April 19, 2024

Bhavana Tv

Its Your Channel

ಮಹಿಳೆಗೆ ನೀಡುವ ಸಮಾನತೆಯ ಹಕ್ಕು ಸಂವಿಧಾನ ಬದ್ಧ ಹಕ್ಕು

ಶಿರಸಿ : ದೇಶದ ಕಾನೂನು ಮಹಿಳೆಗೆ ಸಮಾನತೆ ನೀಡಿದ ಮಹಿಳೆಗೆ ನೀಡುವ ಸಮಾನತೆಯ ಹಕ್ಕು ಸಂವಿಧಾನ ಬದ್ಧ ಹಕ್ಕಾಗಿದೆ. ಮಹಿಳೆಯರು ಕಾನೂನಾತ್ಮಕ ಹಕ್ಕಿನ ಕುರಿತು ಅರಿವು ಮೂಡಿಸಿಕೊಳ್ಳಬೇಕೆಂದು ಹಿರಿಯ ನ್ಯಾಯವಾದಿ ರವೀಂದ್ರ ನಾಯ್ಕ ಅವರು ಹೇಳಿದರು
ಅವರು ಇಂದು ಶಿರಸಿ ತಾಲೂಕಿನ ಬಂಡಲ ಗ್ರಾಮ ಪಂಚಾಯತ ಸಭಾಭವನದಲ್ಲಿ ಭಾರತ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಪಾನ್ ಇಂಡಿಯಾ ಅವೇರನೇಸ್ ಹಾಗೂ ಔಟರೀಚ್ ಕಾರ್ಯಕ್ರಮ ಅಂಗವಾಗಿ ಏರ್ಪಡಿಸಿದ “ಮಹಿಳೆ ಮತ್ತು ಸಮಾನತೆ” ಎಂಬ ವಿಷಯದ ಕುರಿತು ಮಾತನಾಡುತ್ತ ಹೇಳಿದರು.
ದೇಶದ ಕಾನೂನಿನ ಅರಿವು ಪ್ರತಿಯೊಬ್ಬರಿಗೂ ಇರಬೇಕು. ಅದರಂತೆ ಕಾನೂನಿನ ಅರಿವು ಹೊಂದಿದ್ದಲ್ಲಿ ಹಕ್ಕಿನಿಂದ ವಂಚಿತರಾಗುವ ಪ್ರಮಾಣ ಕಡಿಮೆ ಆಗುತ್ತದೆ. ದೇಶದ ಸಂವಿಧಾನ ಸಮಾನತೆ, ಲಿಂಗಾಧಾರಿತ ತಾರತಮ್ಯ ಮತ್ತು ಉದ್ಯೋಗದಲ್ಲಿ ಸಮಾನತೆ ನೀಡಿರುವದು ವಿಶೇಷ ಎಂದು ಅವರು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ ಗ್ರಾಮ ಪಂಚಾಯತ ಅಧ್ಯಕ್ಷತೆವಹಿಸಿದ ಗ್ರಾಮ ಪಂಚಾಯತ ಅಧ್ಯಕ್ಷೆ ಸುಮಂಗಲಾ ನಾಯ್ಕ ಮಾತನಾಡುತ್ತ ಮಹಿಳೆಯರ ಸಬಲೀಕರಣಕ್ಕೆ ಕಾನೂನಿನ ಬೆಂಬಲ ಪಡೆಯಬೇಕು. ಕಾನೂನು ಮಹಿಳೆಯರ ಪರವಾಗಿ ಇದೆ ಎಂದರು. ಪ್ರಸ್ತಾವಿಕವಾಗಿ ಮಾತನಾಡಿದ ಗ್ರಾಮ ಪಂಚಾಯತ ಹಿಂದಿನ ಅಧ್ಯಕ್ಷ ದೇವರಾಜ ಮರಾಠಿ ಮಾತನಾಡುತ್ತ ಗ್ರಾಮೀಣ ಜನರಿಗೆ ಕಾನೂನಿನ ಕೊರತೆಯಿಂದ ಅನ್ಯಾಯವಾಗದ ರೀತಿಯಲ್ಲಿ ನೋಡಿಕೊಳ್ಳುವದು ಇಂದಿನ ಸಮಾಜದ ಕರ್ತವ್ಯ ಎಂದರೆ, ಕಾರ್ಯಕ್ರಮದಲ್ಲಿ ಸ್ವಾಗತ ಮತ್ತು ನಿರೂಪಣೆ ಪಿ.ಡಿ.ಓ ಪವೀತ್ರ ಮಾಡಿದರು. ಸಭೆಯಲ್ಲಿ ರಾಧಾ ಹೆಗಡೆ ರಾಗಿಹೊಸಳ್ಳಿ, ವನಿತಾ ಸಂತೋಷ ಗೌಡ, ಗಜಾನನ ನಾರಾಯಣ ಹೆಗಡೆ, ಸುರೇಶ ಪಟಗಾರ ಮುಂತಾದವರು ಚರ್ಚೆಯಲ್ಲಿ ಭಾಗವಹಿಸಿದ್ದರು
ಸಂವಾದ :

ಕಾನೂನಿನ ಸಮಸ್ಯೆಗಳ ಕುರಿತು ಸಭೆಯಲ್ಲಿ ಗ್ರಾಮಸ್ಥರೊಂದಿಗೆ ಮುಕ್ತ ಸಂವಾದ ಎರ್ಪಟ್ಟಿರುವದು ಮತ್ತು ಕಾನೂನಾತ್ಮಕ ಅಂಶಗಳ ಕುರಿತು ಚರ್ಚಿಸಿರುವದು ಸಭೆಯ ವಿಶೇಷವಾಗಿತು

error: