April 24, 2024

Bhavana Tv

Its Your Channel

ಯೋಗ್ಯ ಮಾನದಂಡವಿರದ ಪ್ರಶಸ್ತಿಗೆ ಬೆಲೆಯಿಲ್ಲ – ಸುಬ್ರಾಯ ಭಟ್ ಬಕ್ಕಳ

ವರದಿ: ವೇಣುಗೋಪಾಲ ಮದ್ಗುಣಿ

ಸಿರಸಿ: ಶಿರಸಿಯ ನೆಮ್ಮದಿ ಕುಟೀರದಲ್ಲಿ, ಸಾಹಿತ್ಯ ಚಿಂತನ ಚಾವಡಿ, ಶಿರಸಿ ಇವರ ಆಶ್ರಯದಲ್ಲಿ ದಸರಾ ಕವಿಗೋಷ್ಟಿ ಮತ್ತು ಬಹುಮಾನ ವಿತರಣಾ ಸಮಾರಂಭವನ್ನು ಸುಬ್ರಾಯ ಭಟ್ಟ ಬಕ್ಕಳರವರು ಉದ್ಘಾಟಿಸಿದರು

ನಂತರ ಮಾತನ್ನಾಡಿ, ಇಂದು ಬರೆದ ಕವಿತೆಗೆ ತಕ್ಷಣ ಪ್ರತಿಕ್ರಿಯೆ, ಪ್ರಶಸ್ತಿ ಲಭಿಸುತ್ತದೆ. ಇದಕ್ಕೆ ಯೋಗ್ಯ ಮಾನದಂಡ ಇರಬೇಕಾದ ಅಗತ್ಯತೆ ಇದೆ. ಪ್ರಶಸ್ತಿಗಳ ಹಪಾಹಪಿ ಮತ್ತದರ ಬೆನ್ನುಬಿದ್ದು ಲಾಬಿ ಮೂಲಕ ಬೆಳಕಿಗೆ ಬಂದವರು ನೈಜ ಸಾಹಿತಿಗಳಾಗಲಾರರು. ಸಂಘಟನೆಗಳು ಪ್ರತಿಭೆ ಇರುವ ಕವಿ ಬೆಳಕಿಗೆ ತರುವ ಪ್ರಯತ್ನ ಮಾಡಬೇಕಿದೆ ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಡಾ ವಿಜಯನಳಿಸಿ ರಮೇಶರವರು ಮಾತನಾಡಿ, ಎಸ್.ಎಸ್.ಭಟ್ಟ ಮಾರ್ಗದರ್ಶನದಿಂದ ಸಾಹಿತ್ಯ ಚಿಂತಕರ ಬಳಗವು ಎಲೆಮರೆಯ ಪ್ರತಿಭೆಗಳಿಗೆ ಅವಕಾಶಗೈವ ಕಾರ್ಯ ಅಮೋಘವೇ ಸರಿ. ಸಾಹಿತ್ಯ ಅದ್ಭುತ ದೈವಿದತ್ತ ಕೊಡುಗೆ. ಸಾಹಿತ್ಯವನ್ನು ಓದಿ ಅರ್ಥೈಸಿ ಅನುಭವಿಸುವ ಪರಮಾನಂದ ಮತ್ಯಾವ ಅಷ್ಟೈಶ್ವರ್ಯದಿಂದಲೂ ದೊರೆಯದು. ಹಳಗನ್ನಡವು ಭಯಾನಕ ಎಂದು ಹಿಂಜರಿತ ಬೇಡ. ಅದನ್ನೋದಿ ಆಸ್ವಾದಿಸುವ ಮನಸ್ಸು ಮಾಡಬೇಕು ಎಂದರು.

ಬಳಗವು ಆಯೋಜಿಸಿದ್ದ ಸಾಂಪ್ರದಾಯಿಕ ತಿಹಿತಿಂಡಿ ಮತ್ತು ಕಥಾ ಸ್ಪರ್ಧೆ ವಿಜೇತರಿಗೆ ಬಹುಮಾನ ಮತ್ತು ಕವಿಗಳಿಗೆ ನೆನಪಿನ ಕಾಣಿಕೆ ವಿತರಿಸಿ ಬರಹಗಾರ ದಿವಸ್ಪತಿ ಭಟ್ಟ ಮಾತನ್ನಾಡಿ, ಎದೆಯಲ್ಲಿ ಹುದುಗಿದ್ದ ಭಾವನೆಗಳಿಗೆ ಅಕ್ಷರರೂಪ ಕೊಡುವ ಶಕ್ತಿ ಕಾವ್ಯಾಸಕ್ತರಿಗೆ ಮಾತ್ರ ಸಾಧ್ಯ. ಸಾಹಿತ್ಯವು ಪ್ರಶಸ್ತಿ, ಸನ್ಮಾನಗಳನ್ನು ಪಡೆಯುದಕ್ಕಲ್ಲ ಬದಲಿಗೆ ನಮ್ಮನ್ನು ನಾವು ನೋಡಿಕೊಳ್ಳುವುದೇ ಸಾಹಿತ್ಯ. ಸಾಹಿತ್ಯ ನಮ್ಮೊಳಗಿನ ವ್ಯಕ್ತಿತ್ವವನ್ನು ಬದಲಾಯಿಸಬಹುದು. ಅಂತಹ ಅದ್ಬುತ ಶಕ್ತಿ ಸಾಹಿತ್ಯಕ್ಕಿದೆ ಎಂದರು.

ನAತರ ಸುಮಾರು ೩೦ಕ್ಕೂ ಅಧಿಕ ಕವಿ ಕವಯತ್ರಿಗಳು ತಮ್ಮ ಸ್ವರಚಿತ ಕವಿತೆ, ಚುಟುಕು, ಹನಿಗವನಗಳನ್ನು ವಾಚಿಸಿದರು. ಸಾಹಿತ್ಯ ಚಿಂತಕರ ಚಾವಡಿಯ ಸಂಸ್ಥಾಪಕ ಎಸ್.ಎಸ್.ಭಟ್ಟರವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು.
ಆರಂಭದಲ್ಲಿ ಕವಯತ್ರಿ ವಿಮಲಾ ಭಾಗ್ವತ ಪ್ರಾರ್ಥನಾ ಗೀತೆ ಹಾಡಿದರು. ಕಥೆಗಾರ ಕೆ.ಮಹೇಶ ಸರ್ವರನ್ನೂ ಸ್ವಾಗತಿಸಿದರು. ಕವಿ ರಾಜೂ ನಾಯ್ಕ ಬಿಸಲಕೊಪ್ಪ ಪ್ರಾಸ್ತಾವಿಕ ಮಾತನ್ನಾಡಿದರು. ಕವಯತ್ರಿ, ಶಿಕ್ಷಕಿ ವಿಜಯ ಶಾನಭಾಗ ತಮ್ಮ ವಿನೂತನ ಸಾಹಿತ್ಯಭರಿತವಾಗಿ ಇಡೀ ಕಾರ್ಯಕ್ರವನ್ನು ನಿರೂಪಣೆ ಮಾಡಿ ಪ್ರೇಕ್ಷಕರನ್ನು ಗೆದ್ದರು. ದತ್ತಗುರು ಕಂಠಿ ವಂದಿಸಿದರು.

error: