October 20, 2021

Bhavana Tv

Its Your Channel

ಯಲ್ಲಾಪುರದ ಆರತಿಬೈಲ ಘಟ್ಟದಲ್ಲಿ ರಾಸಾಯನಿಕ ತುಂಬಿದ ಲಾರಿ ಪಲ್ಟಿ

ವರದಿ: ವೇಣುಗೋಪಾಲ ಮದ್ಗುಣಿ

ಯಲ್ಲಾಪುರ : ರಾಸಾಯನಿಕವನ್ನು ಸಾಗಿಸುತ್ತಿದ್ದ ಟ್ಯಾಂಕರ ವಾಹನವು ರಾಷ್ಟ್ರೀಯ ಹೆದ್ದಾರಿ ೬೩ ಆರತಿಬೈಲ್ ಘಟ್ಟದಲ್ಲಿ ಉರುಳಿ ಬಿದ್ದು ರಾಸಾಯನಿಕ ಸೋರಿಕೆಯಿಂದಾಗಿ ಹಲವಾರು ತೋಟ ಹಾಗೂ ಗದ್ದೆಗಳಿಗೆ ಹಾನಿ ಸಂಭವಿಸಿದೆ.ಲಾರಿ ಡ್ರೈವರಿಗೆ ಕಾಲಿಗೆ ಸ್ವಲ್ಪ ಪೆಟ್ಟು ಬಿದ್ದಿದ್ದು ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಾರೆ.


ಕಾರ್ಮಿಕ ಇಲಾಖೆಯ ಸಚಿವರಾದ ಶಿವರಾಮ ಹೆಬ್ಬಾರವರು ಘಟನೆ ಸಂಬoಧಿಸಿದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು, ಎಮ್.ಆರ್.ಪಿ.ಎಲ್ ಕಂಪನಿಯ ಅಧಿಕಾರಿಗಳೊಂದಿಗೆ ಘಟನೆಗೆ ಸಂಬoಧಿಸಿದoತೆ ದೂರವಾಣಿ ಮೂಲಕವಾಗಿ ಚರ್ಚಿಸಲಾಗಿದೆ ಹಾಗೂ ಕಾರವಾರ ಮತ್ತು ಮಂಗಳೂರಿನಿoದ ತಜ್ಞರ ತಂಡವು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ ಎಂದರು.
ರಾಸಾಯನಿಕವು ಹಳ್ಳದ ನೀರಿನಲ್ಲಿ ಮಿಶ್ರಣವಾಗಿರುವ ಹಿನ್ನೆಲೆಯಲ್ಲಿ ನೀರನ್ನು ಪರಿಶೀಲನೆ ನಡೆಸಲಾಗುವುದು ಹಾಗೂ ಅವಘಡದಿಂದ ಹಾನಿಗೊಳಗಾದ ಪ್ರದೇಶಗಳ ಪರಿಶೀಲನೆ ನಡೆಸಿ ಶೀಘ್ರವಾಗಿ ಪರಿಹಾರವನ್ನು ಒದಗಿಸುವಂತೆ ತಹಶೀಲ್ದಾರ ಅವರಿಗೆ ಸಚಿವರು ಸೂಚಿಸಿದರು. ಅಗ್ನಿಶಾಮಕ ಸಿಬ್ಬಂದಿಗಳು, ಪೊಲೀಸರು ಕೂಡಲೇ ಕಾರ್ಯಾಚರಣೆ ಕೈಗೊಂಡು ಬೆಂಕಿ ನಂದಿಸಿದ ಬಗ್ಗೆ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ ಶ್ರೀಕೃಷ್ಣ ಕಾಮ್ಕರ, ಡಿ.ವೈ.ಎಸ್.ಪಿ ರವಿ ನಾಯ್ಕ, ಪೋಲಿಸ ವೃತ್ತ ನಿರೀಕ್ಷಕ ಸುರೇಶ ಯಳ್ಳೂರ, ಹಾಗೂ ಕಂದಾಯ, ಅಗ್ನಿಶಾಮಕ ದಳದ ಅಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.

error: