March 22, 2024

Bhavana Tv

Its Your Channel

ಯಲ್ಲಾಪುರ ತಾಲೂಕು ಶಿಕ್ಷಣ ಸಮಿತಿಯಲ್ಲಿ ವಿದ್ಯಾರ್ಥಿ ಸಂಸತ್ ಚುನಾವಣೆ

ವರದಿ: ವೇಣುಗೋಪಾಲ ಮದ್ಗುಣಿ

ಯಲ್ಲಾಪುರ :- ಯಲ್ಲಾಪುರ ತಾಲೂಕು ಶಿಕ್ಷಣ ಸಮಿತಿಯ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಸತ್ತಿನ ಚುನಾವಣೆ ನಡೆಯಿತು. ಸಾರ್ವತ್ರಿಕ ಚುನಾವಣೆಯ ಮಾದರಿಯಲ್ಲಿ ಚುನಾವಣೆಯ ಎಲ್ಲಾ ಪ್ರಕ್ರಿಯೆಯನ್ನು ನಡೆಸಲಾಯಿತು. ಅಧಿಸೂಚನೆ ಹೊರಡಿಸುವುದರಿಂದ ಪ್ರಾರಂಭಗೊAಡು ನಾಮಪತ್ರ ಸಲ್ಲಿಕೆ, ಪರಿಶೀಲನೆ, ನಾಮಪತ್ರ ಹಿಂತೆಗೆಯುವಿಕೆ, ಮತಪತ್ರ ಮುದ್ರಣ, ಮತಗಟ್ಟೆ ಅಧಿಕಾರಿಗಳ ನೇಮಕ, ಚುನಾವಣೆ, ಮತ ಎಣಿಕೆ, ಎಲ್ಲಾ ಪ್ರಕ್ರಿಯೆಗಳನ್ನು ಮಾದರಿಯಾಗಿ ನಡೆಸಲಾಯಿತು. ಉಪನ್ಯಾಸಕ ಆನಂದ ಎಸ್ ಹೆಗಡೆ ಮುಖ್ಯ ಚುನಾವಣಾಧಿಕಾರಿಯಾಗಿ, ಹಾಗೂ ಉಳಿದೆಲ್ಲಾ ಉಪನ್ಯಾಸಕರುಗಳು ಮತಗಟ್ಟೆಯ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ವಿದ್ಯಾರ್ಥಿಗಳು ಅತಿ ಉತ್ಸಾಹದಿಂದ ಗುಪ್ತ ಮತದಾನದಲ್ಲಿ ಪಾಲ್ಗೊಂಡರು.
ಪ್ರಧಾನ ಕಾರ್ಯದರ್ಶಿಯಾಗಿ ಕು. ಶಲ್ಯಾ ಗಾಂವ್ಕರ, ಮಹಿಳಾ ಪ್ರತಿನಿಧಿಯಾಗಿ ಕು. ಅನುಷಾ ಗೊಂಡಿ, ಕ್ರೀಡಾ ಪ್ರತಿನಿಧಿಯಾಗಿ ಕು. ಭರತ ಗೌಳಿ, ಮಹಿಳಾ ಪ್ರತಿನಿಧಿಯಾಗಿ ಕು. ಮೆಹಕ ಸೈಯದ, ಸಾಂಸ್ಕೃತಿಕ ಪ್ರತಿನಿಧಿಯಾಗಿ ಕು. ನಿತೇಶ ಬಾಂದೇಕರ, ಮಹಿಳಾ ಸಾಂಸ್ಕೃತಿಕ ಪ್ರತಿನಿಧಿಯಾಗಿ ಕು. ಪೂರ್ವಿ ಎಸ್ ಕೆ ಆಯ್ಕೆಗೊಂಡರು.ಚುನಾವಣೆಯಲ್ಲಿ ವಿಜೇತರಾದ ಎಲ್ಲಾ ವಿದ್ಯಾರ್ಥಿ ಪ್ರತಿನಿಧಿಗಳನ್ನು ಪ್ರಾಂಶುಪಾಲರು, ಉಪನ್ಯಾಸಕರು, ಸಿಬ್ಬಂದಿಗಳೂ ಅಭಿನಂದಿಸಿದ್ದಾರೆ. ಎಲ್ಲಾ ಉಪನ್ಯಾಸಕರನ್ನು ಹಾಗೂ ಎಲ್ಲಾ ವಿದ್ಯಾರ್ಥಿ ಪ್ರತಿನಿಧಿಗಳನ್ನು ಒಳಗೊಂಡAತೆ ೨೦೨೧-೨೨ ನೆ ಸಾಲಿನ ಚುನಾವಣಾ ಸಾಕ್ಷರತಾ ಕ್ಲಬ್‌ನ್ನು ರಚಿಸಲಾಯಿತು.

error: