April 18, 2024

Bhavana Tv

Its Your Channel

“ಸಸ್ಯ ಪ್ರದರ್ಶನ ಮತ್ತು ವಿನಿಮಯ” ಕಾರ್ಯಕ್ರಮ

ಯಲ್ಲಾಪುರ:- ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ತ್ರಿಪುರಂಬಿಕಾ ಮಹಿಳಾ ಒಕ್ಕೂಟ, ಶ್ರೀ ಮಾತಾ ರೈತ ಉತ್ಪಾದಕ ಕಂ. ನಿಯಮಿತ, ಮಾತೃ ಮಂಡಳಿ ಇವುಗಳ ಸಹಯೋಗದಲ್ಲಿ “ಸಸ್ಯ ಪ್ರದರ್ಶನ ಮತ್ತು ವಿನಿಮಯ” ಶ್ರೀ ಮಾತಾ ಟ್ರೇಡಿಂಗ್ ಕಂಪನಿ ಸೇಲ್ ಹಾಲ್ ಎ.ಪಿ.ಎಂ.ಸಿ ಯಾರ್ಡಿನಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಜಯಶ್ರೀ ಹೆಗಡೆ ನೇರವೆರಿಸಿ ಮಾತನಾಡಿ ಮಲೆನಾಡಿನ ಪ್ರತಿಯೊಂದು ಮನೆಯಲ್ಲೂ ಸಸ್ಯ ಮತ್ತು ಹೂವು, ಹಾಗೂ ಅನೇಕ ಜಾತಿಯ ಔಷಧಿ ಸಸ್ಯಗಳನ್ನು ಬೆಳೆಯುತ್ತಿದ್ದು ಅವುಗಳನ್ನು ಹೆಚ್ಚಿಗೆ ಬೆಳೆಸಿ ಪರಸ್ಪರ ವಿನಿಮಯ ಮಾಡಬೇಕು. ಸಸ್ಯಗಳಿಂದ ಹಲವು ಸಣ್ಣ ಪುಟ್ಟ ಕಾಯಿಲೆಗಳಿಗೆ ಔಷಧವಾಗಿ ಬಳಸಬಹುದು ಎಂದರು.
ಮುಖ್ಯ ಅತಿಥಿಯಾಗಿ ರಮಾ ದೀಕ್ಷಿತ ಆಗಮಿಸಿದ್ದರು, ಅಧ್ಯಕ್ಷತೆಯನ್ನು ಮುಕ್ತಾ ಶಂಕರವಹಿಸಿದ್ದರು.ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಜಾಹ್ನವಿ ಮಣ್ಮನೆ, ಉಪಾಧ್ಯಕ್ಷರಾದ ಸಂಧ್ಯಾ ಹೆಗಡೆ, ಕಾರ್ಯದರ್ಶಿ ಗಾಯಿತ್ರಿ ಬೋಳಗುಡ್ಡೆ ಉಪಸ್ಥಿತರಿದ್ದರು.
ಅನೇಕ ಜನ ಔಷಧಿ ಸಸ್ಯ, ಹೂವೂಗಳನ್ನು ಖರೀದಿಸಿದರು

ವರದಿ:-ವೇಣುಗೋಪಾಲ ಮದ್ಗುಣಿ. ಯಲ್ಲಾಪುರ

error: