April 25, 2024

Bhavana Tv

Its Your Channel

ಇಂದಿರಾ ಕ್ಯಾಂಟಿನಿನಲ್ಲಿ ಸರ್ಕಾರ ನಿಗದಿಪಡಿಸಿದ ತೂಕವನ್ನು ಗ್ರಾಹಕರಿಗೆ ನೀಡಲು ಆಗ್ರಹ

ವರದಿ: ವೇಣುಗೋಪಾಲ ಮದ್ಗುಣಿ

ಯಲ್ಲಾಪುರ : ಸರ್ಕಾರ ನಿಗದಿಪಡಿಸಿದ ತೂಕದ ಆಹಾರ ನೀಡುತ್ತಿಲ್ಲ ಎಂದು ರವಿವಾರ ಬೆಳಿಗ್ಗೆ ಕೆಲವೊಂದು ಗ್ರಾಹಕರು ಇಂದಿರಾ ಕ್ಯಾಂಟೀನ್ ನಿರ್ವಾಹಕರೊಂದಿಗೆ ವಾಗ್ವಾದ ನಡೆಸಿರುವ ಘಟನೆ ಯಲ್ಲಾಪುರ ನಡೆದಿದೆ.
ಪ್ರತಿದಿನ ಬೇರೆ ಬೇರೆ ರೀತಿಯ ಆಹಾರವನ್ನು ಜನರಿಗೆ ನೀಡಬೇಕೆಂದು ಸರ್ಕಾರದ ನಿಯಮಾವಳಿ ಇದೆ. ಆದರೆ ಯಲ್ಲಾಪುರದ ಇಂದಿರಾ ಕ್ಯಾಂಟೀನ್ ನಲ್ಲಿ ಕೇವಲ ಒಂದೇ ರೀತಿಯ ಆಹಾರವನ್ನು ಗ್ರಾಹಕರಿಗೆ ನೀಡಲಾಗುತ್ತಿದೆ. ಶನಿವಾರ ಕೂಡ ಪಲಾವ್ ಮಾಡಲಾಗಿದ್ದು, ರವಿವಾರವೂ ಫುಲಾವನ್ನು ಗ್ರಾಹಕರಿಗೆ ನೀಡಲಾಗಿದೆ. 300 ಗ್ರಾಮ ಪುಲಾವ ನೀಡುವ ಬದಲು ಅದರಲ್ಲಿಯೂ ಕಡಿಮೆ ತೂಕದ ಪುಲಾವ ನೀಡಲಾಗಿದೆ ಎಂದು ಗ್ರಾಹಕರಾದ ಅನಿಲ ಭಟ್ಟ ಹಾಗೂ ರಾಜು ಉಡುಪಿಕರ ಕ್ಯಾಂಟೀನ್ ನಿರ್ವಾಹಕರಲ್ಲಿ ಪ್ರಶ್ನಿಸಿದ್ದಾರೆ. ಸರ್ಕಾರ ನಿಗಧಿ ಪಡಿಸಿದ ತೂಕದಲ್ಲಿ ಆಹಾರ ನೀಡುತ್ತಿದ್ದೆವೆ ಎಂದು ಕ್ಯಾಂಟೀನ್ ನಿರ್ವಾಹಕ ವಾದ ಮಾಡಿದ್ದಾನೆ. ಸರ್ಕಾರ ಬಡವರು, ಕೂಲಿಕಾರ್ಮಿಕರು, ಶ್ರಮಿಕರಿಗೆ ಕಡಿಮೆ ದರದಲ್ಲಿ ಆಹಾರ ಸಿಗಬೇಕು ಅನ್ನುವ ನಿಟ್ಟಿನಲ್ಲಿ ಇಂದಿರಾ ಕ್ಯಾಂಟೀನ್ ಪ್ರಾರಂಭಿಸಿದೆ. ಪ್ರಾರಂಭದಲ್ಲಿ ಎಲ್ಲವು ಸರಿಯಾಗಿ ನಡೆದರೂ ನಂತರದ ದಿನಗಳಲ್ಲಿ ಗ್ರಾಹಕರನ್ನು ಬಿಟ್ಟಿ ತಿನ್ನುವವರಂತೆ ಕಾಣಲಾಗುತ್ತಿದೆ ಎನ್ನುವ ಆರೋಪ ಈ ಹಿಂದೆಯೂ ಕೇಳಿ ಬಂದಿತ್ತು. ಅಷ್ಟೆ ಅಲ್ಲದೇ ಕ್ಯಾಂಟೀನನಲ್ಲಿ ಕೆಲಸಮಾಡುವ ಸ್ಥಳೀಯ ಕಾರ್ಮಿಕರಿಗೆ ಸರಿಯಾದ ಸಮಯಕ್ಕೆ ಸಂಬಳ ನೀಡದೆ ಸತಾಯಿಸಲಾಗುತ್ತಿದೆ ಎಂದು ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆ ನಡೆಯುವ ಸಂದರ್ಭದಲ್ಲಿ ಕ್ಯಾಂಟೀನಿನಲ್ಲಿ ಕೆಲಸ ಮಾಡುವ ಕಾರ್ಮಿಕರು, ಪ.ಪಂ ಸದಸ್ಯರು ಹಾಗೂ ಅಧಿಕಾರಿಗಳಲ್ಲಿ ತಮ್ಮ ಅಳಲನ್ನು ತೋಡಿಕೊಂಡಿದ್ದರು.
ಏನೇ ಆದರೂ ಕೂಡ ಬಡವರು ಶ್ರಮಿಕರಿಗಾಗಿ ನಿರ್ಮಾಣವಾಗಿರುವ ಇಂದಿರಾ ಕ್ಯಾಂಟೀನ್ ಸರ್ಕಾರದ ನಿಯಮಾವಳಿಯಂತೆ ನಡೆಯಬೇಕು ಹಾಗೂ ಗ್ರಾಹಕರಿಗೆ ನಿಗದಿಪಡಿಸಿದ ಪ್ರಮಾಣದ ಉತ್ತಮ ಮಟ್ಟದ ಆಹಾರವನ್ನು ಪೂರೈಕೆ ಮಾಡಬೇಕು. ಈ ಬಗ್ಗೆ ಸಂಬAಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಗಮನ ಹರಿಸಬೇಕಾಗಿದೆ.
ಪೌರಾಢಳಿತ ನಿರ್ದೇಶಕರಿಗೆ ಕ್ಯಾಂಟೀನ್ ಬಗ್ಗೆ ದೂರು ;
ಯಲ್ಲಾಪುರದ ಇಂದಿರಾ ಕ್ಯಾಂಟೀನಲ್ಲಿ ಕಳಪೆ ಗುಣಮಟ್ಟದ ಆಹಾರ ಪೂರೈಸುತ್ತಿರುವ ಕುರಿತು ಪೌರಾಡಳಿತ ನಿರ್ದೇಶಕರಿಗೆ, ಜಿಲ್ಲಾದಿಕಾರಿ, ತಹಶೀಲ್ದಾರ ಹಾಗೂ ಪಟ್ಟಣ ಪಂಚಾಯತ ಮುಖ್ಯಾಧಿಕಾರಿಗಳಿಗೆ 15 ಡಿಸೆಂಬರ್ 2021ರಂದು ಮನವಿ ನೀಡಿದ್ದೇವೆ. ಇಂದಿರಾ ಕ್ಯಾಂಟೀನಿನಲ್ಲಿ ಆಹಾರದ ವಿತರಣೆ ಗುತ್ತಿಗೆ ಪಡೆದುಕೊಂಡವರು ಸಾರ್ವಜನಿಕರಿಗೆ ಕಳಪೆ ಗುಣಮಟ್ಟದ ಆಹಾರವನ್ನು ನೀಡುತ್ತಿದ್ದಾರೆ. ಅಲ್ಲದೆ ಬಡವರ ಪಾಲಿನ ರೇಷನ: ಅಕ್ಕಿ ಬಳಸಿ ಸಾರ್ವಜನಿಕರಿಗೆ ಊಟವನ್ನು ನೀಡುತ್ತಿದ್ದಾರೆ. ಈ ಬಗ್ಗೆ ಸಂಬAಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಗಮನ ಹರಿಸಲು ಅವರು ಆಗ್ರಹಿಸಿದ್ದಾರೆ.ಇಂದಿರಾ ಕ್ಯಾಂಟೀನ್ ರಚನೆಯ ಪ್ರಕಾರ 7 ಸಿಬ್ಬಂದಿಗಳು ಕೆಲಸಕ್ಕೆ ಇರಬೇಕಿತ್ತು. ಕೇವಲ 6 ಮಂದಿ ಮಾತ್ರ ಇದ್ದಾರೆ. ಇದು ಸರಕಾರದ ಕಟ್ಟಡವಾಗಿದ್ದು ಅದರಲ್ಲಿ ಅಮೂಲ್ಯವಾದ ವಸ್ತುಗಳಿದ್ದು ಅದಕ್ಕೆ ವಾಚಮನ್ ಹುದ್ದೆ ಇದ್ದರೂ ಸಹ ನೇಮಕಾತಿಯನ್ನು ಮಾಡಿಲ್ಲ. ಅಲ್ಲದೆ ಬೆಳಗಿನ ತಿಂಡಿ 200 ಪ್ಲೇಟ್, ಮಧ್ಯಾಹ್ನದ ಊಟ 200 ಪ್ಲೇಟ್, ರಾತ್ರಿ ಊಟ 200 ಪ್ಲೇಟ್ ಇರುತ್ತಿದ್ದು, ಸರಕಾರದವರು ಸಬ್ಸಿಡಿ ನೀಡುತ್ತಿದ್ದಾರೆ. ಆದರೆ ಗುತ್ತಿಗೆದಾರರು ಪ್ರತಿದಿನ ಊಟ ಕಡಿಮೆ ಹೋದರೂ ಸಹ ಪಟ್ಟಣ ಪಂಚಾಯತಕ್ಕೆ ಸುಳ್ಳು ಮಾಹಿತಿ ನೀಡಿ ಸಂಪೂರ್ಣ ವ್ಯಾಪಾರ ಆಗಿದೆ ಎಂದು ಮಾಹಿತಿ ನೀಡುತ್ತಿದ್ದಾರೆ. ಆದರೆ ಪಟ್ಟಣ ಪಂಚಾಯತದವರು ಪರಿಶೀಲಿಸಿ ಅದರ ಬಿಲ್ ಮಾಡುತ್ತಾರೆ. ಪಟ್ಟಣ ಪಂಚಾಯತ ಸದಸ್ಯ ಸೋಮೇಶ್ವರ ನಾಯ್ಕ ಸ್ಥಳಕ್ಕೆ ಭೇಟಿ ನೀಡಿ ರೇಷನ್ ಅಕ್ಕಿ ಬಳಸುತ್ತಿದ್ದುದನ್ನು ನೋಡಿ ಸಾರ್ವಜನಿಕರಿಗೆ ಉತ್ತಮ ಗುಣಮಟ್ಟದ ಆಹಾರ ನೀಡುವಂತೆ ಸೂಚನೆ ನೀಡಿದ್ದರು. ರೇಷನ್ ಅಕ್ಕಿ ಎಲ್ಲಿಂದ ಬಂತೆನ್ನುವುದರ ಬಗ್ಗೆ ತನಿಖೆ ಕೈಗೊಳ್ಳಬೇಕು. ಹಾಗೂ ಅಲ್ಲಿನ ಸಿಬ್ಬಂದಿಗಳಿಗೆ ಸಮಯಕ್ಕೆ ವೇತನ ಪಾವತಿ ಮಾಡಬೇಕು ಹಾಗೂ ಸದರಿ ಕ್ಯಾಂಟೀನಿಗೆ ವಾಚಮನ್ ನೇಮಿಸಬೇಕೆಂದು ವಿನಂತಿಸಿಕೊAಡಿದ್ದಾರೆ. ಅನಿಲ ಭಟ್ಟರ ದೂರಿನ ಮೇಲೆ ಇಂದಿರಾ ಕ್ಯಾಂಟೀನ ಭೇಟಿ ನೀಡಿ ಇದರ ಕುರಿತು ಮಾಹಿತಿ ಪಡೆದ ಪಟ್ಟಣ ಪಂಚಾಯತ ಆರೋಗ್ಯ ನಿರೀಕ್ಷಕ ಗುರು ಗಡಗಿ ಕ್ಯಾಂಟೀನ ನಿರ್ವಾಹಕರಿಗೆ ಸೂಚನೆ ನೀಡಿದ ಅವರು, ನಿಗದಿ ಪಡಿಸಿದ ತೂಕದ, ಗುಣಮಟ್ಟದ ಆಹಾರವನ್ನು ಪೂರೈಕೆ ಮಾಡಬೇಕೆಂದು ತಿಳಿಸಿದರು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಕ್ರಮಕೈಗೊಳ್ಳ ಬೇಕಾಗುತ್ತದೆ ಎಂದು ಎಚ್ಚರಿಸಿದರು.

error: