April 20, 2024

Bhavana Tv

Its Your Channel

ಯಲ್ಲಾಪುರದ ಬಿಜೆಪಿ ಕಛೇರಿಯಲ್ಲಿ ಸ್ವಾಮಿ ವಿವೇಕಾನಂದ ಜನ್ಮ ದಿನಾಚರಣೆ ಹಾಗೂ ರಾಮಕೃಷ್ಣ ಹೆಗಡೆ ಪುಣ್ಯಸ್ಮರಣೆ

ವರದಿ: ವೇಣುಗೋಪಾಲ ಮದ್ಗುಣಿ

ಯಲ್ಲಾಪುರ: : ರಾಜ್ಯ ಕಂಡ ಜನಪ್ರಿಯ ಮುಖ್ಯಮಂತ್ರಿ, ಧೀಮಂತ ನಾಯಕ ರಾಮಕೃಷ್ಣ ಹೆಗಡೆ ಅವರ ಪುಣ್ಯಸ್ಮರಣೆ ಹಾಗೂ ಭಾರತದ ಆಧ್ಯಾತ್ಮಿಕತೆಯ ಮೇರು ಪರ್ವತ ಸ್ವಾಮಿ ವಿವೇಕಾನಂದ ಅವರ ಜನ್ಮ ದಿನದ ಅಂಗವಾಗಿ ಯಲ್ಲಾಪುರ ಪಟ್ಟಣದ ಪಕ್ಷದ ಕಾರ್ಯಾಲಯದಲ್ಲಿ ಕಾರ್ಮಿಕ ಇಲಾಖೆಯ ಸಚಿವರಾದ ಶಿವರಾಮ ಹೆಬ್ಬಾರ ಅವರು ಅದಮ್ಯ ಚೇತನರ ಭಾವಚಿತ್ರಕ್ಕೆ ಪುಷ್ಪ ನ ಸಲ್ಲಿಸಿ ಗೌರವ ಸಮರ್ಪಿಸಿದರು.
ಈ ಸಂದರ್ಭದಲ್ಲಿ ಮಂಡಲಾಧ್ಯಕ್ಷರಾದ ಗೋಪಾಲಕೃಷ್ಣ ಎನ್.ಗಾಂವ್ಕರ, ವಿವೇಕ ಹೆಬ್ಬಾರ , ಪ್ರಧಾನ ಕಾರ್ಯದರ್ಶಿ ರವಿ ಭಟ, ಪಟ್ಟಣ ಪಂಚಾಯತ ಅಧ್ಯಕ್ಷರಾದ ಸುನಂದಾ ದಾಸ, ಉಪಾಧ್ಯಕ್ಷರಾದ ಶ್ಯಾಮಿಲಿ ಪಾಟಣಕರ, ಉದ್ಯಮಿಗಳಾದ ಬಾಲಕೃಷ್ಣ ನಾಯಕ ಉಪಸ್ಥಿತರಿದ್ದರು.

error: