April 24, 2024

Bhavana Tv

Its Your Channel

ಮಲವಳ್ಳಿಯಲ್ಲಿ ರಾಮಲಿಂಗೇಶ್ವರ ದೇವರ ಸಂಕ್ರಾOತಿ ಜಾತ್ರೆ ಸಂಪನ್ನ

ವರದಿ. ವೇಣುಗೋಪಾಲ ಮದ್ಗುಣಿ

ಯಲ್ಲಾಪುರ ತಾಲ್ಲೂಕಿನ ಮಲವಳ್ಳಿಯಲ್ಲಿ ಸಂಕ್ರಾoತಿ ಪ್ರಯುಕ್ತ ಆಚರಿಸಲಾಗುವ ಮೂರು ದಿನಗಳ ಶ್ರೀ ರಾಮಲಿಂಗೇಶ್ವರ ದೇವರ ಜಾತ್ರೆಯು ಸರಳ ಆಚರಣೆಯೊಂದಿಗೆ ಸಂಪನ್ನಗೊoಡಿತು.
ಜನೆವರಿ 14 ರಂದು ವಿವಿದ ಧಾರ್ಮಿಕ ಕಾರ್ಯ ಮಹಾ ಸಂಕಲ್ಪದೊAದಿಗೆ ಆರಂಭಗೊAಡ ಜಾತ್ರೆ, ಜ. 15 ಸಂಕ್ರಾAತಿಯAದು ರುದ್ರ ಹವನ, ಗಣಹವನ, ಉಪನಿಷತ್ ಹವನ, ಮಹಾಪೂಜೆ, ಬಲಿ ಸೇವೆ, ಪಲ್ಲಕ್ಕಿ ಉತ್ಸವ, ರಥೋತ್ಸವ, ಉರುಳು ಸೇವೆ, ರಥ ಕಾಣಿಕೆ ಅರ್ಪಣೆ ಮುಂತಾದ ಧಾರ್ಮಿಕ ಕಾರ್ಯಗಳು ಜರುಗಿದವು. ಶುಕ್ರವಾರ ರಾತ್ರಿ ಕರಡಿ ಕುಣಿತದ ಸೇವೆ ನಡೆಯಿತು. ಕೊನೆಯ ದಿನ ಶತರುದ್ರ, ವಾರ್ಷಿಕ ದೇವಕಾರ್ಯ, ಆಶೀರ್ವಾದ ಗ್ರಹಣ ಹಾಗೂ ಸಮಾರೋಪ ಕಾರ್ಯಕ್ರಮದೊಂದಿಗೆ ಜಾತ್ರೆ ಸಂಪನ್ನಗೊoಡಿತು.
ಮೊಕ್ತೇಸರ ಪಿ.ವಿ.ಭಟ್ಟ ಮೊಠಾರಿ, ಹಾಗೂ ಆಡಳಿತ ಮಂಡಳಿ ಸದಸ್ಯರ ನೇತ್ರತ್ವದಲ್ಲಿ ಗೋಕರ್ಣದ ಕ್ಷೇತ್ರ ಪುರೋಹಿತರಾದ ಗಜಾನನ ಹಿರೇ, ಅಮೃತೇಶ ಹಿರೇ ಅವರ ಪ್ರಧಾನ ಆಚಾರತ್ವದಲ್ಲಿ ದೇವಸ್ಥಾನ ಪುರೋಹಿತರಾದ ರಾಮಚಂದ್ರ ಭಟ್ಟ ಭಟ್ರಮನೆಯವರ ಸಹಕಾರದಲ್ಲಿ ಧಾರ್ಮಿಕ ವಿಧಿ ವಿಧಾನಗಳು ಜರುಗಿದವು.
ವಿಜ್ರಂಭಣೆಯಿoದ ನಡೆಯುತ್ತಿದ್ದ ಈ ಜಾತ್ರೆ ಕೋವಿಡ್ ಕಾರಣದಿಂದ ಧಾರ್ಮಿಕ ವಿಧಿ ವಿಧಾನಗಳಿಗಷ್ಟೇ ಸಿಮೀತಗೊಳಿಸಲಾಗಿದ್ದು, ಕೋವಿಡ್ ನಿಯಮಾನುಸಾರ ಜಾತ್ರೆ ಆಚರಿಸಲಾಗಿದೆ.

error: