April 24, 2024

Bhavana Tv

Its Your Channel

ಅಂಬಾಗಿರಿಯಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ಸಾಂಸ್ಕೃತಿಕ ಸ್ಪರ್ಧೆ

ವರದಿ: ವೇಣುಗೋಪಾಲ ಮದ್ಗುಣಿ

ಸಿರ್ಸಿ : ಅಂಬಾಗಿರಿ ವಿಜಯನಗರ ಯುವಕ ಮಂಡಳಿಯವರು ಸ್ಥಳೀಯರಿಗೇ ಏರ್ಪಡಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಾರೋಪ ಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವಕ ಮಂಡಳದ ಅಧ್ಯಕ್ಷ ಉಮೇಶ್ ಕಂಚುಗಾರ ವಹಿಸಿದ್ದರು. ಉದ್ಘಾಟನಾ ಕಾರ್ಯಕ್ರಮವನ್ನು ನೆರವೇರಿಸಿದ ಅಂಭಾಗಿರಿ ದೇವಸ್ಥಾನದ ಅಧ್ಯಕ್ಷರಾದ ವಿ ಎಂ ಹೆಗಡೆ ಮಾತನಾಡಿ ಇಂತಹ ಸಮಾಜಮುಖಿ ಕಾರ್ಯಕ್ರಮಗಳನ್ನು ಸ್ಥಳೀಯ ಯುವಕ ಮಂಡಳ ಆಯೋಜಿಸಿರುವುದು ಸ್ವಾಗತಾರ್ಹ. ನಮ್ಮ ದೇವಸ್ಥಾನ ಸದಾ ಉತ್ತಮ ಕಾರ್ಯಕ್ರಮಗಳಿಗೆ ಮುಕ್ತವಾಗಿದೆ ಎಂದರು. ಮುಖ್ಯ ಅತಿಥಿಯಾಗಿ ಮಾತನಾಡಿದ ಲಕ್ಷ್ಮಣ ಶಾನಭಾಗ ಯುವಕರು ಉತ್ತಮ ಕಾರ್ಯೋನ್ಮುಖರಾಗಬೇಕು. ಈ ದಿಶೆಯಲ್ಲಿ ಮುಂದುವರೆಯಿರಿ ಎಂದರು. ಮತ್ತೋರ್ವ ಮುಖ್ಯ ಅತಿಥಿ ಸುಮಾ ಉಗ್ರಾಣಕರ ಯುವಕರು ತಮ್ಮ ಅಮೂಲ್ಯ ಸಮಯವನ್ನು ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವತ್ತ ಸಂಘಟನಾತ್ಮಕ ವಾಗಿ ಪ್ರಯತ್ನಿಸುತ್ತಾ ಇರುವುದು ಶ್ಲಾಘನೀಯ. ಉತ್ತಮ ಕೆಲಸಕ್ಕೆ ಸದಾ ಈ ಭಾಗದ ಜನರ ಸಹಯೋಗ ಇದೆ ಎಂದರು. ಮತ್ತೋರ್ವ ಅತಿಥಿ ಪವಿತ್ರಾ ಹೊಸೂರು ಸಮಯೋಚಿತವಾಗಿ ಮಾತನಾಡಿದರು.
ಗಾಂಧಿನಗರ ವಿಜಯನಗರ ಭಾಗದಿಂದ ಭಾರತ ಸೈನ್ಯದಲ್ಲಿ ಸೇವೆ ಸಲ್ಲಿಸಿ ಬಂದ ಮೂವರು ಯೋಧರಾದ ನಾಗೇಶ್ ಗವಳಿ. ಜೀವನ ನಾಯ್ಕ, ಮತ್ತು ಶಂಕರ್ ನಾಯ್ಕ ಇವರನ್ನೂ ಶಾಲು ಹೊದಿಸಿ ಫಲ ತಾಂಬೂಲ ನೀಡಿ ಗೌರವಿಸಲಾಯಿತು.

ಸಭಾ ಕಾರ್ಯಕ್ರಮ ಮುಗಿದನಂತರ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು
ಚಿತ್ರಕಲೆಯಲ್ಲಿ ಒಂದರಿAದ ನಾಲ್ಕನೇ ವರ್ಗ. ಪ್ರಥಮ ಸಾಗರ್ ಶೆಟ್ಟಿ, ದ್ವಿತೀಯ ಆದಿತ್ಯ ನಾಯ್ಕ, ತೃತೀಯ ಆರಾಧ್ಯ ಆರ್ ಪಾಟೀಲ್, ಐದರಿಂದ ಎಂಟನೇ ವರ್ಗ:- ಪ್ರಥಮ. ಖುಷಿ ಗಜಾನನ ಶೇಟ್, ದ್ವಿತೀಯ. ರಚನಾ ಗೌಡ, ತೃತೀಯ, ಪರಧೀನ್, ಪ್ರಭಂದ ಸ್ಪರ್ದೆ:– ಪ್ರಥಮ ಸಮೀಕ್ಷಾ ನಾಯ್ಕ, ದ್ವಿತೀಯ. ಮಹಿಮಾ ಅಂಗಡಿ,
ತೃತೀಯ. ವೈಭವಿ ರಾವ್, ರಂಗೋಲಿ ಸ್ಪರ್ಧೆ ಹನ್ನೆರಡು ವರ್ಷಕ್ಕೆ ಮೇಲ್ಪಟ್ಟು:- ಪ್ರಥಮ. ಕಲ್ಪನಾ ಕಲ್ಲೂರ,
ದ್ವಿತೀಯ. ವಿದ್ಯಾ ದೇಶಬಂಡಾರಿ, ತೃತೀಯ. ಶಾರದಾ ಪೂಜಾರಿ, ವಾಲಿಬಾಲ್ ಪಂದ್ಯಾವಳಿ:-
ಪ್ರಥಮ ಸಂಜಯ ನಾಯ್ಕ ಮತ್ತು ತಂಡದವರು, ದ್ವಿತೀಯ. ರವಿಕುಮಾರ್ ಮತ್ತು ತಂಡ, ಮಹಿಳೆಯರಿಗಾಗಿ ಬಲೂನ್ ಊದುವ ಸ್ಪರ್ಧೆ:- ಪ್ರಥಮ. ಶೋಭಾ ನಾಯ್ಕ, ದ್ವಿತೀಯ. ಅಶ್ವಿನಿ ಶೆಟ್ಟಿ, ತೃತೀಯ. ಜೋತ್ನ ಬ್ಯಾಡಗಿ,
ಮೂಜಿಕಲ್ ಛೇರ್:- ಪ್ರಥಮ. ಗೌತಮಿ ಕೆರೆಮನೆ, ದ್ವಿತೀಯ. ಸುಧಾ ನಾಯ್ಕ, ತೃತೀಯ. ಕವಿತಾ ನಾಯ್ಕ,
ಛದ್ಮವೇಷ ಸ್ಪರ್ದೆ:– 1ರಿಂದ 6 ವರ್ಷ ಪ್ರಥಮ. ರಿಷಿ ರಮೇಶ್ ಹೊಂಬಾಳೆ, ದ್ವಿತೀಯ. ಆವ್ಯ ನವಿಲಗೋಣ,
ತೃತೀಯ. ಆಧ್ಯ ಶೇಟ್, ಸಮಾಧಾನಕರ ಕರುಣಾ ಗೌಡ, ಏಳರಿಂದ ಹನ್ನೆರಡು ವರ್ಷ:- ಪ್ರಥಮ. ದೇಶಭಂಡಾರಿ,
ದ್ವಿತೀಯ. ದಿಶಾ ಪ್ರಶಾಂತ, ತೃತೀಯ. ಅನಿಕಾ ಪಲ್ಕರ್,ಪವನ ಭಂಡಾರಿ ಸಮಾಧಾನಕರ, ಭಕ್ತಿಗೀತೆ ಸ್ಪರ್ದೆ ಕಿರಿಯರ ವಿಭಾಗ:- ಪ್ರಥಮ. ಸಹನಾ ಹೆಗಡೆ, ದ್ವಿತೀಯ ಸಾನ್ವಿ ನವಿಲಗೊಣ, ತೃತೀಯ. ಟಿ ಶ್ರೀಷ,
ಹಿರಿಯರ ವಿಭಾಗ:- ಪ್ರಥಮ . ಚಂದ್ರಕಲಾ ನಾಯ್ಕ, ದ್ವಿತೀಯ. ಲೀನಾ ರಾಘವೇಂದ್ರ, ತೃತೀಯ ಗೌತಮಿ ಕೆರೆಮನೆ,ಜಾನಪದ ನೃತ್ಯ:- ಪ್ರಥಮ. ಗಿರಿಧರ ಕೆರೆಮನೆ ಮತ್ತು ತಂಡ, ದ್ವಿತೀಯ. ನಿದೀಪ್ತಿ ಮತ್ತು ತಂಡ,
ತೃತೀಯ. ರಚನಾ ಸಂಗಡಿವರಿಗೆ ಪಾರಿತೋಷಕ ಮತ್ತು ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ನಗರಸಭಾ ಸದಸ್ಯರಾದ ರಮಾಕಾಂತ ಭಟ್ಟ ವೇದಿಕೆಯಲ್ಲಿದ್ದು ಸಾಂದರ್ಭಿಕ ಮಾತನಾಡಿದರು.,ಲತಾಭಂಡಾರಕರ ವೇದಿಕೆಯಲ್ಲಿದ್ದರು. ನಿರ್ಣಾಯಕರಾಗಿ ತಮ್ಮ ಅಮೂಲ್ಯ ಸಮಯವನ್ನು ನೀಡಿದ ವೀಣಾ ಜೋಶಿ.ವಿದ್ಯಾ ವೈದ್ಯ. ಸುಮಾ ಉಗ್ರಾಣಕರ್. ಆಶಾ ಶೆಟ್ಟಿ.ಪವಿತ್ರಾ ಹೊಸೂರು.ಆಶಾ ಬ್ಯಾಡಗಿ.ರೇಷ್ಮಾ ನವಿಲಾಗೋಣ.ವೀಣಾ ಉಪಾಧ್ಯಾಯ. ರಾಧಾ ನಾಯ್ಕ ಮತ್ತು ಶೋಭಾ ಸಕಲಾತಿ ಅವರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ರಮೇಶ ಹೊಂಬಾಳೆಯವರು ಪ್ರಾಸ್ತಾವಿಕ ಮಾತನಾಡಿ ಯುವಕ ಮಂಡಳ ನೆಡೆದ ಉದ್ದೇಶಗಳ ಕುರಿತು ವರದಿ ನೀಡಿದರು.
ಶ್ವೇತಾ ನಾಯ್ಕ ಅವರು ಗಣ್ಯ ಮಾನ್ಯರನ್ನು ಸ್ವಾಗತಿಸಿದರು. ರಾಜು ನರಸಿಂಹ ಉಗ್ರಾಣಕರ ಕಾರ್ಯಕ್ರಮ ನಿರೂಪಿಸಿದರು.ಯುವಕ ಮಂಡಲದ ಕಾರ್ಯದರ್ಶಿ ರಮೇಶ್ ಹೊಂಬಾಳೆ, ಯತೀನ ನಾಯ್ಕ,ಅಜಯ್ ನಾಯ್ಕ,ಪ್ರವೀಣ ಜೋಗಳೇಕರ,ದರ್ಶನ ದೇಶಭಾಗ,ರಾಜೇಶ ಪಾವುಸ್ಕರ, ಭರತ್ ಭಟ್ಕಳ,ಜೈರಾಜ ಜೋಗಳೇಕರ,ರವೀಂದ್ರ ನಾಯ್ಕ, ಪ್ರೇಮ, ರಾಹುಲ, ಸಚಿನ್, ಮಂಜುನಾಥ ಭಂಡಾರಿ ಮುಂತಾದವರು ಉಪಸ್ಥಿತರಿದ್ದರು.

error: