April 25, 2024

Bhavana Tv

Its Your Channel

ಯಲ್ಲಾಪುರದ ವಿಶ್ವದರ್ಶನ ಶಾಲೆಯಲ್ಲಿ ಕರಿಯರ್ ಅಕಾಡೆಮಿಗೆ ಚಾಲನೆ

ಯಲ್ಲಾಪುರ : ಯಲ್ಲಾಪುರದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯು ಪ್ರಾರಂಭಿಸಿದ ವಿಶ್ವದರ್ಶನ ಕರಿಯರ್ ಅಕಾಡೆಮಿಗೆ ಸೋಂದಾ ಸ್ವರ್ಣವಲ್ಲಿ ಮಹಾ ಸಂಸ್ಥಾನದ ಪರಮಪೂಜ್ಯ ಗಂಗಾಧರೇoದ್ರ ಸರಸ್ವತಿ ಸ್ವಾಮೀಜಿಯವರು ಚಾಲನೆ ನೀಡಿ ಮಾತನಾಡಿ ಉನ್ನತ ಮಟ್ಟದ ಅಧಿಕಾರಿಗಳಿಂದ ಸಮರ್ಪಕ ಆಡಳಿತ ದೊರೆಯುತ್ತದೆ. ಉತ್ತಮ, ಅರ್ಹ ವ್ಯಕ್ತಿಗಳು ಆ ಕ್ಷೇತ್ರಕ್ಕೆ ಬಂದಾಗ ಆಡಳಿತ ವ್ಯವಸ್ಥೆ ಇನ್ನೂ ಹೆಚ್ಚಿನ ಪರಿಪೂರ್ಣತೆ ಪಡೆಯಲು ಸಾಧ್ಯ ಎಂದರು. ಈ ಪ್ರದೇಶದಲ್ಲಿ ವಿದ್ಯಾರ್ಥಿಗಳು ಇಂತಹ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಮುಂದೆ ಹೋಗುತ್ತಿಲ್ಲ. ಜಿಲ್ಲೆಯ ೭-೮ ವಿದ್ಯಾರ್ಥಿಗಳು ಮಾತ್ರ ಐಎಎಸ್, ಕೆಎಎಸ್ ನಂತಹ ಪರೀಕ್ಷೆಗಳಲ್ಲಿ ಸಾಧನೆ ಮಾಡಿ ಅಧಿಕಾರಿಗಳಾಗಿದ್ದಾರೆ. ವಿಶ್ವದರ್ಶನ ಸಂಸ್ಥೆ ಇಂತಹ ೧೩ ರೀತಿಯ ಸ್ಪರ್ಧೆಗಳನ್ನು ಎದುರಿಸುವಂತಹ ಒಂದು ಅವಕಾಶವನ್ನು ಜಿಲ್ಲೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಒದಗಿಸಿರುವುದು ಹೆಮ್ಮೆ, ಸಂತಸ ತಂದಿದೆ. ಸಾಧನಾಶಕ್ತಿ ಹಾಗೂ ನಿರಂತರ ಪರಿಶ್ರಮದಿಂದ ಮಾತ್ರ ಈ ಕ್ಷೇತ್ರದಲ್ಲಿ ಮುಂದೆ ಬರಬಹುದಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಉಪಾಧ್ಯಕ್ಷ, ಉದ್ಯಮಿ ಶ್ರೀನಿವಾಸ ಹೆಬ್ಬಾರ ಮಾತನಾಡಿ, ಉನ್ನತ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವಲ್ಲಿ ನಮ್ಮ ಜಿಲ್ಲೆಯಲ್ಲಿ ಪ್ರತಿಭಾವಂತರಿದ್ದೂ, ಇದನ್ನು ಅರಿತ ನಮ್ಮ ಸಂಸ್ಥೆ ಈ ಕಾರ್ಯದಲ್ಲಿ ಮುಂದಾಗಿದೆ ಎಂದರು.
ಉಪಮುಖ್ಯಮAತ್ರಿಗಳ ಕಾರ್ಯದರ್ಶಿ ಪ್ರದೀಪ (ಐಎಎಸ್) ಮಾತನಾಡಿ, ಸ್ಪರ್ಧಾತ್ಮಕ ಜಗತ್ತಿನಲ್ಲಿದ್ದೇವೆ. ಪ್ರತಿಭಾವಂತ ಕ್ರಿಯಾಶೀಲರಿದ್ದರೂ ಕೂಡ, ತರಬೇತಿಯ ಕೊರತೆಯಿಂದ ಸಾಧ್ಯವಾಗುತ್ತಿರಲಿಲ್ಲ. ಈ ಪ್ರಯತ್ನದಲ್ಲಿ ವಿಶ್ವದರ್ಶನ ಸಂಸ್ಥೆ ಮುಂದಾಗಿರುವುದು ಸ್ತುತ್ಯಾರ್ಹ ವಿಚಾರವೆಂದರು.
ಬೆAಗಳೂರಿನ ಸಮುತ್ಕರ್ಷ ಐಎಎಸ್- ಕೆಎಎಸ್ ಸ್ಟಡಿ ಕೇಂದ್ರದ ಮುಖ್ಯಸ್ಥ ಜಿತೇಂದ್ರ ನಾಯಕ ಮಾತನಾಡಿ, ದೆಹಲಿಯ ಸಂಕಲ್ಪ ಸಂಸ್ಥೆ ಕಳೆದ ೩೫ ವರ್ಷಗಳಿಂದ ಇಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುತ್ತಿದೆ. ಎಲ್ಲ ವಿದ್ಯಾರ್ಥಿಗಳಲ್ಲೂ ಪ್ರತಿಭೆ ಇರುತ್ತದೆ. ಅವರಿಗೆ ಸೂಕ್ತ ಮಾರ್ಗದರ್ಶನ ಅಗತ್ಯವಾಗಿದೆ. ಆ ನಿಟ್ಟಿನಲ್ಲಿ ವಿಶ್ವದರ್ಶನ ಸಂಸ್ಥೆ ಹಮ್ಮಿಕೊಂಡ ಈ ಮಹಾನ್ ಕಾರ್ಯದಲ್ಲಿ ನಮ್ಮ ಸಂಪೂರ್ಣ ಶಕ್ತಿಯನ್ನು ವಿನಿಯೋಗಿಸುತ್ತೇವೆ ಎಂದರು.ಬೆAಗಳೂರಿನ ಜ್ಞಾನಭಾರತಿ ಐಎಎಸ್ ಕೆಎಎಸ್ ತರಬೇತಿ ಸಂಸ್ಥೆಯ ಮುಖ್ಯಸ್ಥ ಮಂಜುನಾಥ ಕೆ.ಎಚ್. ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಪನ್ಮೂಲ ವ್ಯಕ್ತಿಗಳ ಕೊರತೆಯಿತ್ತು. ಆ ನಿಟ್ಟಿನಲ್ಲಿ ಉತ್ತರಕನ್ನಡ ಜಿಲ್ಲೆಯ ವಿಶ್ವದರ್ಶನ ಈ ಮಹತ್ವದ ಕಾರ್ಯದಲ್ಲಿ ಮುಂದಾಗಿರುವುದು ಸಂತಸ ತಂದಿದೆ. ಈ ಸಂಸ್ಥೆ ವಿಶ್ವಮಟ್ಟಕ್ಕೆ ವ್ಯಾಪಿಸುವಂತಾಗಲಿ. ಸಂಸ್ಥೆಯ ಜೊತೆಯಲ್ಲಿ ನಾವು ಕೂಡ ಕೈಜೋಡಿಸುತ್ತೇವೆ ಎಂದರು.
ಹಿರಿಯ ಪತ್ರಕರ್ತ ಹರಿಪ್ರಕಾಶ ಕೋಣೆಮನೆ ಮಾತನಾಡಿ, ಜಿಲ್ಲೆಯಲ್ಲಿ ಪ್ರತಿಭೆಗೆ ಕೊರತೆಯಿಲ್ಲ. ಈ ಕಾರ್ಯಗಳನ್ನು ಪೂಜ್ಯ ಶ್ರೀಗಳು ಕೂಡ ಅನೇಕ ವರ್ಷಗಳಿಂದ ಮಾಡುತ್ತಾ ಬಂದಿದ್ದಾರೆ. ಆ ದೃಷ್ಟಿಯಿಂದ ವಿಶ್ವದರ್ಶನ ಸಂಸ್ಥೆ ಮುಂದಾಗಿದೆ ಎಂದರು.
ಈ ಸಂದರ್ಭದಲ್ಲಿ ಸಂಸ್ಥೆಯ ಶೈಕ್ಷಣಿಕ ಸಲಹೆಗಾರ ತಿಮ್ಮಣ್ಣ ಭಟ್ಟ, ಮುಖ್ಯ ವ್ಯವಸ್ಥಾಪಕ ಗುರುರಾಜ ಕುಂದಾಪುರ, ವಿವಿಧ ಅಂಗ ಸಂಸ್ಥೆಗಳ ಮುಖ್ಯಸ್ಥರಾದ ಮುಕ್ತಾ ಶಂಕರ, ಗಣೇಶ ಭಟ್ಟ, ಕರಿಯರ್ ಅಕಾಡೆಮಿ ಸಂಯೋಜಕ ಪ್ರಸನ್ನ ಭಟ್ಟ ಮತ್ತಿತರರು ಉಪಸ್ಥಿತರಿದ್ದರು.
ಸಂಸ್ಥೆಯ ನಿರ್ದೇಶಕ ನರಸಿಂಹ ಕೋಣೆಮನೆ ಸ್ವಾಗತಿಸಿದರು. ಡಾ.ಕವಿತಾ ಹೆಬ್ಬಾರ ನಿರ್ವಹಿಸಿದರು. ಡಾ.ಎಸ್.ಎಲ್.ಭಟ್ಟ ವಂದಿಸಿದರು.

ವರದಿ: -ವೇಣಗೋಪಾಲ ಮದ್ಗುಣಿ

error: