April 18, 2024

Bhavana Tv

Its Your Channel

ನ. 11 ಕನ್ನಡ ನಾಡು ನುಡಿ ಕಾರ್ಯಕ್ರಮ ; ತುಳಸಿ ಹೆಗಡೆ, ಅದ್ವಿತ್, ಮುತ್ತ- ಯಶೋಧ ದಂಪತಿ ಹಾಗೂ ಕನ್ನಡ ಕ್ರೀಯಾ ಸಮಿತಿಗೆ ಸನ್ಮಾನ.

ಶಿರಸಿ: ಕನ್ನಡ ನಾಡು ನುಡಿ ನಮನ ಮತ್ತು ಪುನೀತ್ ರಾಜಕುಮಾರ್ ನೆನಪು ಕಾರ್ಯಕ್ರಮದ ಅಂಗವಾಗಿ ತುಳಸಿ ಹೆಗಡೆ ಬೆಟಕೊಪ್ಪ(ಯಕ್ಷಗಾನ), ಮಾಸ್ಟರ್ ಅದ್ವಿತ್ ಕಿರಣ ಕುಮಾರ ಕುಡಾಳಕರ ಶಿರಸಿ(ಕಿರಿಯ ಸಾಧನೆ) ಮುತ್ತಮತ್ತು ಯಶೋಧ ಗಿರಿಯ ಪೂಜಾರಿ ದಂಪತಿ ತಣ್ಣೀರಹೊಳೆ(ವಿಶೇಷ ವೃತ್ತಿ) ಹಾಗೂ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ನೌಕರರ ಕನ್ನಡ ಕ್ರೀಯಾ ಸಮಿತಿ ಸಂಘಟನೆಗಳ ವಿಶೇಷ ಸಾಧನ ಪ್ರಶಸ್ತಿಗೆ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಸ್ಫಂದನಾ ಸಾಂಸ್ಕçತಿಕ ಏಕಾಡೆಮಿ ಅಧ್ಯಕ್ಷರವೀಂದ್ರನಾಯ್ಕ ಪ್ರಕಟಣೆಯಲ್ಲಿತಿಳಿಸಿದ್ದಾರೆ.

ಸಾಧಕರಿಗೆ ನವೆಂಬರ್ 11 ರಂದು ಸಂಜೆ 7 ಗಂಟೆಗೆ ಶಿರಸಿ ನಗರ ಸಭೆಯ ರಂಗಮAದಿರದಲ್ಲಿ ಜರಗುವ ಸಾಂಸ್ಕçತಿಕ ಕಾರ್ಯಕ್ರಮದಲ್ಲಿಅಭಿನಂದಿಸಲಾಗುವುದೆAದು ಅವರು ಹೇಳಿದರು. ತುಳಸಿ ಹೆಗಡೆ ಇಂಡಿಯನ್ ಬುಕ್ ಆಫ್ ರೆಕಾರ್ಡ ಹಾಗೂ ಇಂಟರ್‌ನ್ಯಾಷನಲ್ ಬುಕ್ ಆಫ್ ರೆಕಾರ್ಡ ಪ್ರಶಸ್ತಿವಿಜೇತೆ, ಮಾಸ್ಟರ್ ಅದ್ವಿತ್ ಕಿರಣ ಕುಮಾರ ಕುಡಾಳಕರ ಶಿರಸಿ ಇಂಡಿಯನ್ ಬುಕ್ ಆಫ್ ರೆಕಾರ್ಡ ಅಲ್ಲದೇ, ಏಷಿಯನ್ ಬುಕ್ ಆಫ್ ರೆಕಾರ್ಡ ಪ್ರಶಸ್ತಿವಿಜೇತರಾಗಿದ್ದಾರೆ. ಮುತ್ತ ಮತ್ತು ಯಶೋಧ ಗಿರಿಯ ದಂಪತಿ ತಣ್ಣೀರಹೊಳೆ ವಿಶೇಷ ವೃತ್ತಿಯಾಗಿ ಮಿನುಗಾರಿಕೆ, ಬೇಸಾಯದಲ್ಲಿನ ಸಾಧನೆಗಾಗಿ ಆಯ್ಕೆಯಾಗಿದ್ದು, ಕನ್ನಡ ಕ್ರೀಯಾ ಸಮಿತಿ ಸಂಘಟನೆಯು ಎರಡುವರೆ ದಶಕದಿಂದ ಕನ್ನಡ
ಚಟುವಟಿಕೆಗೆ ಗುರುತಿಸಿ ಅಭಿನಂದಿಸಲಾಗುತ್ತಿದೆ ಎಂದು ಅವರು ಹೇಳಿದರು.

ತುಳಸಿ ಹೆಗಡೆ:
ಶಿರಸಿ ಮಾರಿಕಾಂಬ ಫ್ರೌಢಶಾಲೆಯ 8 ನೇ ತರಗತಿ ವಿದ್ಯಾರ್ಥೀನಿಯಾಗಿರುವ ತುಳಸಿ ಹೆಗಡೆ ವಿಶ್ವಶಾಂತಿ ಸಂದೇಶ ಸಾರುವ ಅಪರೂಪದ ಕರ್ನಾಟಕದ ಯಕ್ಷಗಾನ ಕಲೆ ಮೂಲಕ ದೇಶದಾದ್ಯಂತ 800 ಕ್ಕೂ ಅಧಿಕ ಪ್ರದರ್ಶನ ನೀಡಿದ ದೇಶದ ಏಕಮೇವ ಬಾಲೆಯಾಗಿರುವುದು ವಿಶೇಷ. ಚಿಕ್ಕ ವಯಸ್ಸಿನಲ್ಲಯೇ 13 ಕೆಜಿ ತೂಕದ ವೇಷ ಭೂಷಣ ಹಾಗೂ ಗೆಜ್ಜೆಯೊಂದಿಗೆ 3 ನೇ ವರ್ಷದಿಂದಲೇ ವೇಷ ತೊಟ್ಟು ಪೌರಾಣಿಕ ಕಥಾ ರೂಪಕ್ಕೆ ಸತತ 7 ವರ್ಷದಿಂದ ಏಕವೃತ್ತಿಯಾಗಿ ಕಾರ್ಯಸಾಧನೆ ಪ್ರಶಂಸನೀಯ.

ಮಾಸ್ಟರ್ ಅದ್ವಿತ್ :
ಶಿರಸಿಯ ಸೆಂಟ್ ಅಂಥೋನಿ ಆಂಗ್ಲ ಮಾಧ್ಯಮ ಶಾಲೆಯ 3 ನೇ ತರಗತಿಯಲ್ಲಿ ಓದುತ್ತಿರುವ ಮಾಸ್ಟರ್ ಅದ್ವಿತ್ 75 ನೇ ಸ್ವತಂತ್ರ ಅಮೃತ ಮಹೋತ್ಸವದ ಪ್ರಯುಕ್ತ ಜರುಗಿದ ಕಾರ್ಯಕ್ರಮದಲ್ಲಿ ಒಂದು ತಾಸು ಏಂಟು ನಿಮಿಷದವರೆಗೆ ತಡೆರಹಿತವಾಗಿ 75 ಭಾರೀ ನಮ್ಮ ರಾಷ್ಟçಗೀತೆ ಜನಗನಮನವನ್ನು ಹರ‍್ಮೋನಿಯಂ ಮೂಲಕ ನುಡಿಸಿದ್ದುಇರುತ್ತದೆ.

ಮುತ್ತ- ಯಶೋಧ ದಂಪತಿಗಳು:
ಶಿರಸಿ ತಾಲೂಕಿನ ತಣ್ಣೀರಹೊಳೆ ಕೃಷಿ, ತೋಟಗಾರಿಕೆ ಜೊತೆಯಲ್ಲಿವನಪ್ರದೇಶದಲ್ಲಿಯಾಂತ್ರಿಕ ಕೇರೆ ರಚಿಸಿಕೊಂಡು ವಿಶೇಷ ರೀತಿಯ ಲಾಭದಾಯಕವಾಗಿ ಮಿನುಗಾರಿಕೆ ಕೃಷಿ ಮೂಲಕ ಆಧುನಿಕ ಮಿನುಗಾರಿಕೆಯ ಕೃಷಿಗೆ ಇನ್ನೀತರರಿಗೂ ಮಾದರಿಯಾಗಿ ವಿಶೇಷ ವೃತ್ತಿಜೀವನಕ್ಕೆ ಕಾರಣರಾಗಿರುವರು.

ಕನ್ನಡ ಕ್ರೀಯಾ ಸಮತಿ:
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ನೌಕರರ “ಕನ್ನಡ ಕ್ರೀಯಾ ಸಮಿತಿ” ಕಳೆದ 25 ವರ್ಷದಿಂದ ವಿಶೇಷ ರೀತಿಯಲ್ಲಿಕನ್ನಡ ಕಾರ್ಯ ಚಟುವಟಿಕೆ ಗುರುತಿಸಿ ಕನ್ನಡ ಸಂಘಟನೆಗಾಗಿ ಪ್ರಶಸ್ತಿ ಪಡೆದುಕೊಂಡಿರುತ್ತಾರೆ.

error: