April 25, 2024

Bhavana Tv

Its Your Channel

ಅರಣ್ಯವಾಸಿಗಳ ಜಾಗೃತ ರ‍್ಯಾಲಿ ; ಜಿಲ್ಲಾದ್ಯಂತ 23,000 ಕೀ.ಮೀ ಹೋರಾಟದ ವಾಹಿನಿ ಸಂಚಾರ.

ಶಿರಸಿ: ಅರಣ್ಯವಾಸಿಗಳ ಜಾಗೃತ ರ‍್ಯಾಲಿಗೆ ಸಂಬAಧಿಸಿ ಅರಣ್ಯವಾಸಿಗಳನ್ನ ಉಳಿಸಿ ಶಿರೋನಾಮೆಯಲ್ಲಿ, ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಆಶ್ರಯದಲ್ಲಿ, ಜಿಲ್ಲಾದ್ಯಂತ ೧೫೭ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ “ಹೋರಾಟದ ವಾಹಿನಿ” ಸುಮಾರು ೨೩,೦೦೦ ಕೀ.ಮೀ ಕಳೆದ ಒಂದು ವರ್ಷದಿಂದ ಸಂಚರಿಸಿ, ಅರಣ್ಯವಾಸಿಗಳ ಜಾಗೃತ ಕಾರ್ಯ ಜರುಗಿಸಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷರವೀಂದ್ರನಾಯ್ಕ ತಿಳಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ, ಕುಮಟ ತಾಲೂಕಿನಲ್ಲಿ ಕಳೆದ ವರ್ಷದ ಫೆಬ್ರವರಿ, ೨೮ ರಂದು “ಅರಣ್ಯವಾಸಿಗಳನ್ನ ಉಳಿಸಿ ಜಾಥ” ಪ್ರಾರಂಭವಾಗಿ ಅರಣ್ಯವಾಸಿಗಳ ಸಂಘಟನಾತ್ಮಕ ಮತ್ತು ಕಾನೂನು ಜಾಗೃತೆಯಲ್ಲಿ ಪರಿಣಾಮಕಾರಿ ಕಾರ್ಯವನ್ನು ಜರುಗಿಸಿದೆ ಎಂದು ಅವರು ಹೇಳಿದರು.
ವಿಶೇಷವಾದ ವಿನ್ಯಾಸದಿಂದ ಕೂಡಿದ ಟಿಟಿ ವಾಹನವನ್ನ ಜಿಲ್ಲಾದ್ಯಂತ ಅರಣ್ಯವಾಸಿಗಳ ಪ್ರದೇಶಗಳಲ್ಲಿ ಸಂಚರಿಸಿ ಸಂಚಲನ ಮೂಡಿಸಿರುವುದು ವಿಶೇಷವಾಗಿದೆ ಎಂದು ಅವರು ತಿಳಿಸಿದರು.

೩೨ ವರ್ಷ ಹೋರಾಟದ ಮೈಲಿಗಲ್ಲು:
ಅರಣ್ಯವಾಸಿ ಹಕ್ಕಿಗಾಗಿ ಜಿಲ್ಲಾದ್ಯಂತ ನಿರಂತರ ೩೨ ವರ್ಷ ಸಾಂಘೀಕ ಮತ್ತು ಕಾನೂನಾತ್ಮಕ ಹೋರಾಟವನ್ನ ಹೋರಾಟದ ವಾಹಿನಿಗಳ ಮೂಲಕ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯು ಅರಣ್ಯವಾಸಿಗಳ ಜಾಗೃತೆಗಾಗಿ ಹಮ್ಮಿಕೊಂಡಿರುವ ಅರಣ್ಯವಾಸಿ ಉಳಿಸಿ ಅಭಿಯಾನವು ಯಶಸ್ವಿಯಾಗಿ ಅರಣ್ಯವಾಸಿಗಳ ಬೆಂಬಲದೊoದಿಗೆ ಮುಂದುವರೆದಿರುವುದು ಹೋರಾಟದ ವಿಶೇಷತೆಯಾಗಿದೆ ಎಂದು ಅಧ್ಯಕ್ಷರವೀಂದ್ರನಾಯ್ಕ ಅವರು ಹೇಳಿದ್ದಾರೆ.

error: