April 23, 2024

Bhavana Tv

Its Your Channel

ಅರಣ್ಯವಾಸಿಗಳ ಬೃಹತ್ ಪ್ರತಿಭಟನೆ, ಅರಣ್ಯ ಅಧಿಕಾರಿಗಳ ವಿರುದ್ಧ ತೀವ್ರಆಕ್ರೋಶ; ಸ್ಪಷ್ಟಲಿಖಿತ ಉತ್ತರಕ್ಕಾಗಿ ನಾಲ್ಕು ತಾಸು ಧರಣಿ.

ಶಿರಸಿ: ಅರಣ್ಯವಾಸಿಗಳ ಸಮಸ್ಯೆಗಳ ಕುರಿತು, ಅರಣ್ಯ ಸಿಬ್ಬಂದಿಗಳಿAದ ಉಂಟಾಗುತ್ತಿರುವ ಸಮಸ್ಯೆ ಮತ್ತು ದೌರ್ಜನ್ಯಗಳಿಗೆ ಸ್ಪಷ್ಟ ಉತ್ತರವನ್ನ ನೀಡುವ ಕುರಿತು ಜಿಲ್ಲಾದ್ಯಂತ ಆಗಮಿಸಿದ ಬೃಹತ್ ಸಂಖ್ಯೆಯ ಅರಣ್ಯವಾಸಿಗಳ ಧರಣಿ ಮತ್ತು ಪ್ರತಿಭಟನೆ ಡಿ.ಎಫ್.ಓ ಕಚೇರಿಯ ಆವರಣದಲ್ಲಿಜರುಗಿತು.

ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಅವರ ನೇತ್ರತ್ವದಲ್ಲಿ ಸೋಮವಾರ ಸ್ಥಳೀಯ ಡಿ.ಎಫ್.ಓ ಕಚೇರಿಯಲ್ಲಿ ಅಸ್ಪಷ್ಟ ಉತ್ತರಕ್ಕೆ ಸ್ಪಷ್ಟತೆ ಕೂಡಿದ ಮತ್ತು ಕಾನೂನಾತ್ಮಕ ವಿಶ್ಲೇಷಣೆಯ ಉತ್ತರಕ್ಕೆ ಅಗ್ರಹಿಸಿ ಸುಮಾರು ನಾಲ್ಕು ತಾಸು ಅರಣ್ಯವಾಸಿಗಳು ಧರಣಿ ಕಾರ್ಯಕ್ರಮವನ್ನ ಜರುಗಿಸಿದರು.
ಅರಣ್ಯವಾಸಿಗಳು ಡಿಎಫ್‌ಓ ಆಫೀಸಿಗೆ ಪ್ರವೇಶಿಸದಂತೆ ಪ್ರಧಾನ ದ್ವಾರಕ್ಕೆ ಕೀಲಿಹಾಕಿರುವ ಹಿನ್ನೆಲೆಯಲ್ಲಿ, ಅರಣ್ಯವಾಸಿಗಳು ತೀವ್ರ ಆಕ್ರೋಶ ಮತ್ತು ಪ್ರತಿಭಟನೆಯ ಹಿನ್ನೆಲೆಯಲ್ಲಿ ದ್ವಾರವನ್ನು ತೆರವುಗೊಳಿಸಿದರು. ಪೋಲಿಸರ ಮಧ್ಯಸ್ಥಿಕೆಯ ಮೇರೆಗೆ ಕೆಲಸದ ಅವಧಿಯಲ್ಲಿ ಕಚೇರಿಯ ದ್ವಾರಕ್ಕೆ ಹಾಕಿರುವ ಕೀಲಿಗಳನ್ನು ತೆಗೆಸಿರುವ ಘಟನೆಗಳು ಜರುಗಿದವು.
ಸಿಸಿಎಫ್ ಅವರು ಆಗಮಿಸಿ, ಸ್ಪಷ್ಟ ಲಿಖಿತ ಉತ್ತರವನ್ನು ನೀಡಬೇಕೆಂದು ಹೋರಾಟಗಾರರು ತೀವ್ರತರದ ಒತ್ತಡವನ್ನು ಹೇರಿದಾಗಲೂ ಸಹಿತ ಡಿಎಫ್‌ಓ ಅಜ್ಜಯ್ಯ ಯಾವುದೇ ರೀತಿಯ ಸ್ಪಂಧನೆ ನಿಡದ ಹಿನ್ನೆಲೆಯಲ್ಲಿ ಅರಣ್ಯವಾಸಿಗಳು ತೀವ್ರಪ್ರತಿರೋಧ, ಪ್ರತಿಭಟನೆ ಜರುಗಿಸಿದರು. ಈ ಹಿನ್ನೆಲೆಯಲ್ಲಿ ಸಾಕಷ್ಟು ಸಾರೇ ಅರಣ್ಯವಾಸಿಗಳು ಮತ್ತು ಅರಣ್ಯಸಿಬ್ಬಂದಿಗಳ ಜೊತೆ ಮಾತಿನ ಚಕಮಕಿ ಜುರುಗಿ ಹಿನ್ನೆಲೆಯಲ್ಲಿ ಪೋಲೀಸ್
ಮಧ್ಯಸ್ಥಿಕೆಯಲ್ಲಿ ವಾತಾವರಣವು ತಿಳಿಗೊಂಡವು. ಜಿಲ್ಲಾದ್ಯಂತ ಆಗಮಿಸಿರುವ ಬೃಹತ್ ಸಂಖ್ಯೆಯ ಅರಣ್ಯವಾಸಿಗಳ ಹೋರಾಟದ ನೇತ್ರತ್ವವನ್ನ ಮಾಭ್ಲೇಶ್ವರ ನಾಯ್ಕ ಬೇಡ್ಕಣಿ, ಲಕ್ಷö್ಮಣ ಮಾಳ್ಳಕ್ಕನವರ, ಸುನಿಲ್ ನಾಯ್ಕ ಸಂಪಖAಡ, ನೆಹರೂ ನಾಯ್ಕ ಬಿಳೂರು, ರಾಘು ಕವಂಚೂರು, ಪಾಂಡುರAಗ ನಾಯ್ಕ ಬೆಳಕೆ, ಭೀಮ್ಸಿ ವಾಲ್ಮೀಕಿ, ದಿನೇಶ್ ನಾಯ್ಕ, ಎಮ್ ಆರ್ ನಾಯ್ಕ ಕಂಡ್ರಾಜಿ, ಶಿವಾಜಿ, ಇಬ್ರಾಹಿಂ ಗೌಡಳ್ಳಿ, ಜೋಗಿ, ಸಾರಂಬಿ ಶೆಖ್, ಯಾಕೂಬ್ ಸಾಬ್, ಮಹೇಂದ್ರ ನಾಯ್ಕ ಕತಗಾಲ, ಜಿಬಿ ನಾಯ್ಕ, ಸುಶೀಲಾ ನಾಯ್ಕ ಕಾನಸೂರು ಮುಂತಾದವರು ವಹಿಸಿದ್ದರು.
ಸ್ಪಷ್ಟವಾದ ಉತ್ತರವನ್ನ ಬಯಸಿ ಕಚೇರಿಯ ಆವರಣದಿಂದ ತೊಲಗುವುದಿಲ್ಲ ಎಂದು ಬಿಗಿ ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಡಿ.ಎಫ್.ಓ ಅಜ್ಜಯ್ಯ ಅವರು ಅರಣ್ಯ ಇಲಾಖೆಯ ಪರವಾಗಿ ಲಿಖಿತ ಉತ್ತರವನ್ನು ಕೊಟ್ಟು, ಅರಣ್ಯವಾಸಿಯ ಅಧಿಭೋಗ ಮತ್ತು ಸಾಗುವಳಿ ಇರುವ ಕ್ಷೇತ್ರಕ್ಕೆ, ಅರಣ್ಯ ಹಕ್ಕು ಕಾಯಿದೆಯಲ್ಲಿ ಅರ್ಜಿ ಸಲ್ಲಿಸಿದಂತಹ ಅರಣ್ಯವಾಸಿಗಳಿಗೆ ಆತಂಕ ಮಾಡುವುದಿಲ್ಲ, ಒಕ್ಕಲೆಬ್ಬಿಸುವುದಿಲ್ಲ ಎಂದು ಲಿಖಿತ ಉತ್ತರವನ್ನ ನೀಡಿದ ಹಿನ್ನೆಲೆಯಲ್ಲಿಧರಣಿ ಕಾರ್ಯಕ್ರಮ ಸ್ಥಗಿತಗೊಂಡಿರುತ್ತದೆ.

error: