December 6, 2022

Bhavana Tv

Its Your Channel

ಧನಗರ್ ಗೌಳಿ ಸಮುದಾಯದ “ಗಜಾ” ನೃತ್ಯವನ್ನು “ಧಾನ್ ಫೌಂಡೇಶನ್ ಶಿರಸಿ”26ನೇ ವರ್ಷದ ಸಂಸ್ಥಾಪನ ದಿನಾಚರಣೆಯ ಕಾರ್ಯಕ್ರಮದಲ್ಲಿ ಪ್ರದರ್ಶನ

ವರದಿ: ವೇಣುಗೋಪಾಲ ಮದ್ಗುಣಿ

ಶಿರಸಿ:ಯುವಕ ಮಂಡಳ ರಾಜೀವಾಡ ಇವರ ವತಿಯಿಂದ ಧನಗರ್ ಗೌಳಿ ಸಮುದಾಯದ “ಗಜಾ” ನೃತ್ಯವನ್ನು ನಗರದ ಸಾಮ್ರಾಟ್ ಹೋಟೆಲ್ ವಿನಾಯಕ ಭವನದಲ್ಲಿ “ಧಾನ್ ಫೌಂಡೇಶನ್ ಶಿರಸಿ”26ನೇ ವರ್ಷದ ಸಂಸ್ಥಾಪನ ದಿನಾಚರಣೆಯ ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಗಜಾನನ ಹೆಗಡೆ ಪ್ರಾದೇಶಿಕ ಸಂಯೋಜಕರು, ಹಾಗು ಮುಖ್ಯ ಅತಿಥಿಗಳಾಗಿ ಡಾ. ಶಿವಶಂಕರ ಮೂರ್ತಿ, ಹಿರಿಯ ವಿಜ್ಞಾನಿಗಳು ಏಗಿಏ ಶಿರಸಿ,ಇವರು ವಹಿಸಿಕೊಂಡಿದ್ದು, ನರೇಂದ್ರ ಶಾಸ್ತ್ರೀ ಗೌಡ,ಯುವಕ ಮಂಡಳ ರಾಜಿವಾಡ ಸಂಯೋಜಕರಾದ ಬಾಗು ಶೇಳಕೆ, ಗೋಪಾಲ ಪಟಗಾರ ಸದಸ್ಯರು ಗ್ರಾಮ ಪಂಚಾಯತ ಬಿಸಲಕೊಪ್ಪ ಇವರು ಉಪಸ್ಥಿತರಿದ್ದರು, ಕಾರ್ಯಕ್ರಮದಲ್ಲಿ ಪ್ರಬಂಧ ಸ್ಪರ್ಧೆಯ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು, ಸಂಸ್ಥೆಯ ಕಾರ್ಯ ಚಟುವಕೆಗಳ ಯೋಜನೆಯ ಕ್ರಿಯಾಯೋಜನೆಯನ್ನು ಬಿಡುಗಡೆಗೊಳಿಸಲಾಯಿತು, ಕಾರ್ಯಕ್ರಮದಲ್ಲಿ ಸಂಸ್ಥೆಯ ವಿವಿಧ ಫಲಾನುಭವಿಗಳು, ರೈತ ಭಾಂಧವರು ಸೇರಿ ವಿಜೃಂಭಣೆಯಿAದ ಕಾರ್ಯಕ್ರಮ ನೆರವೇರಿಸಲಾಯಿತು.

About Post Author

error: