September 16, 2024

Bhavana Tv

Its Your Channel

ಹುಳಗೋಳದ ಪ್ರಸಾದ್ ಹೆಗಡೆಗೆ ಪದವಿ ಪ್ರದಾನ

ಶಿರಸಿ: ದೇಶದ ಪ್ರತಿಷ್ಠಿತ ಕಾನೂನು ವಿಶ್ವವಿದ್ಯಾಲಯಗಳಲ್ಲಿ ಒಂದಾದ ಗುಜರಾತ್ ನ್ಯಾಶನಲ್ ಲಾ ಯುನಿರ್ವಸಿಟಿ ನೀಡುವ ಬಿಬಿಎ ಎಲ್‌ಎಲ್‌ಬಿ ಪದವಿಯನ್ನು ತಾಲೂಕಿನ ಹುಳಗೋಳದ ಪ್ರಸಾದ್ ಹೆಗಡೆ ಅವರಿಗೆ ಪ್ರದಾನ ಮಾಡಲಾಯಿತು. ಗುಜರಾತ್ ಗಾಂಧಿನಗರದಲ್ಲಿ ನಡೆದ ಪದವಿ ಪ್ರದಾನ ಸಮಾರಂಭದಲ್ಲಿ ಸುಫ್ರೀಂ ಕೋರ್ಟ್ನ ಹಿರಿಯ ನ್ಯಾಯಾಧೀಶರಾದ ಎಂ.ಆರ್.ಷಾ ಅವರು ಪದವಿ ಪ್ರದಾನ ಮಾಡಿ ಶುಭಕೋರಿದರು.
ಈ ವೇಳೆ ಸುಫ್ರೀಂ ಕೋರ್ಟನ ಇನ್ನೋರ್ವ ಹಿರಿಯ ನ್ಯಾಯಾಧೀಶರಾದ ಬಿಲಾ ತ್ರಿವೇದಿ, ಗುಜರಾತ್ ಹೈಕೋರ್ಟ ಮುಖ್ಯ ನ್ಯಾಯಾಧೀಶರಾದ ಎ.ಜೆ.ದೇಸಾಯಿ ಇದ್ದರು. ೨೦೨೧ರಲ್ಲಿ ಪದವಿ ಪೂರ್ಣಗೊಳಿಸಿದ್ದ ಪ್ರಸಾದ್ ಹೆಗಡೆ ಹಿರಿಯ ಸಹಕಾರಿ, ಸಹಕಾರಿ ರತ್ನ ಜಿ.ಎಂ.ಹೆಗಡೆ ಹುಳಗೋಳ ಹಾಗೂ ರಾಧಾ ಹೆಗಡೆ ಮೊಮ್ಮಗ, ಸತೀಶ ಗಜಾನನ ಹೆಗಡೆ ಹಾಗೂ ಆರತಿ ಹೆಗಡೆ ಅವರ ಪುತ್ರ. ಅತ್ಯಂತ ಚಿಕ್ಕ ವಯಸ್ಸಿನಲ್ಲೇ ಭಾಷಾ ಕೌಶಲ ಹಾಗೂ ಬುದ್ದಿಮತ್ತೆಯಿಂದ ಪ್ರಸಾದ್ ಹೆಗಡೆ ಪ್ರಸ್ತುತ ದೇಶದ ಸುಫ್ರೀಂ ಕೋರ್ಟನ ಹಿರಿಯ ನ್ಯಾಯಾಧೀಶ ಪಿ.ಎಸ್.ನರಸಿಂಹ ಅವರ ಸಹಾಯಕರಾಗಿ ಕೆಲಸ ಮಾಡುತ್ತಿದ್ದಾರೆ ಎಂಬುದು ಉಲ್ಲೇಖನೀಯ.

error: