March 29, 2024

Bhavana Tv

Its Your Channel

ಕೃತಿಗಳು ಜೀವನ ತುಂಬಾ ಪ್ರೀತಿ ಬೆಳೆಸಬೇಕು-ರಮೇಶ ಹೆಗಡೆ ಕೆರೆಕೋಣ

ವರದಿ: ವೇಣುಗೋಪಾಲ ಮದ್ಗುಣಿ

ಸಿರ್ಸಿ : ಈಗಿನ ಯುವ ಜನತೆಯಲ್ಲಿ ಜೀವನದ ಬಗೆಗೆ ನಿರುತ್ಸಾಹವಿದೆ. ಅಂತಹ ಯುವಕರಲ್ಲಿ ಜೀವನ ಪ್ರೀತಿಯನ್ನು ಬೆಳೆಸುವಂತೆ ಕೃತಿ ಇರಬೇಕು. ಆ ಕಾರ್ಯವನ್ನು ಮನಿ ಟ್ರ‍್ಯಾಪ್ ಮಾಡಿದೆ ಎಂದು ರಮೇಶ ಹೆಗಡೆ ಕೆರೆಕೋಣ ಹೇಳಿದರು.
ಮಹೇಶ ಕುಮಾರ ಹೆನಕರೆಯವರು ರಚಿಸಿದ “ಮನಿ ಟ್ರ‍್ಯಾಪ್” ಎನ್ನುವ ಕಥಾಸಂಕಲನವನ್ನು ಪರಿಚಯಿಸುತ್ತ ಹೀಗೆ ಹೇಳಿದರು. 41 ಕಥೆಗಳನ್ನು ಹೊಂದಿರುವ ಈ ಕೃತಿಯು ಸಹಜತೆ, ವಾಸ್ತವದ ಪ್ರತಿಬಿಂಬವಾಗಿ ಜೀವನದ ವಿವಿಧ ಅನುಭವಗಳನ್ನ ಈ ಕಥೆಗಳು ಕಟ್ಟಿವೆ. ಅನಿರೀಕ್ಷಿತ ತಿರುವು, ಮೋಸದ ಹಗಲು ದರೋಡೆ ಇಂತಹ ಕುತೂಹಲಭರಿತವಾದ ವಿಷಯಗಳನ್ನು ಈ ಕಥೆಗಳು ಇರಿಸಿಕೊಂಡಿವೆ. ಸುಂದರ ಚಿತ್ರಕ್ಕೆ ಸುವರ್ಣದ ಚೌಕಟ್ಟನ್ನು ಹೊಂದಿರುವ ಕೃತಿ ಇದಾಗಿದೆ. ವಾಸ್ತವದ ಹತ್ತಿರದಲ್ಲಿ ಕಥೆ ಕಟ್ಟುವ ಕಲೆ ಮಹೇಶ್ ಕುಮಾರ ಹನಕೆರೆಯವರಿಗೆ ಸಿದ್ಧಿಸಿದೆ.ಲೇಖಕರ ಬಗೆಗಿನ ಅಪಪ್ರಚಾರಕ್ಕೆ ಕಿವಿಗೊಟ್ಟು ಬರೆಯುವ ಧೃತಿಯನ್ನು ಕಳೆದಿಕೊಳ್ಳಬೇಡಿ ಎನ್ನುವ ಕಿವಿ ಮಾತನ್ನು ಲೇಖಕರಿಗೆ ಹೇಳಿದರು.
ಮನಿ ಟ್ರ‍್ಯಾಪ್ ಕಥಾ ಸಂಕಲನವು ಜೀವನದ ಒಳಹೊಕ್ಕು ಮತಿಸಿದ ಕಥಾಗುಚ್ಚವಾಗಿದೆ ಎಂದು ಕೃತಿ ಬಿಡುಗಡೆ ಮಾಡಿದ ಖ್ಯಾತ ಮಾತುಗಾರ ಗಣಪತಿ ಭಟ್ ವರ್ಗಾಸರ ಅವರು ಮಾತನಾಡಿದರು.
ಕೃತಿಕಾರರಾದ ಮಹೇಶ ಕುಮಾರ ಹನಕೆರೆಯವರು ಶಿರಸಿಯ ಜನತೆಯ ಬಗೆಗಿರುವ ಅಭಿಮಾನವನ್ನು ಹಂಚಿಕೊಳ್ಳುತ್ತಾ.. ಸ್ನೇಹಿತರಾದ ಕೃಷ್ಣ ಪದಕಿಯವರ ಸ್ನೇಹವನ್ನು ಅಭಿನಂದಿಸಿ ಗುರುಗಳಂತಿರುವ ಗಣಪತಿ ಭಟ್ಟ ವರ್ಗಾಸರ ಅವರ ಅಭಿಮಾನವನ್ನು ಸ್ಮರಿಸಿಕೊಂಡರು. ತಮ್ಮ ಬರಹಕ್ಕೆ ಸಹಕರಿಸಿದ ಎಲ್ಲರಿಗೂ ವಂದಿಸಿದರು.
ಇದೇ ಕಾರ್ಯಕ್ರಮದಲ್ಲಿ ಅನಂತ ತಾಅಮ್ಹನಕರ್ ಅವರು ಬರೆದ “ಹೊತ್ತು ಕಳೆಯಲು ಬರೆದ ಹತ್ತು ಸಾಲುಗಳು” ಎನ್ನುವ ಕವನ ಸಂಕಲನದ ಕೃತಿ ಪರಿಚಯವನ್ನು ಕವಯತ್ರಿ ರೋಹಿಣಿ ಹೆಗಡೆಯವರು ಮಾಡಿದರು. ಓದುತ್ತಲೇ ತಾಳ ಹಾಕುವಷ್ಟು ಲಯ, ಛಂದ ಹಾಗೂ ಪ್ರಾಸಬದ್ಧ ವಾದ ಕವನಗಳು ಇಲ್ಲಿವೆ. ಇರುವ ಎಲ್ಲ ಕವನಗಳೂ ಸರಳ ವಸ್ತುವನ್ನು ಹೊಂದಿದ್ದು ಸುಂದರವಾದ ಸಹಜತೆಯ ಸೌಂದರ್ಯ ಕವನಕ್ಕಿದೆ. ಮೂಲ ಮರಾಠಿಯವರಾದರೂ ಕನ್ನಡವನ್ನು ಕಲಿತು ಚೆಂದನೆಯ ಕಾವ್ಯ ರಚಿಸುವ ಕವಿಯ ಗುಣವನ್ನು ಹೊಗಳಿ.. ತಾಮ್ಹನಕರ್ ಅವರು ಬರೆದ ಕವನವನ್ನು ಹಾಡಿದರು.
ಕವನ ಸಂಕಲನದ ಲೇಖಕರಾದ ಅನಂತ ತಾಮ್ಹನಕರ್ ಅವರು ತಮ್ಮ ಕನ್ನಡ ಸಾಹಿತ್ಯದ ಹಾದಿಯನ್ನು ಸ್ಮರಿಸಿಕೊಂಡರು. ಪದಬಂಧಗಳನ್ನು ರಚಿಸಿ ಕೃತಿಗಳನ್ನು ಹೊರತಂದಿದ್ದಾರೆ.
“ಮಕರ ಸಂಕ್ರಾAತಿಯ ಪರ್ವಕಾಲದ ಈ ಶುಭದಿನ ಪುಸ್ತಕ ಬಿಡುಗಡೆ, ಕೃತಿ ಅವಲೋಕನ ಮತ್ತು ಕವಿಗೋಷ್ಠಿ ಕಾರ್ಯಕ್ರಮ ಅಂದರೆ ಸಾಹಿತ್ಯ ಸರಸ್ವತಿಯ ಸೇವೆಯಲ್ಲಿ ಪಾಲ್ಗೊಂಡು ಪುನೀತರಾದ ನಾವೆಲ್ಲಾ ಭಾಗ್ಯವಂತರು. ಕಾರ್ಯಕ್ರಮ ಸಂಪನ್ನಗೊಳಿಸಲು ಸಹಕರಿಸಿದ ಸರ್ವರೂ ಧನ್ಯರು. ಇನ್ನೂ ಹೆಚ್ಚಿನ ಸೇವೆಯನ್ನು ಮಾಡುವ ಶಕ್ತಿ ನಿಮಗೆಲ್ಲ ಭಗವಂತ ಕರುಣಿಸಲಿ” ಎಂದು ಕೃಷ್ಣ ಪದಕಿಯವರು ಅಧ್ಯಕ್ಷೀಯ ನುಡಿಯಲ್ಲಿ ಹೇಳಿದರು..
ಅನಂತ ಹೆಗಡೆ ಬಾಳೆಗದ್ದೆ, ಜಯಪ್ರಕಾಶ್ ಹಬ್ಬು,ಶೋಭಾ ಭಟ್ಟ, ಭವ್ಯಾ ಹಳೆಯೂರು, ಕೆ.ಎಸ್. ಅಗ್ನಿಹೋತ್ರಿ, ಜಗದೀಶ ಭಂಡಾರಿ, ಉಮೇಶ ದೈವಜ್ಞ, ಡಿ.ಎಂ.ಭಟ್ಟ ಕುಳುವೆ, ಸುಜಾತಾ ಹೆಗಡೆ, ಪರಮ್ ಕಾಳೇಬೈಲ್, ದಾಕ್ಷಾಯಣಿ ಪಿ.ಸಿ, ಅಜಿತ್ ಬಿಳಗಿ, ಮಂಗಳಗೌರಿ ಭಟ್ಟ, ಜಲಜಾಕ್ಷಿ ಶೆಟ್ಟಿ, ನವೀನ್ ಕುಮಾರ್ ಎ.ಜೆ, ಸುಧಾ ಆಚಾರ್ಯ, ವೀಣಾ ನಾಯ್ಕ, ಜಿ ವಿ ಭಟ್ಟ ಕೊಪ್ಪಲುತೋಟ, ದಿನೇಶ ಅಮ್ಮಿನಳ್ಳಿ, ರಾಜೇಶ್ವರಿ ಹೆಗಡೆ, ರಮೇಶ ಹೆಗಡೆ, ಯಶಸ್ವಿನಿ ಕವಿಗೋಷ್ಠಿಯಲ್ಲಿ ಈ ಎಲ್ಲಾ ಕವಿಗಳು ಭಾಗವಹಿಸಿದ್ದರು. ಡಾ.ಶೈಲಜಾ ಮಂಗ್ಳೂರು ಪ್ರಾರ್ಥಿಸಿದರೆ, ಸುಜಾತ ಹೆಗಡೆ ಸ್ವಾಗತಿಸಿದರು. ಯಶಸ್ವಿನಿ ಶ್ರೀಧರ ಮೂರ್ತಿ ನಿರೂಪಿಸಿದರು.

error: