April 19, 2024

Bhavana Tv

Its Your Channel

ಮರಿಚೀಕೆಯಾದ ಅರಣ್ಯ ವಸತಿದಾರರ ವಸತಿ ಸೌಲಭ್ಯ :ಗೋಂದಲಮಯವಾದ ಅರಣ್ಯ, ವಸತಿ, ಜಿ.ಪಂ ಇಲಾಖೆಯ ಆದೇಶಗಳು.

ಶಿರಸಿ: ಇತ್ತೀಚಿನವರೆಗೆ ಅರಣ್ಯ ಭೂಮಿ ಹಕ್ಕು ಮಂಜೂರಿಯಾಗದ ವಸತಿದಾರರಿಗೆ ಸರಕಾರದ ಇತ್ತೀಚಿನ ವಿವಿಧ ಇಲಾಖೆಯ ಸ್ಪಷ್ಟ, ವಿಭಿನ್ನ ಹಾಗೂ ವ್ಯತಿರಿಕ್ತವಾದ ಆದೇಶಗಳು ಅರಣ್ಯವಾಸಿಗಳಲ್ಲಿ ಗೊಂದಲಕ್ಕೆ ಕಾರಣವಾಗಿರುವ ಹಿನ್ನೆಲೆಯಲ್ಲಿ ಅರಣ್ಯ ಪ್ರದೇಶದಲ್ಲಿ ಮನೆ ಕಟ್ಟಿಕೊಳ್ಳಲು ವಸತಿ ಇಲಾಖೆಯಿಂದ ದೊರಕುವುದೆಂಬ ಧನ ಸಹಾಯ ಕಾನೂನು ತೊಡಕುಗಳಿಂದ ಮರಿಚಿಕೆಯಾಗಿ ಅತಿಕ್ರಮಣದಾರರ ಮುಖದಲ್ಲಿ ನಿರಾಶೆಯ ಛಾಯೆ ಉಂಟಾಗಿದೆ.


ವಸತಿ ಇಲಾಖೆ ಬೆಂಗಳೂರು, ಅರಣ್ಯ ಪ್ರದೇಶದಲ್ಲಿ ಮನೆ ತೆರಿಗೆ ಪಾವತಿಸುವವರಿಗೆ ಆರ್ಥಿಕ ಸಹಾಯ ನೀಡುತ್ತೇವೆ ಎಂದು ಆದೇಶಿಸಿದರೇ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿಲ್ಲಾ ಪಂಚಾಯತ ಕಾರವಾರ ಅವರು ವಸತಿ ಯೋಜನೆಗೆ ಸ್ವಂತ ನಿವೇಶನದ ಹಕ್ಕು ಪತ್ರ ಹೊಂದಿರಬೇಕೆAಬ ಷರತ್ತು ವಿಧಿಸಿದ್ದಾರೆ. ಅರಣ್ಯ ಅಧಿಕಾರಿಗಳು ಅರಣ್ಯ ಪ್ರದೇಶದಲ್ಲಿ ಯಾವುದೇ ವಸತಿ ಯೋಜನೆ ಮಂಜೂರಿ ಮಾಡಬಾರದು, ಮಾಡಿದಲ್ಲಿ ರದ್ದು ಪಡಿಸಬೇಕು, ಇಲ್ಲದಿದ್ದಲ್ಲಿ ಪಿಡಿಓಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದೆಂಬ ಎಚ್ಚರಿಕೆಯ ಪತ್ರ
ನೀಡಿರುತ್ತಾರೆ. ಇನ್ನೋಂದೆಡೆ, ಅನಧೀಕೃತ ಅರಣ್ಯವಾಸಿಗಳೊಂದಿಗೆ ಯಾವ ಕಾರಣಕ್ಕೂ ವಿನಾಯಿತಿಯಾಗಲೀ, ರಾಜಿ ಮಾಡಿಕೊಳ್ಳುವುದಾಗಲೀ ಅವಕಾಶವಿಲ್ಲ. ಕಾನೂನಿನ ನೀತಿ, ನಿಯಮದ ಅಡಿಯಲ್ಲಿ ಯಾವ ಕಾರಣಕ್ಕೂ ಅರಣ್ಯ ಅತಿಕ್ರಮಣದಾರರಿಗೆ ರಕ್ಷಣೆ ನೀಡಬಾರದೆಂದು ಸುಫ್ರೀಂ ಕೋರ್ಟ ನ್ಯೂಡೆಲ್ಲಿ ಆದೇಶ ನೀಡಿರುವುದು, ಅರಣ್ಯ
ಪ್ರದೇಶದಲ್ಲಿನ ಮನೆ ಕಟ್ಟಿ ಕೊಳ್ಳುವ ಆರ್ಥೀಕ ಸೌಲಭ್ಯದ ಆದೇಶಗಳು ಗೋಂದಲಮಯವಾಗಿದೆ. ಈ ಹಿನ್ನೆಲೆಯಲ್ಲಿ ಆದೇಶಗಳ ಕಾನೂನಾತ್ಮಕ ಮೌಲ್ಯತೆ ಸರಕಾರ ಸ್ಪಷ್ಟ ಪಡಿಸುವುದು ಅವಶ್ಯವಾಗಿದೆ.

ಸಭಾಧ್ಯಕ್ಷರಿಗೆ ಕೋರಿಕೆ:
ಸರಕಾರದ ಅಸ್ಪಷ್ಟ ನಿಲುವಿನ ಕುರಿತು ವಸತಿ ಸೌಲಭ್ಯ ನೀಡುವ ಹಿನ್ನೆಲೆಯಲ್ಲಿ ಉಂಟಾಗಿರುವ ಕಾನೂನಾತ್ಮಕ ತೊಡಕು ನಿವಾರಿಸುವ ದಿಶೆಯಲ್ಲಿ ಇತ್ತೀಚಿನ ಆದೇಶಗಳ ಕಾನೂನಾತ್ಮಕ ಬದ್ಧತೆಯ ಮೌಲ್ಯತೆ ಪ್ರಕಟಿಸಲು ಅಧಿಕಾರಿಗಳಿಗೆ ಸೂಚಿಸುವಂತೆ ಸಭಾಧ್ಯಕ್ಷ ಕಾಗೇರಿ, ವಿಶ್ವೇಶ್ವರ ಹೆಗಡೆ ಅವರಿಗೆ ಅರಣ್ಯ ಭೂಮಿ ಹಕ್ಕು ಹೋರಾಟಗಾರ ರವೀಂದ್ರ ನಾಯ್ಕ ಅವರು ಕೋರಿದ್ದಾರೆ.

ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಶಿರಸಿ ಅವರಿಗೆ ಕಳೆದ ವರ್ಷ ಅಗಸ್ಟ ತಿಂಗಳಲ್ಲಿ ಗೊಂದಲಮಯವಾದ ವಿವಿಧ ಇಲಾಖೆಯ ಆದೇಶದ ಕುರಿತು ಅರಣ್ಯ ಇಲಾಖೆಯಸ್ಪಷ್ಟತೆಯನ್ನ ಪ್ರಕಟಿಸಬೇಕೆಂಬ ಹೋರಾಟಗಾರರ ವೇದಿಕೆಯ ಲಿಖಿತ ಪತ್ರಕ್ಕೂ ಇಲ್ಲಿಯವರೆಗೂ ಉತ್ತರಿಸದಿರುವುದು ಖೇದಕರ ಎಂದು ರವೀಂದ್ರ ನಾಯ್ಕ ತಿಳಿಸಿದ್ದಾರೆ

error: