March 22, 2024

Bhavana Tv

Its Your Channel

ವಿಶಿಷ್ಟ ಕುಂಬ್ರಿಮರಾಠಿಗಳ ಸುಗ್ಗಿ ಹಬ್ಬಆಚರಣೆ ; ಮೀಸಲಾತಿ ನೀಡಿದ ಹೋರಾಟಗಾರ ರವೀಂದ್ರ ನಾಯ್ಕರೊoದಿಗೆ ಸುಗ್ಗಿ ಕುಣಿತಕ್ಕೆ ಕುಂಬ್ರಿಮರಾಠಿಗರ ಹೆಜ್ಜೆ.

ಸಿದ್ಧಾಪುರ: ತನ್ನದೇ ಆದ ವಿಶಿಷ್ಟ ಸಂಪ್ರದಾಯ, ಕಲೆ, ಜಾನಪದ ಸಂಪನ್ನದಿAದ ಬುಡಕಟ್ಟು ಜನಾಂಗಗಳಲ್ಲಿ ಒಂದಾದ ಕುಂಬ್ರಿ ಮರಾಠಿ ಜಿಲ್ಲೆಯಲ್ಲಿ ಗುರುತಿಸಿಕೊಂಡಿರುವುದು ವಿಶೇಷ. ಕುಂಬ್ರಿ ಮರಾಠಿ ಸಮಾಜವು ಬುಡಕಟ್ಟು ಜನಾಂಗಕ್ಕೆ ಸಮಾನವಾಗಿ ಬದುಕಿನ ಸಂಪ್ರದಾಯವನ್ನ ರೂಢಿಸಿಕೊಂಡಿರುವುದು ಗಮನಾರ್ಹ.

ಕುಂಬ್ರಿ ಮರಾಠಿ ಆರ್ಥೀಕ, ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದ ಸಮಾಜವಾಗಿದ್ದರೂ ರಾಜ್ಯ ಸರಕಾರ ಮೀಸಲಾತಿ ಪಟ್ಟಿಗೆ ಸೇರ್ಪಡೆಗೆ ಮಾಡಿದ ಹೋರಾಟ ಇಂದು ಇತಿಹಾಸ ಪುಟಕ್ಕೆ ಸೇರಲ್ಪಟ್ಟಿದೆ.
ಇಂತಹ ಸಮಾಜವನ್ನ ಗುರುತಿಸಿ ಹಿಂದುಳಿದ ಪಟ್ಟಿಗೆ ಸೇರ್ಪಡಿಸಲು ವಕೀಲ ಹಾಗೂ ಅರಣ್ಯ ಭೂಮಿ ಹಕ್ಕು ಹೋರಾಟಗಾರ ರವೀಂದ್ರ ನಾಯ್ಕ ಅವರ ಸಾಂಘಿಕ ಮತ್ತು ಕಾನೂನಾತ್ಮಕ ಹೋರಾಟ ಕುಂಬ್ರಿಮರಾಠಿ ಸಮಾಜವನ್ನ ಮೀಸಲಾತಿ ಪಟ್ಟಿಗೆ ಸೇರ್ಪಡಿಸಲು ಪ್ರಬಲ ಹೆಜ್ಜೆಯೆಂದರೆ ತಪ್ಪಾಗಲಾರದು.

ಪ್ರೋಪೇಸರ್ ರವಿವರ್ಮ ಕುಮಾರ್ ಪ್ರಥಮ ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ಶಿಫಾರಸ್ಸಿನ ಮೇರೆಗೆ, ಅಂದಿನ ಸಮಾಜ ಕಲ್ಯಾಣ ಸಚಿವ ಕಾಗೋಡ ತಿಮ್ಮಪ್ಪ ಅವರ ದಿಟ್ಟ ನಿಲುವಿನಿಂದ ಕುಂಬ್ರಿ ಮರಾಠಿ ಸಮಾಜ ಹಿಂದುಳಿದ ಪಟ್ಟಿಗೆ ಸೇರಲ್ಪಟ್ಟುಇಂದಿಗೆ ಏರಡು ದಶಕಗಳು ಕಳೆದಿರುವುದು ಐತಿಹಾಸಿಕ ಹಿನ್ನೋಟ.

ಈ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಗುಡ್ಡಗಾಡು ಪ್ರದೇಶದಲ್ಲಿ ಪ್ರಸರಿಸಿರುವ ಕುಂಬ್ರಿ ಮರಾಠಿ ಜನಾಂಗವು ತಮ್ಮ ವಿಶೇಷ ಸಂಪ್ರದಾಯ ಕಾರ್ಯಕ್ರಮ ಸಮಾವೇಶಗಳಲ್ಲಿ ರವೀಂದ್ರ ನಾಯ್ಕರ ಸಮಾಜಕ್ಕೆ ನೀಡಿದ ಕೊಡುಗೆ ಕುರಿತು ಕುಂಬ್ರಿ ಮರಾಠಿಗರು ಪದೇ, ಪದೇ ಸ್ಮರಿಸಿಕೊಳ್ಳುತ್ತಿರುವುದು ಕುಂಬ್ರಿ ಮರಾಠಿಗರಿಗೆ ರವೀಂದ್ರ ನಾಯ್ಕರ ಮೇಲೆ ಇರುವ ಪ್ರೀತಿ ಮತ್ತುವಿಶ್ವಾಸಕ್ಕೆ ಕಾರಣವಾಗಿದೆ ಎಂದರೇ ತಪ್ಪಾಗಲಾರದು.
ಅದರಂತೆ, ಸುಗ್ಗಿಯ ಹಬ್ಬದ ಸಂದರ್ಭದಲ್ಲಿ ಸಿದ್ಧಾಪುರ ತಾಲೂಕಿನ ಕುಗ್ರಾಮಗಳಲ್ಲಿ ಒಂದಾದ ಕುಂಬ್ರಿ ಮರಾಠಿ ವಾಸ್ತವ್ಯದ ಕೊಡಿಗದ್ದೆ ಗ್ರಾಮದಲ್ಲಿ ಜರುಗಿದ ಸುಗ್ಗಿ ಉತ್ಸವದ ಕಾರ್ಯಕ್ರಮದಲ್ಲಿ, ಕುಂಬ್ರಿ ಮರಾಠಿ ಸುಗ್ಗಿ ತಂಡದೊAದಿಗೆ ಪಾಲ್ಗೊಂಡು ಕುಣಿತದ ಹೆಜ್ಜೆಯನ್ನ ಹಾಕಿರುವುದು ಗಮನಾರ್ಹ. ಅತ್ಯಂತ ಹಿಂದುಳಿದ ಪ್ರದೇಶಗಳಲ್ಲಿ ಗುಡ್ಡಗಾಡು ಜನಾಂಗದೊAದಿಗೆ ಅದರಲ್ಲೂವಿಶೇಷವಾಗಿ ಧ್ವನಿಯಿಲ್ಲದ ಕುಂಬ್ರಿಮರಾಠಿ ಸಮಾಜಕ್ಕೆ ಮೀಸಲಾತಿ ಪಟ್ಟಿ ಸೇರ್ಪಡೆಗೆ ಪ್ರಮುಖ ಪಾತ್ರ ವಹಿಸಿ ಅವರೊಂದಿಗೆ ಸರಳ ಸಜ್ಜನಿಕೆಯಿಂದ ನಾಡಿನ ಹಬ್ಬವಾದ ಸುಗ್ಗಿ ಸಂಭ್ರದಲ್ಲಿ ಕುಂಬ್ರಿ ಮರಾಠಿಗಳಲ್ಲಿ ಬೇರೆತಿರುವುದು ಇಂದು ಸಾರ್ವಜನಿಕವಾಗಿ ಪ್ರಶಂಸೆಗೆ ಕಾರಣವಾಗಿದೆ.

error: