April 18, 2024

Bhavana Tv

Its Your Channel

ಜನಮನ ಸೂರೆಗೊಂಡ ನಾಣಿಕಟ್ಟಾ ಯಕ್ಷಗಾನ ಹಿಮ್ಮೇಳ ವೈಭವ.

 ಸಿದ್ದಾಪುರ:-  ಶ್ರೀ ಸಿದ್ಧಿವಿನಾಯಕ ದೇವರು ಮತ್ತು ಶ್ರೀ ಲಕ್ಷ್ಮೀನರಸಿಂಹ ದೇವರ ಅನುಗ್ರಹದೊಂದಿಗೆ ಶ್ರೀ ಸಿದ್ಧಿವಿನಾಯಕ ದೇವರ ಪ್ರೇರಣೆಯಿಂದ, ಪರಮಪೂಜ್ಯ ಸ್ವರ್ಣವಲ್ಲೀ ಶ್ರೀಗಳ ಆಶೀರ್ವಾದದೊಂದಿಗೆ, ವೇ/ಮೂ ಶ್ರೀ ವಿನಾಯಕ ಸುಬ್ರಾಯ ಭಟ್ಟ ಮತ್ತೀಹಳ್ಳಿ ಇವರ ದಿವ್ಯ ಉಪಸ್ಥಿತಿಯಲ್ಲಿ , ಸೂರನ್ ಕುಟುಂಬದವರ(ಸೂರನಕೇರಿ,ಕೋಡ್ಗದ್ದೆ, ಹಂಗಾರಖAಡ)ದವರ ಸಂಪೂರ್ಣ ಸಹಕಾರದೊಂದಿಗೆ, ಶ್ರೀ ಸಿದ್ಧಿವಿನಾಯಕ ಯಕ್ಷಮಿತ್ರ ಬಳಗ ನಾಣಿಕಟ್ಟಾ(ಶ್ರೀ ನಟರಾಜ ಎಮ್ ಹೆಗಡೆ  &ಮಿತ್ರ ಬಳಗ)ದವರ ಸಮರ್ಥ ಸಂಯೋಜನೆಯಲ್ಲಿ, ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರ ವೇದಿಕೆಯಲ್ಲಿ, ಶ್ರೀ ಗಣೇಶ ಗಣಪತಿ ಹೆಗಡೆ ಅವರ ಸವಿನೆನಪಿನಲ್ಲಿ, ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಸಭಾಭವನ ನಾಣಿಕಟ್ಟಾದಲ್ಲಿ  ಮೇ 27 2023, ಶನಿವಾರ  "ಕೃಷ್ಣ ಯಜುರ್ವೇದ ಪಾರಾಯಣ, ಶ್ರೀಮದ್ ಭಾಗವತ ಸಪ್ತಾಹ ಮತ್ತು ಪ್ರವಚನ"ದ ಪ್ರಯುಕ್ತ 6 ನೇ ದಿನ ಸಂಜೆ ಯಕ್ಷಗಾನ ಹಿಮ್ಮೇಳ ವೈಭವ ಕಾರ್ಯಕ್ರಮವು ಸುಂದರವಾಗಿ ಜರುಗಿತು.  ಕಾರ್ಯಕ್ರಮದಲ್ಲಿ, ದಿವ್ಯ ಉಪಸ್ಥಿತಿಯನ್ನು ವೇ/ಮೂ/ಶ್ರೀ ವಿನಾಯಕ ಸು ಭಟ್ಟ ಮತ್ತೀಹಳ್ಳಿ ವಹಿಸಿದರೇ, ಸಭಾ ಕಾರ್ಯಕ್ರಮದ ವೇದಿಕೆ ಮೇಲೆ ಸನ್ಮಾನದ ಸುಸಂಧರ್ಭದಲ್ಲಿ, ಶ್ರೀ ಸ್ವರ್ಣವಲ್ಲೀ ಮಠದ ಆಡಳಿತ ಮಂಡಳಿಯ ಸದಸ್ಯರಾದ ಸಮಾಜ ಸೇವಕರಾದ ಎಮ್ ಆರ್ ಹೆಗಡೆ ಬಾಳೇಜಡ್ಡಿ ಮತ್ತೀಹಳ್ಳಿ, ತ್ಯಾಗಲಿ ಸೇವಾ ಸಹಕಾರಿ ಸಂಘದ ದಕ್ಷ ಅಧ್ಯಕ್ಷರಾದ  ನಾರಾಯಣ ಬಿ ಹೆಗಡೆ ಮತ್ತೀಹಳ್ಳಿ, ಲೋಕೇಶ ಬಿ ಹೆಗಡೆ ಸೂರನ್, ಮಾಬ್ಲೇಶ್ವರ ಜಿ ಹೆಗಡೆ ಸೂರನ್,  ಜಿ ವಿ ಹೆಗಡೆ ಸೂರನ್ , ನಾಗಾನಂದ ಆರ್ ಹೆಗಡೆ  ಶ್ರೀ ಸಿದ್ಧಿವಿನಾಯಕ ಯಕ್ಷಮಿತ್ರ ಬಳಗ ದ ಹಿರಿಯರಾದ ಎಮ್ ಎಮ್ ಹೆಗಡೆ ಹಂಗಾರಖAಡ ಸೂರನ್, ಮತ್ತು  ಪ್ರಭಾಕರ ಗ ಹೆಗಡೆ ಸೂರನ್,  ರವೀಂದ್ರ ಗಂ ಹೆಗಡೆ ಸೂರನ್,  ಉಮೇಶ ಗ ಹೆಗಡೆ ಸೂರನ್ ಶ್ರೀ ವಿನಾಯಕ ನಾ ಹೆಗಡೆ ಸೂರನ್ ಹಾಗೂ ಕುಟುಂಬದವರು, &  ಸಂಘಟಕರು ವೇದಿಕೆ ಮೇಲೆ ಉಪಸ್ಥಿತರಿದ್ದರು.      ಯಕ್ಷರಂಗದ ಸಾಧಕರಾದ ಸುನೀಲ್ ಬಂಡಾರಿ ಕಡತೋಕ ಅವರಿಗೆ  ಗೌರವ ಸನ್ಮಾನ ಸೇರಿದ ಸಹಸ್ರಾರು ಕಲಾಭಿಮಾನಿಗಳ ಸಮ್ಮುಖದಲ್ಲಿ  ವಿಜ್ರಂಬಣೆಯಿAದ ನಡೆಯಿತು.  

ಸಂಜೆ ದಿಗ್ಗಜ ಕಲಾವಿದರಿಂದ ಅದ್ಧೂರಿ “ಯಕ್ಷಗಾನ ಹಿಮ್ಮೇಳ ವೈಭವ “ಭಕ್ತಿ ರಸಧಾರೆ ಅಪೂರ್ವ ಪ್ರಸ್ತುತಿ ನಡೆಯಿತು, ಯಕ್ಷರಂಗ ಕಂಡ ಅಪೂರ್ವ ಜೋಡಿ ರಾಮ-ರಾಘವರ ಜೋಡಿ ಭಾಗವತರಾಗಿ ಪ್ರಸಿದ್ಧ ಭಾಗವತರಾದ ರಾಘವೇಂದ್ರ ಆಚಾರ್ಯ ಜನ್ಸಾಲೆ, ರಾಮಕೃಷ್ಣ ಹೆಗಡೆ ಹಿಲ್ಲೂರು,ಅವರ ದ್ವಂದ್ವ ಗಾನಸುಧೆ ,ಜಿಲ್ಲೆ ಕಂಡAತಹ ಯುವ ಪ್ರತಿಭೆ ಕುಮಾರ ಸೃಜನ್ ಜಿ ಹೆಗಡೆ ಸಾಗರ, ಮದ್ದಲೆಯಲ್ಲಿ ಮದ್ದಲೆ ಹುಲಿ ಸುನೀಲ್ ಬಂಡಾರಿ ಕಡತೋಕ ಮತ್ತು ಚಂಡೆಯ ಗಂಡುಗಲಿ ಮತ್ತು ಹಿರಿಯ ಚಂಡೆ ಮಾಂತ್ರಿಕ ಶಿವಾನಂದ ಕೋಟ ಚಂಡೆಯ ಜೇಂಕಾರ ನಡೆಸಿದರು. ಜಗತ್ತು ಕಂಡ ಪ್ರಸಿದ್ಧ ಯಕ್ಷಗಾನ ಹಿಮ್ಮೇಳ ಕಲಾವಿದರಾದ ರಾಘವ-ರಾಮ ಅವರ ಜೋಡಿ ಪದ್ಯವಾದ ರಾಮಾಯಣದ ಪಂಚವಟಿ ಪ್ರಸಂಗದ ದ್ವಂದ್ವ ಪದ್ಯ ಸುಂದರವಾಗಿ ಮೂಡಿಬಂದಿದ್ದು,ಸೇರಿದ ಕಲಾ ಪ್ರೇಮಿಗಳು ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಯಶಸ್ವಿ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಜನ್ಸಾಲೆ-ಹಿಲ್ಲೂರು-ಸೃಜನ ಸಾಗರ ಭಾಗವತರ ತ್ರಿಂದ್ವ ಹಾಡಾದ “ಭೀಷ್ಮ ಪರ್ವ” ಪ್ರಸಂಗದ “ಸ್ವಾಮಿ ಪರಾಕು” ಹಾಡು ಸೇರಿದ ಸಹಸ್ರಾರು ಕಲಾ ಪ್ರೇಮಿಗಳ ಮನತಣಿಸಿತು.

ಸಭಾ ಕಾರ್ಯಕ್ರಮದ ಸ್ವಾಗತ ಗೀತೆಯನ್ನು ಕುಮಾರಿ ಕಾವ್ಯಾ ಉಮೇಶ ಹೆಗಡೆ ಸೂರನ್ ,ಪ್ರಸ್ಥಾವನಾ ನುಡಿಯನ್ನು ನಟರಾಜ ಎಮ್ ಹೆಗಡೆ ಸೂರನ್, Ä ಸ್ವಾಗತ ಮತ್ತು ಸಭಾ ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ಪ್ರಜ್ಞಾ ಪ್ರಸನ್ನ ಹೆಗಡೆ ,ವಂದನಾರ್ಪಣೆಯನ್ನು ಅಭಿಷೇಕ ರವೀಂದ್ರ ಹೆಗಡೆ ಸೂರನ್ ಯಕ್ಷ ಗೌರವ ಸನ್ಮಾನ ಪತ್ರ ವಾಚನವನ್ನು ವೆಂಕಟೇಶ ಎಸ್ ಹೆಗಡೆ ಸೂರನ್ ಸುಂದರವಾಗಿ ನೆಡೆಸಿಕೊಟ್ಟರು. ಈ ಸಂದರ್ಭದಲ್ಲಿ ಸೂರನ್ ಕುಟುಂಬದ ಎಲ್ಲಾ ಸದಸ್ಯರು, ಸಂಘಟನೆಯ ಸಮಿತಿಯ ಎಲ್ಲಾ ಸದಸ್ಯರು ಇವರುಗಳೂ ಸಹ ಸಕ್ರೀಯವಾಗಿ ತಮಗೆ ನೀಡಿದ ಕಾರ್ಯನಿರ್ವಹಿಸಿದರು..ಈ ಯಶಸ್ವಿ ಕಾರ್ಯಕ್ರಮ ಈ ಸಂಘಟನೆಯ ಈ ವರ್ಷದ 10 ನೇಯ ಯಶಸ್ವಿ ಕಾರ್ಯಕ್ರಮ.

error: