗಲಿ ಗ್ರಾಮ ಪಂಚಾಯತ ಅಧ್ಯಕ್ಷ ಶ್ರೀ ಲಕ್ಷ್ಮೀನಾರಾಯಣ ಎಮ್ ಹೆಗಡೆ ಹೂಡ್ಲಮನೆ, ನಾಣಿಕಟ್ಟಾ ಪದವಿ ಪೂರ್ವ ಕಾಲೇಜಿನ ಪ್ರೀನ್ಸಿಪಾಲರಾದ ನರಹರಿ ಹೆಗಡೆ ಕರ್ಕಿಸವಲ್, ಹಿರಿಯ ಪ್ರಾಥಮಿಕ ತ್ಯಾಗಲಿ ಶಾಲೆ ನಾಣಿಕಟ್ಟಾದ ಅಧ್ಯಕ್ಷ ಗಣೇಶ ನಾಯ್ಕ ನಾಣಿಕಟ್ಟಾ, ಶ್ರೀ ಸಿದ್ಧಿವಿನಾಯಕ ಯಕ್ಷಮಿತ್ರ ಬಳಗದ ಹಿರಿಯರಾದ ಎಮ್ ಎಮ್ ಹೆಗಡೆ ಹಂಗಾರಖAಡ ಸೂರನ್, ಮತ್ತು ಪ್ರಭಾಕರ ಹೆಗಡೆ ಸೂರನ್, ರವೀಂದ್ರ ಗಂ ಹೆಗಡೆ ಸೂರನ್, ಉಮೇಶ ಗ ಹೆಗಡೆ ಸೂರನ್ ಹಾಗೂ ಸಂಘಟಕರು ವೇದಿಕೆ ಮೇಲೆ ಉಪಸ್ಥಿತರಿದ್ದರು.
ಯಕ್ಷರಂಗದ ಸಾಧಕರಾದ ಸುಬ್ರಹ್ಮಣ್ಯ ಹೆಗಡೆ ಚಿಟ್ಟಾಣಿ ಅವರಿಗೆ ಗೌರವ ಸನ್ಮಾನ ನಡೆಯಿತು.
ನಂತರ ರಾತ್ರಿ ೯-೩೦ ರಿಂದ ಶ್ರೀ ವೀರಾಂಜನೇಯ ಯಕ್ಷಮಿತ್ರ ಮಂಡಳಿ, ಬಂಗಾರಮಕ್ಕಿ, ಹೊನ್ನಾವರ ಮತ್ತು ದಿಗ್ಗಜ ಅತಿಥಿ ಕಲಾವಿದರಿಂದ ಅದ್ಧೂರಿ ಪೌರಾಣಿಕ ಯಕ್ಷಗಾನ ಪ್ರದರ್ಶನ “ಭೀಷ್ಮ ವಿಜಯ” ನಡೆಯಿತು. (ಸಮಯಮಿತಿ ಯಕ್ಷಗಾನ ಪ್ರದರ್ಶನ)
ಹಿಮ್ಮೇಳದಲ್ಲಿ ಭಾಗವತರಾಗಿ ಪ್ರಸಿದ್ಧ ಭಾಗವತರಾದ ಶಂಕರ ಭಟ್ಟ ಬ್ರಹ್ಮೂರು, ಜಿಲ್ಲೆ ಕಂಡAತಹ ಯುವ ಪ್ರತಿಭೆ ಕುಮಾರಿ ಶ್ರೀರಕ್ಷಾ ಹೆಗಡೆ ಸಿದ್ದಾಪುರ, ಹಾಗೇ ಮದ್ದಲೆಯಲ್ಲಿ ನಾದಶಂಕರ ,ಮದ್ದಲೆ ಬ್ರಹ್ಮ ಶಂಕರ ಭಾಗವತ ಯಲ್ಲಾಪುರ, ಮತ್ತು ಚಂಡೆಯ ಗಂಡುಗಲಿ ವಿಘ್ನೇಶ್ವರ ಗೌಡ ಕೆಸರಕೊಪ್ಪ ಮತ್ತು ಯುವ ಚಂಡೆ ಮಾಂತ್ರಿಕ ಪ್ರಸನ್ನ ಭಟ್ಟ ಹೆಗ್ಗಾರ ಚಂಡೆಯ ಜೇಂಕಾರ ನಡೆಸಿದರು.
ರಾಜ್ಯ ಕಂಡ ಪ್ರಸಿದ್ಧ ಯಕ್ಷಗಾನ ಕಲಾವಿದರಾದ ಸುಬ್ರಹ್ಮಣ್ಯ ಹೆಗಡೆ ಚಿಟ್ಟಾಣಿ-ಭೀಷ್ಮನಾಗಿ, ವಿದ್ಯಾಧರ ರಾವ್ ಜಲವಳ್ಳಿ -ಸಾಲ್ವನಾಗಿ, ಡಾ/ಪ್ರದೀಪ ಸಾಮಗ-ಅಂಬೆಯಾಗಿ, ಉತ್ತರ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅಶೋಕ ಭಟ್ಟ – ಪರಶುರಾಮನಾಗಿ, ಯಕ್ಷ ಲೋಕ ಕಂಡ ಹಾಸ್ಯ ಚಕ್ರವರ್ತಿ ಶ್ರೀಧರ ಭಟ್ಟ ಕಾಸರಕೋಡ ಅವರು ದೂತ ಮತ್ತು ಬ್ರಾಹ್ಮಣನ ಪಾತ್ರವನ್ನು ಸುಂದರವಾಗಿ ಮಾಡಿದರೇ, ಮಂತ್ರಿಯಾಗಿ ಮಾಬ್ಲೇಶ್ವರ ಗೌಡ ಹಾರೇಕೊಪ್ಪ,ಅಂಬಾಲಿಕೆಯಾಗಿ ಅವಿನಾಶ ಕೊಪ್ಪ, ಸಖಿಯಾಗಿ ರಾಮಚಂದ್ರ ಮೂಗದೂರು(ಸಾಗರ) & ದೇಶಾಧಿಪಾಲಕರಾಗಿ ಸ್ಥಳೀಯರಾದ ಕುಮಾರ ಆನಂದ ಹೆಗಡೆ ಶೀಗೇಹಳ್ಳಿ, ಕುಮಾರ ಗಣೇಶ ಹೆಗಡೆ ಸೂರನ್ ಅವರವರ ಪಾತ್ರಕ್ಕೆ ಸುಂದರ ಚಿತ್ರಣ ನೀಡಿದರು.
ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಕಲಾ ಪ್ರೇಮಿಗಳು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ಮಕ್ಕಳ ಕಾರ್ಯಕ್ರಮದ ನಿರೂಪಣೆಯನ್ನು ನಿರ್ಮಲಾ ಶಶಿಧರ ಹೆಗಡೆ ತ್ಯಾಗಲಿ, ಮತ್ತು ವಾಸುದೇವ ಎನ್ ನಾಯ್ಕ ನಡೆಸಿದರೆ,ಸಭಾ ಕಾರ್ಯಕ್ರಮದ ಸ್ವಾಗತ ಗೀತೆಯನ್ನು ವಾಣಿ ರವೀಂದ್ರ ಹೆಗಡೆ ಸೂರನ್ ಸುಂದರವಾಗಿ ಹಾಡಿದರೇ,ಪ್ರಾಸ್ತವಿಕ ನುಡಿಯನ್ನು ನಟರಾಜ ಎಮ್ ಹೆಗಡೆ ಸೂರನ್, ಸಭೆಯ ಸ್ವಾಗತ ಭಾಷಣವನ್ನು ರಮೇಶ ಎನ್ ನಾಯ್ಕ ಬಾಳೇಕೈ , ಸಭಾ ಕಾರ್ಯಕ್ರಮದ ನಿರೂಪಣೆಯನ್ನು ರಮೇಶ ಟಿ ನಾಯ್ಕ ಹಂಗಾರಖAಡ ನಡೆಸಿದರೇ,ವಂದನಾರ್ಪಣೆಯನ್ನು ಶಂಕರ ನಾರಾಯಣ ಆದಿದ್ರಾವಿಡ ಜಿಕ್ನಮನೆ ತ್ಯಾಗಲಿ ಸುಂದರವಾಗಿ ನಡೆಸಿಕೊಟ್ಟರು.
More Stories
ಅಪರೂಪದ ದೇವಾಲಯ. ಬಲಮುರಿ, ತ್ರಿನೇತ್ರ, ಆರುಕೈಗಳುಳ್ಳ ಮಹಾ ಗಣಪತಿ
ಜನಮನ ಸೂರೆಗೊಂಡ ನಾಣಿಕಟ್ಟಾ ಯಕ್ಷಗಾನ ಹಿಮ್ಮೇಳ ವೈಭವ.
ನಿಲ್ಕುಂದ- ಸಂತೆಗುಳಿ ಸರ್ವಋತು ರಸ್ತೆಗೆ ನಿರ್ಲಕ್ಷö್ಯ ;
ಹೋರಾಟಕ್ಕೂ ಸ್ಪಂಧಿಸದ ಸರಕಾರ- ರವೀಂದ್ರನಾಯ್ಕ.