April 25, 2024

Bhavana Tv

Its Your Channel

ಕನ್ನಡ ನಾಡು ನುಡಿ ನಮನ- ಪುನೀತ್ ರಾಜಕುಮಾರ್ ನೆನಪು, ಸಮೂಹ ನೃತ್ಯಕ್ಕೆ ಭರ್ಜರಿ ತಯಾರಿ.

ಶಿರಸಿ: ಕನ್ನಡ ನಾಡು ನುಡಿ ನಮನ ಮತ್ತು ಪುನೀತ್ ರಾಜಕುಮಾರ ನೆನಪು ಕಾರ್ಯಕ್ರಮಕ್ಕೆ ಇಂದು ನ. 11, ಶುಕ್ರವಾರ ಶಿರಸಿಯಲ್ಲಿ ಜರುಗಲಿರುವ ಸಾಂಸ್ಕçತಿಕ ಕಾರ್ಯಕ್ರಮಕ್ಕೆ ಭವ್ಯ ವೇದಿಕೆ ಸಜ್ಜಾಗುತ್ತಿದ್ದು, ಸಾವಿರ ಯುವ ಸಮೂಹದಿಂದ ಜರುಗಲಿರುವ ಸಾಮೂಹಿಕ ನೃತ್ಯ ಕಾರ್ಯಕ್ರಮವು ವಿಶೇಷವಾಗಿದೆ ಎಂದು ಸ್ಫಂದನಾ ಸಾಂಸ್ಕçತಿಕ ಏಕಾಡೆಮಿ ಅಧ್ಯಕ್ಷರವೀಂದ್ರನಾಯ್ಕ ತಿಳಿಸಿದ್ದಾರೆ.
ಅವರು ಇಂದು ವಿಕಾಸ ಆಶ್ರಮ ರಂಗಮAದಿರದಲ್ಲಿ ಕಾರ್ಯಕ್ರಮದ ಪೂರ್ವಭಾವಿಯಾಗಿ ವೇದಿಕೆಯನ್ನ ವಿಕ್ಷಿಸುತ್ತಾಮೇಲಿನಂತೆ ಮಾತನಾಡಿದರು.
ನವೆಂಬರ್ 11 ಸಂಜೆ 4:30 ಕ್ಕೆ ಮಾರಿಕಾಂಬ ದೇವಾಲಯದ ಏದುರುಗಡೆಯಿಂದ ಭುವನೇಶ್ವರಿ ಮತ್ತು ಪುನೀತ್ ರಾಜಕುಮಾರ ಪೋಟೋದ ಸ್ಥಬ್ದ ಚಿತ್ರ, ಯಕ್ಷಗಾನ ವೇಷಧಾರಿ ಕತ್ತಕ್ಕಳಿ, ಜೂನಿಯರ್ ರಾಜಕುಮಾರ್, ಜನಪದ ನೃತ್ಯ ತಂಡ, ಕುಂಭಮೇಳ ಮುಂತಾದವುಗಳೊAದಿಗೆ ನಗರದ ಪ್ರಮುಖ ಬೀದಿಗಳಲ್ಲಿಸಂಚರಿಸಲಿದೆ.
ಆಕರ್ಷಿತ ಸಾಂಸ್ಕçತಿಕ ಕಾರ್ಯಕ್ರಮ:
ಬೆಂಗಳೂರಿನ ಮಧುರಗಾನ ರಸಮಂಜರಿ ತಂಡದ ಚಂದ್ರಶೇಖರ್ ಪುತ್ತುರು, ರವಿ ಮಂಜಗುಣಿ ಬೆಂಗಳೂರು, ಚೈತ್ರಾ ಬೆಂಗಳೂರು, ದೀಪಿಕಾ ಆಚಾರ್ಯ ಉಡುಪಿ, ಸಿಂಚನ ಬೆಂಗಳೂರು ಹಾಗೂ ರಾಜಕುಮಾರ ಅವರ ಹಾಡು ಮತ್ತುನೃತ್ಯವನ್ನು ಅಜಿತ್‌ಕುಮಾರ್(ಜೂನಿಯರ್ ರಾಜಕುಮಾರ) ಬೆಂಗಳೂರು, ಕಾರ್ಯಕ್ರಮ ಜರುಗಿಸಿಕೊಡುವರು. ರಾಜ್ಯ ಮಟ್ಟದ ನೃತ್ಯ ತಂಡಗಳಾದ ಅಮೆಜಿಂಗ್ ಸ್ಟೇರ‍್ಸ ಡಾನ್ಸ ಕ್ರೀವ್ ಕುಂದಾಪುರ, ಓಷಿಯನ್ ಡಾನ್ಸ ಹೊನ್ನಾವರ, ಸ್ಮಾರ್ಟ ಗ್ರೂಫ್ ಡ್ಯಾನ್ಸ ಶಿರಸಿ ತಂಡಗಳಿAದ ವಿಶಿಷ್ಟ ಬಗೆಯ ನೃತ್ಯ ಜುರುಗಿಸಿಕೊಡುವರು. ಅದರ ಜೊತೆಯಲ್ಲಿ ಜನಪದ ಕಲೆಯ ನೃತ್ಯ ಅನಾವರಣಗೊಳ್ಳುವುದು.
ಸನ್ಮಾನ:
ತುಳಸಿ ಹೆಗಡೆ ಬೆಟಕೊಪ್ಪ(ಯಕ್ಷಗಾನ), ಮಾಸ್ಟರ್ ಅದ್ವೆöÊತ್ ಕಿರಣಕುಮಾರ ಕುಡಾಳಕರ ಶಿರಸಿ(ಕಿರಿಯ ಅಪ್ರತಿಮ ಸಾಧನೆ) ಮುತ್ತ- ಯಶೋಧ ಗಿರಿಯ ಪೂಜಾರಿ ದಂಪತಿ ತಣ್ಣೀರಹೊಳೆ(ಆಧುನಿಕ ಮಿನುಗಾರಿಕೆ ವೃತ್ತಿ) ಹಾಗೂ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ನೌಕರರ ಕನ್ನಡ ಕ್ರೀಯಾ ಸಮಿತಿ ಸಂಘಟನೆಗಳನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುವುದು.

error: