April 19, 2024

Bhavana Tv

Its Your Channel

” ಕೆರೆ ಸಮಾವೇಶ ” ಉದ್ಘಾಟಿಸಿದ ಸಚಿವ ಶಿವರಾಮ ಹೆಬ್ಬಾರ

ವರದಿ:ವೇಣುಗೋಪಾಲ ಮದ್ಗುಣಿ

ಶಿರಸಿ : ಮನುವಿಕಾಸ ಹಾಗೂ ಅಜೀಂ ಪ್ರೇಮ್ ಜಿ ಫೌಂಡೇಶನ್ ವತಿಯಿಂದ ನಗರದ ರಾಘವೇಂದ್ರ ಕಲ್ಯಾಣಮಂಟಪದಲ್ಲಿ ಆಯೋಜಿಸಿದ್ದ ” ಕೆರೆ ಸಮಾವೇಶ ” ವನ್ನು ಮಾನ್ಯ ಕಾರ್ಮಿಕ ಖಾತೆ ಸಚಿವರಾದ ಶಿವರಾಮ ಹೆಬ್ಬಾರ ಅವರು ದೀಪ ಬೆಳಗಿಸುವುದರ ಮೂಲಕವಾಗಿ ಉದ್ಘಾಟಿಸಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ಕೃಷಿಕ, ಸೈನಿಕ ಇವರನ್ನು ನಾವು ಗೌರವಿಸದೇ ಇದ್ದರೆ ನಮಗೆ ಬದುಕಲು ಸಾಧ್ಯವೇ ಇಲ್ಲ. ರೈತರು ಕೃಷಿಯಿಂದ ವಿಮುಖವಾದರೆ ದೇಶ ಸಫಲತೆ ಕಾಣಲು ಸಾಧ್ಯವೇ ಇಲ್ಲ. ಆದ್ದರಿಂದ ರೈತರ ಗೌರವಿಸುವ ಅವರಿಗೆ ಗೌರವ ಕೊಡುವ ಕಾರ್ಯವಾಗಬೇಕು ಎಂದರು.
ಈಗಾಗಲೇ ಬೇಡ್ತಿ ನೀರಿನ ಯೋಜನೆಯ ಮೂರನೇ ಹಂತದ ಕಾರ್ಯ ಮುಂದುರೆದಿರುವುದಾಗಿ ಹೇಳಿದ ಅವರು, ಸರಕಾರ ಸಾಕಷ್ಟು ನೀರಿನ ಯೋಜನೆಗಳ ಬಗ್ಗೆ ಕಾರ್ಯ ನಿರ್ವಹಿಸುತ್ತಿದ್ದು ಮನುವಿಕಾಸದಂತ ಸಂಸ್ಥೆ ಕೆರೆ ಹೂಳೆತ್ತುವ ಮೂಲಕ ಪೂರಕ ಕಾರ್ಯ ನಿರ್ವಹಿಸುತ್ತಿದೆ ಎಂದರು. ಈ ಸಂದರ್ಭದಲ್ಲಿ ಮನು ವಿಕಾಸ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಗಣಪತಿ ಭಟ್ಟ, ಡಿವೈ ಎಸ್ ಪಿ ರವಿ ನಾಯ್ಕ, ಜಿಲ್ಲೆಯ ಹಾಗೂ ಹಾವೇರಿ ಜಿಲ್ಲೆಯ ಪ್ರಗತಿಪರ ರೈತರ, ಕೃಷಿಕರು ಉಪಸ್ಥಿತರಿದ್ದರು

error: