April 24, 2024

Bhavana Tv

Its Your Channel

ನೆನೆಗುಂದಿಗೆ ಬಿದ್ದಿರುವ ನಗರ ಅರಣ್ಯ ಅತಿಕ್ರಮಣದಾರರ ಅರ್ಜಿಗಳು ; ಮಂಜೂರಿ ಪ್ರಕ್ರೀಯೆ ಸಂಪೂರ್ಣ ಸ್ಥಗಿತ.

ಶಿರಸಿ: ಅರಣ್ಯ ಹಕ್ಕು ಕಾಯಿದೆ ಅನುಷ್ಟಾನಕ್ಕೆ ಬಂದು ಒಂದುವರೆ ದಶಕಗಳಾದರೂ ನಗರ ಅರಣ್ಯ ಅತಿಕ್ರಮಣದಾರರ ಅರ್ಜಿಗಳು ನೆನೆಗುಂದಿಗೆ ಬಿದ್ದಿದೆ. ಮಂಜೂರಿ ಪ್ರಕ್ರಿಯೆಗೆ ಸಂಬAಧಿಸಿ ಯಾವುದೇ ಕ್ರೀಯೆಗಳು ಜರುಗದೇ ಸಂಪೂರ್ಣ ಸ್ಥಗಿತಗೊಂಡಿರುವುದು ವಿಷಾದಕರ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದರು.

ಅಕ್ಟೋಬರ್, 2 ಗಾಂಧಿ ಜಯಂತಿಯAದು ಶಿರಸಿಯಲ್ಲಿ ಹಮ್ಮಿಕೊಂಡ ಅರಣ್ಯವಾಸಿಗಳ ಮೆರವಣಿಗೆ ಮತ್ತು ಧರಣಿಗೆ ಸಂಬAಧಿಸಿ ಶಿರಸಿ ತಾಲೂಕಿನ,
ಗಣೇಶನಗರದಲ್ಲಿ ಜರುಗಿದ ಪೂರ್ವಭಾವಿ ಸಭೆಯಲ್ಲಿ ಮಾತನಾಡುತ್ತಿದ್ದರು. ಕಾರವಾರ ಜಿಲ್ಲೆಯಲ್ಲಿ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ವಿವಿಧ ತಾಲೂಕಿನ ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ 8,420 ಅರ್ಜಿಗಳು ದಾಖಲಾಗಿದ್ದು, ಅವುಗಳಲ್ಲಿ ಬಹುತೇಕ ಜಿಪಿಎಸ ಆಗದೇ, ವಾರ್ಡ ಸಮಿತಿ ಸಭೆಗಳು ಜರುಗದೇ, ಮಂಜೂರಿ ಪ್ರಕ್ರೀಯೆಗಳು ಇತ್ತೀಚಿನ ವರ್ಷಗಳಲ್ಲಿ ಸಂಪೂರ್ಣ ಸ್ಥಗಿತಗೊಂಡಿದ್ದು ಇರುತ್ತದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಸಭೆಯ ಅಧ್ಯಕ್ಷತೆಯನ್ನು ನಗರ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ಪ್ರದೀಪ್ ಶೆಟ್ಟಿ ವಹಿಸಿದ್ದರು. ಧುರೀಣರಾದ ಸಂಜೀವ್ ಶೆಟ್ಟಿ, ವಿನೋಧ ಸಾವಂತ, ರಾಜು ಮುಕ್ರಿ ಗ್ರಾಮ ಪಂಚಾಯತ ಸದಸ್ಯ, ಮಾರುತಿ ಬೋವಿವಡ್ಡರ್, ಕೃಷ್ಣ ಶೆಟ್ಟಿ, ಪ್ರಕಾಶ ಗೋಸಾವಿ ಮುಂತಾದವರು ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ನಗರ ಅರಣ್ಯ ಪ್ರದೇಶದಲ್ಲಿ ವಾಸ್ತವ್ಯಕ್ಕಾಗಿ ಅತಿಕ್ರಮಿಸಿದವರಿಗೆ ಭೂಮಿ ಹಕ್ಕು ದೊರಕದೇ ಸರಕಾರದ ಸೌಲಭ್ಯದಿಂದ ವಂಚಿತರಾಗುತ್ತಿದ್ದೇವೆ. ಸರಕಾರದ ಹಕ್ಕು ಪತ್ರ ನೀಡಬೇಕೆಂದು ಅಗ್ರಹಿಸಿದರು.
ಅಶೋಕ ದಾವಣಗೇರೆ, ನಾಗೇಶ ಗೋಸಾವಿ, ಕೃಷ್ಣ ಗಾಂವಕರ ಮುಂತಾದವರು ಉಪಸ್ಥಿತರಿದ್ದರು.

ಅತೀ ಹೆಚ್ಚು ಅರ್ಜಿ ಯಲ್ಲಾಪುರ :
ಉತ್ತರ ಕನ್ನಡ ಜಿಲ್ಲೆಯಲ್ಲಿ ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಒಟ್ಟು 213 ವಾರ್ಡ ಅರಣ್ಯ ಹಕ್ಕು ಸಮಿತಿ ಅಸ್ತಿತ್ವಕ್ಕೆ ಬಂದಿದ್ದು ಇರುತ್ತದೆ. ಅತೀಹೇಚ್ಚು ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ 1750 ಅರ್ಜಿ ಸಲ್ಲಿಸಿರುವುದು ಯಲ್ಲಾಪುರ ನಗರ ಪ್ರದೇಶದಲ್ಲಿ. ತದನಂತರ ಸಿದ್ಧಾಪುರ 1391, ಹಳಿಯಾಳ 1570(ಟೌನ್ ಪಂಚಾಯತ 260, ಕಾರ್ಪೋರೇಶನ್ 1310) , ಶಿರಸಿ 1241, ಮುಂಡಗೋಡ 854, ಹೊನ್ನಾವರ 519, ಕುಮಟ 414, ಭಟ್ಕಳ 391, ಅಂಕೋಲಾ 270, ಕಾರವಾರ 20 ಅರ್ಜಿಗಳು ವಿಚಾರಣೆ ಇಲ್ಲದೇ ನೆನೆಗುಂದಿಗೆ ಬಿದ್ದಿರುವುದು ಖೇದಕರ ಎಂದು ರವೀಂದ್ರ ನಾಯ್ಕ ಹೇಳಿದರು.

error: