April 25, 2024

Bhavana Tv

Its Your Channel

“ರಾಜ್ಯೋತ್ಸವ ಸಂಭ್ರಮ ಸಿರ್ಸಿ : ವಿಶೇಷ ವೈವಿಧ್ಯಮಯ ಕಾರ್ಯಕ್ರಮ”

ವರದಿ: ವೇಣುಗೋಪಾಲ ಮದ್ಗುಣಿ

ಶಿರಸಿ :-ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಶಿರಸಿ ತಾಲ್ಲೂಕು ಘಟಕ, ವಾಸ್ತವ ವಾರ್ತೆ ಸೇವಾ ವಾಹಿನಿ ಹಾಗೂ ನೆಮ್ಮದಿ ಓದುಗರ ಬಳಗದ ಸಂಯುಕ್ತಾಶ್ರಯದಲ್ಲಿ “ರಾಜ್ಯೋತ್ಸವ ಸಂಭ್ರಮ ಸಿರ್ಸಿ : ವಿಶೇಷ ವೈವಿಧ್ಯಮಯ ಕಾರ್ಯಕ್ರಮ” ನಡೆಯಿತು
ಕಾರ್ಯಕ್ರಮವು ಶಿರಸಿಪುರ ಗಣಪತಿಯ ಕುರಿತಾದ ಪ್ರಾರ್ಥನೆ ಹಾಗೂ ನಾಡಗೀತೆ ಮಹಿಮಾ ಹೆಗಡೆ ಹಾಗೂ ಶಮಾ ಭಟ್ಟರಿಂದ ಶುಭಾರಂಭಗೊAಡಿತು. ರಾಜು ಉಗ್ರಾಣಕರ ಎಲ್ಲರನ್ನೂ ಸ್ವಾಗತಿಸಿ ಪರಿಚಯಿಸಿದರು. ಸಭಾಧ್ಯಕ್ಷತೆಯನ್ನು ಹಿರಿಯ ಸಾಹಿತಿ, ಕವಯತ್ರಿ ಭಾಗೀರಥಿ ಹೆಗಡೆಯವರು ವಹಿಸಿದ್ದರು. ಮುಖ್ಯ ಅತಿಥಿಯಾಗಿ ಆದರಣೀಯ ಜಗದೀಶ ಭಂಡಾರಿಯವರು ಆಗಮಿಸಿದ್ದರು. ಜ್ಯೋತಿ ಬೆಳಗಿಸಿ ಕನ್ನಡಾಂಬೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ರಾಜಲಕ್ಷ್ಮಿ ಬೊಮ್ಮನಳ್ಳಿಯವರು ಸುಶ್ರಾವ್ಯವಾಗಿ ಹಚ್ಚೇವು ಕನ್ನಡದ ದೀಪ ಹಾಡಿದರು. ಭಾಗೀರಥಿ ಹೆಗಡೆಯವರು 4 ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಿದರು. ಇವುಗಳಲ್ಲಿ ದಾಕ್ಷಾಯಿಣಿ ಪಿ. ಸಿ.ಯವರ “ಚುಟುಕು ಪಟಾಕಿ”, ವಾಸುದೇವ ಶಾನಭಾಗರ “ಶಿರಸಿಯ ಕೀರ್ತಿ ಶಿಖರಗಳು”, ಡಿ.ಎಸ್.ನಾಯ್ಕ ಅವರ ” ವ್ಯಕ್ತಿ, ಪುಸ್ತಕ ಪ್ರೀತಿ ಮತ್ತು ಇತರ ಚಿಂತನಾ ಬರಹಗಳು” ಮತ್ತು ಕವಿ ಕೃಷ್ಣ ದತ್ತಾತ್ರೇಯ ಪದಕಿಯವರ “ಭರವಸೆಯ ಬೆಳಕು” ಕವನ ಸಂಕಲನ ಒಳಗೊಂಡಿತ್ತು.
“ಶಿರಸಿಯ ಕೀರ್ತಿ ಶಿಖರ” ಕೃತಿಯನ್ನು ಗಣಪತಿ ಭಟ್ಟ ವರ್ಗಾಸರ, “ವ್ಯಕ್ತಿ, ಪುಸ್ತಕ ಪ್ರೀತಿ, ಇತರ ಚಿಂತನಾ ಬರಹಗಳು” ಕೃತಿಯನ್ನು ಕೆ.ಮಹೇಶ, “ಭರವಸೆಯ ಬೆಳಕು” ಕೃತಿಯನ್ನು ಪ್ರತಿಭಾ ಎಂ ನಾಯ್ಕ ಹಾಗೂ “ಚುಟುಕು ಪಟಾಕಿ” ಕೃತಿಯನ್ನು ಡಿ.ಎಮ್.ಭಟ್ ಕುಳವೆಯವರು ಪರಿಚಯಿಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಜಗದೀಶ ಭಂಡಾರಿಯವರು ಕಾರ್ಯಕ್ರಮದ ಸಂಘಟನೆ ಬೇರೆ ಬೇರೆಯಾಗಿದ್ದರೂ ಎಲ್ಲರೂ ಒಗ್ಗಟ್ಟಿನಿಂದ ಸಾಹಿತ್ಯ ಸೇವೆಯನ್ನು ಮಾಡಬೇಕೆಂದು ಹೇಳಿ ಇರಬೇಕು ಇರುವಂತೆ ತೊರೆದು ಸಾವಿರ ಚಿಂತೆ ಎನ್ನವ ಆಶಯವನ್ನು ವ್ಯಕ್ತಪಡಿಸಿದರು.
ಭಾಗೀರಥಿ ಹೆಗಡೆಯವರು ನುಡಿಯಲ್ಲಿ ನಾಡು ನುಡಿಗಾಗಿ ದುಡಿಯಬೇಕೆನ್ನುತ್ತಾ 4 ಪುಸ್ತಕ ಒಟ್ಟಿಗೆ ಲೋಕಾರ್ಪಣೆಯಲ್ಲದೇ ವಿವಿಧ ಕ್ಷೆತ್ರಗಳ ಸಾಧಕರುಗಳನ್ನು ಗುರುತಿಸಿ ಸಮ್ಮಾನಿಸುತ್ತಿರುವುದು ನಿಜವಾದ ಸಂಭ್ರಮವೇ ಸರಿ. ಸಂತೋಷದಿAದ ನೆರೆದ ಸಾಹಿತ್ಯಾಸಕ್ತರನ್ನು ನೋಡಿ ಹೃದಯ ತುಂಬಿ ಬಂದಿದೆ ಎಂದರು.
ವೈದ್ಯಕೀಯ ಕ್ಷೇತ್ರದ ಡಾ.ವಿಶ್ವನಾಥ ಜೆ ರೇವಣಕರ, ಪತ್ರಿಕಾರಂಗದ ಪಿ.ಎಸ್.ಸದಾನಂದ ಹಾಗೂ ಸಮಾಜ ಸೇವಾ ಕ್ಷೇತ್ರದ ಸಚಿನ ಶಂಕರ ಕೊಡ್ಕಣಿಯವರನ್ನು ಸನ್ಮಾನಿಸಲಾಯಿತು. ಸಮ್ಮಾನಿತರ ಪರವಾಗಿ ಪಿ.ಎಸ್.ಸದಾನಂದ ಅವರು ಮಾತನಾಡಿ ನಾಲ್ಕು ದಶಕಗಳ ಪತ್ರಿಕಾರಂಗದ ವ್ಯವಸಾಯ ನನಗೆ ಸಂತಸ ತಂದಿದೆ ಎಂದು ಎಲ್ಲರ ಸಹಕಾರವನ್ನು ಸ್ಮರಿಸಿದರು. ಸಾಂದರ್ಭಿಕವಾಗಿ ಸತೀಶ ನಾಯ್ಕ ಹಾಗೂ ಡಾ.ವಿಶ್ವನಾಥ ರೇವಣಕರ ಅವರು ಮಾತನಾಡಿದರು.
ರಾಜಲಕ್ಷ್ಮಿ ಬೊಮ್ಮನಳ್ಳಿವರು ವಂದಿಸಿದರು, ರೋಹಿಣಿ ಹೆಗಡೆಯವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು. ಕವಿಗೋಷ್ಠಿಯಲ್ಲಿ 20 ಕವಿಗಳು ಭಾಗವಹಿಸಿ ತಮ್ಮ ಸ್ವರಚಿತ ಕವನಗಳನ್ನು ಸಂಗೀತಮಯವಾಗಿ ಪ್ರಸ್ತುತ ಪಡಿಸಿದರು. ಗೌರವ ಉಪಸ್ಥಿತಿಯಲ್ಲಿ ಕವಯತ್ರಿ ಸಾವಿತ್ರಿ ಶಾಸ್ತ್ರಿಯವರಿದ್ದರು. ಕೃಷ್ಣ ಪದಕಿಯವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಈ ಸಾಹಿತ್ಯ ಯಾತ್ರೆ ಸುಗಮವಾಗಿ ಸಾಗಲು ಕವಿಗಳು ಸಾಹಿತಿಗಳು ಕೈಜೋಡಿಸಿ, ಸರಸ್ವತಿಯ ಸೇವೆ ಮಾಡಬೇಕೆಂದರು. ಕಥೆಗಾರ ಗೋಷ್ಠಿಯನ್ನು ರಾಜು ಉಗ್ರಾಣಕರ ಸುಂದರವಾಗಿ ನಿರೂಪಿಸಿದರು. ನಾಗವೇಣಿ ಹೆಗ್ಗರ್ಸಿಮನೆ ವಂದಿಸಿದರು.
ನAತರ ನಡೆದ ಕೃತಿ ಅವಲೋಕನ ಕಾರ್ಯಕ್ರಮದಲ್ಲಿ ಡಾ.ಆರ್.ಜಿ.ಹೆಗಡೆ ಪ್ರಾಚಾರ್ಯರು ದಾಂಡೇಲಿ ಇವರು ಜಯಪ್ರಕಾಶ ಹಬ್ಬುರವರ ನೆನಪಿನ ಜರಡಿಯಲ್ಲಿ ಬಗೆಗೆ ಮಾತನಾಡಿ “ಸಾಹಿತ್ಯ ಒಂದು ಅಮಲು, ಮನಸ್ಸು ಮನಸ್ಸುಗಳ ಸಂವಾದವೇ ನೆಮ್ಮದಿಯ ಜೀವನ. ಕೃತಿಕಾರರು ತಮ್ಮ ಜೀವನ ಕಥೆಯನ್ನು ಫೋಟೋ ಗ್ಯಾಲರಿಯನ್ಬಾಗಿ ಮಾಡಿದ್ದಾರೆ. ಹರಡಿದ ವಿಷಯಗಳ ಮೂಲಕ ತಮ್ಮ ಕಥೆ ಹೇಳಿದ್ದಾರೆ. ಆತ್ಮಕಥೆಯನ್ನು ಯಾವುದೇ ಮುಲಾಜಿಲ್ಲದೇ ಪ್ರಾಮಾಣಿಕವಾಗಿ ಚಿತ್ರಿಸಿದ್ದಾರೆ ಎಂದರು. ಹಬ್ಬುರವರು ” ಸಾಹಿತ್ಯವೆನ್ನುವುದು ಒಂದು ಪದಾರ್ಥ ಅದಕ್ಕೆ ಹಾಕಿದ್ದ ಒಗ್ಗರಣೆಯ ಮುನ್ನುಡಿ ನನ್ನ ಸತ್ಯಶೋಧನೆಗೆ ಕನ್ನಡಿಯಾಗಿತ್ತೆಂದರು.
ಮುಖ್ಯ ಅತಿಥಿಯಾಗಿ ಅಶೋಕ ಹಾಸ್ಯಗಾರ ಇದೊಂದು ಉತ್ತಮ ಅವಲೋಕನ ಇಂತಹ ಆತ್ಮಕಥೆಗೂ ಪ್ರಶಸ್ತಿ ನೀಡಿ ಗೌರವಿಸುವುದು ಅತ್ಯಂತ ಅವಶ್ಯಕ ಕೆಲಸವಾಗಿದೆ. ಗಮನಿಸಬೇಕಾದ ಆತ್ಮಾವಲೋಕನ ಕೃತಿಯಾಗಿದೆ ಎಂದರು.
ಕೆ.ಮಹೇಶ ಅವರ ಸಂ-ಪ್ರೋಕ್ಷಣ ಕೃತಿಯನ್ನು ಭವ್ಯ ಹಳೆಯೂರು ಪರಿಚಯಿಸುತ್ತಾ ಈ ಕಥೆಗಳು ಜನಮಾನಸದಲ್ಲಿ ಇನ್ನೂ ಇರಲು ಕಾರಣ ಕಥೆ ಹೇಳುವ ರೀತಿ, ಹಳೆಯ ಹೊಸತರ ಸಂಗಮವೆAದರು. ಕೃತಿಕಾರ ಕೆ.ಮಹೇಶ ನನ್ನ ಈ ಕೃತಿ ಪ್ರಕಟವಾಗಲು ಪಿ.ಎಸ್.ಸದಾನಂದ ಅವರು ಕಾರಣವೆಂದರು.ಅಧ್ಯಕ್ಷೀಯ ಭಾಷಣದಲ್ಲಿ ಮನೋಹರ ಮಲ್ಮನೆಯವರು ಮಾತನಾಡಿ ಎಲ್ಲಾ ಪ್ರೀತಿಗಿಂತ ಸಾಹಿತ್ಯ ಪ್ರೀತಿ ದೊಡ್ಡದೆಂದು ಹೇಳಿದರು. ಪ್ರತಿಭಾ ಎಂ ನಾಯ್ಕ ಅವರು ನಿರೂಪಿಸಿದರು ಮತ್ತು ಸಾವಿತ್ರಿ ಶಾಸ್ತ್ರಿ ವಂದಿಸಿದರು.

error: