July 26, 2021

Bhavana Tv

Its Your Channel

ಗೇರಾಳ ಶಾಲಾ ಆವಾರದಲ್ಲಿ ವನಮಹೋತ್ಸವ

ಯಲ್ಲಾಪುರ : ತಾಲೂಕಿನ ಗೇರಾಳ ಗ್ರಾಮದ ಹಿರಿಯ ಪ್ರಾಥಮಿಕ ಶಾಲಾ ಆವಾರದಲ್ಲಿ ವಿವಿಧ ಜಾತಿಯ ಸಸಿ ನೆಡುವ ಮೂಲಕ ವನಮಹೋತ್ಸವ ಆಚರಿಸಲಾಯಿತು. ಗೇರಾಳ ಗ್ರಾಮ ಅರಣ್ಯ ಸಮಿತಿ ವತಿಯಿಂದ ನಡೆದ ವನಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಪಿ.ಜಿ.ಭಟ್ಟ ಬರಗದ್ದೆ, ಪ್ರತಿಯೊಂದು ಶಾಲೆಯಲ್ಲಿಯೂ ಜನಜಾಗೃತಿ ಮೂಡಿಸಿ ಅರಣ್ಯ ಬೆಳಸಿ ಪರಿಸರ ಕಾಳಜಿಯನ್ನು ಹೆಚ್ಚಿಸಬೇಕೆಂದರು. ಗೇರಾಳ ವಿಎಫ್ ಸಿ ಅಧ್ಯಕ್ಷರಾದ ಜಿ.ಎಸ್.ಭಟ್ಟ ಮಾತನಾಡಿ, ಅರಣ್ಯ ಉಳಿಯಬೇಕಾದರೆ ಅರಣ್ಯ ಇಲಾಖೆಯವರು ರೈತರಲ್ಲಿ ಮತ್ತು ಕೃಷಿ ಕಾರ್ಮಿಕರಲ್ಲಿ ಹೆಚ್ಚಿನ ಜವಾಬ್ದಾರಿ ನೀಡಬೇಕು. ಸ್ಥಳೀಯ ಸಂಸ್ಥೆಗಳ ಮುಖಾಂತರ ಅರಣ್ಯ ಹೆಚ್ಚಿಸಿ ಪರಿಸರ ಉಳಿಸಿ ಬೆಳಸಲು ಪ್ರಯತ್ನಿಸಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಉಪ ವಲಯ ಅರಣ್ಯಾಧಿಕಾರಿ, ಮತ್ತು ಸಿಬ್ಬಂದಿಗಳು ಇದ್ದರು. ಶಿಕ್ಷಕ ಪ್ರಭಾಕರ ಸ್ವಾಗತಿಸಿದರು. ಶ್ರೀಪತಿ ಭಟ್ಟ ವಂದಿಸಿದರು.

ವರದಿ: -ವೇಣಗೋಪಾಲ ಮದ್ಗುಣಿ

error: