March 29, 2024

Bhavana Tv

Its Your Channel

ಯಲ್ಲಾಪುರದಿಂದ ಮೂರು ವಿದ್ಯಾರ್ಥಿಗಳು ನವೋದಯ ಶಾಲೆಗೆ ಆಯ್ಕೆ

ಯಲ್ಲಾಪುರ : ಪ್ರಾಥಮಿಕ ಶಾಲಾ ಹಂತದ ಐಎಎಸ್ ಎಂದು ಪರಿಗಣಿಸಲಾಗುವ ನವೋದಯ ಶಾಲೆಯ ಆಯ್ಕೆಯಲ್ಲಿ ತಮ್ಮ ಯೋಗಿ ಟಾಪರ್ಸ್ ಪಾಯಿಂಟ್ ನಲ್ಲಿ ತರಬೇತಿ ಪಡೆದ ಮೂರು ಜನ ವಿದ್ಯಾರ್ಥಿಗಳು ಆಯ್ಕೆಯಾಗಿರುವುದು ನಮ್ಮ ತರಬೇತಿ ಸಂಸ್ಥೆಗೆ ಹೆಮ್ಮೆಯಾಗಿದೆ ಎಂದು ಸಂಸ್ಥೆಯ ಮುಖ್ಯಸ್ಥ ಯೋಗೇಶ ಶಾನಭಾಗ್ ಹೇಳಿದರು.

ಅವರು ತಮ್ಮ ತರಬೇತಿ ಸಂಸ್ಥೆಯಲ್ಲಿ ಬುಧವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಈ ವಿಷಯವನ್ನು ತಿಳಿಸಿದರು.ಗ್ರಾಮಿಣ ವಿಭಾಗದಿಂದ ಇಬ್ಬರು,ನಗರ ಪ್ರದೇಶದಿಂದ ಒಬ್ಬರು ಆಯ್ಕೆಯಾಗಿದ್ದಾರೆ. ನವೋದಯ ಶಾಲೆಗೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ಒಟ್ಟು ಹನ್ನೆರಡು ತಾಲೂಕುಗಳಿಂದ ೮೦ ಸ್ಥಾನ ಆರನೇ ವರ್ಗದವರಿಗೆ ಮೀಸಲಾಗಿದ್ದು, ಆರು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಅದರಲ್ಲಿ ನಾಲ್ಕು ಸ್ಥಾನ ಯಲ್ಲಾಪುರ ತಾಲೂಕಿಗೆ ಲಭ್ಯವಾಗಿದೆ. ನಮ್ಮ ಕೇಂದ್ರದಲ್ಲಿ ೪೫ ಜನರಿಗೆ ಟ್ರೇನಿಂಗ ಕೊಡಲಾಗಿತ್ತು. ಆಯ್ಕೆಯಾದ ಮೂವರು ನಮ್ಮ ಯೋಗಿ ಟಾಪರ್ಸ್ ಪಾಯಿಂಟ್ ನಲ್ಲಿ ತರಬೇತಿಯನ್ನು ಪಡೆದವರಾಗಿದ್ದಾರೆ. ನವೋದಯದ ವಿದ್ಯಾರ್ಥಿಗಳಿಗೆ ಮೂರು ಆಯಾಮದಲ್ಲಿ ತರಬೇತಿ ನೀಡಲಾಗಿತ್ತು ಎಂದರು. ಮಹಾನಗರಗಳಲ್ಲಿ ಕೋಚಿಂಗ್ ಸೆಂಟರ್ ಗಳಂತೆ ಯಲ್ಲಾಪುರದಲ್ಲಿ ಉನ್ನತ ದರ್ಜೆಯ ಆಧುನಿಕ ಶಿಕ್ಷಣ ಪದ್ಧತಿಯನ್ನು ಕಡಿಮೆ ಫೀಯಲ್ಲಿ ಅಳವಡಿಸಿಕೊಂಡು ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಯೋಗಿ ಟಾಪರ ಪಾಯಿಂಟ್ ಪ್ರಾರಂಭಿಸಲಾಯಿತು. ಪ್ರಾರಂಭದಲ್ಲಿ ಎಸ್ ಎಸ್ ಎಲ್ ಸಿ ಗೆ ಸೀಮಿತವಾಗಿತ್ತು ನಂತರ ಪಿಯುಸಿಯವರೆಗೆ ವಿಸ್ತರಿಸಲಾಯಿತು. ಕಳೆದ ವರ್ಷ ನವೋದಯ ಕೋಚಿಂಗ್ ಪರೀಕ್ಷಾ ಫಲಿತಾಂಶದಲ್ಲಿ ಓರ್ವ ವಿದ್ಯಾರ್ಥಿ ನಮ್ಮ ಕೇಂದ್ರದಿAದ ತರಬೇತಿ ಪಡೆದವರು ಆಯ್ಕೆಯಾಗಿದ್ದರೆ ಈ ಬಾರಿ ಮೂರಕ್ಕೆ ಬಡ್ತಿ ಪಡೆದಿದೆ ಎಂದು ಹೇಳಿದರು. ಮಕ್ಕಳಿಗೆ ಐದು ಸಾವಿರದಿಂದ ಎಂಟು ಸಾವಿರ ಪ್ರಶ್ನೆಗಳನ್ನು ತರಬೇತಿ ಕೇಂದ್ರದಲ್ಲಿ ನೀಡಲಾಗಿತ್ತು. ಕಠಿಣ ಅಭ್ಯಾಸ ಮಾಡಿ ನವೋದಯ ಶಾಲೆಗೆ ಆಯ್ಕೆಯಾದ ವಿದ್ಯಾರ್ಥಿಗಳಾದ ತನುಶ್ರೀ ಗಂಗಾಧರ ಪೋಮ್ಮಾರ, ದಿಶಾ ರವಿದಾಸ ರೇವಣಕರ ಹಾಗೂ ಶೃಷ್ಟಿ ಉದಯ ದೇವಕರ ಇವರನ್ನು ಇದೇ ಸಂದರ್ಭದಲ್ಲಿ ಯೋಗೇಶ ಶಾನಭಾಗ ಸನ್ಮಾನಿಸಿದರು. ಈ ಸಂದರ್ಭದಲ್ಲಿ ನವೋದಯಕ್ಕೆ ಆಯ್ಕೆಯಾದ ಮೂವರು ವಿದ್ಯಾರ್ಥಿಗಳ ಪಾಲಕರು ಸಾರ್ವಜನಿಕರು ಉಪಸ್ಥಿತರಿದ್ದರು.

ವರದಿ: ವೇಣುಗೋಪಾಲ ಮದ್ಗುಣಿ ಯಲ್ಲಾಪುರ,

error: