April 16, 2024

Bhavana Tv

Its Your Channel

ರಂಗಭೂಮಿ ಕಲಾವಿದ ಡಾ. ಜಯರಾಂ ಭಟ್ಟರಿಂದ ಉಸ್ತುವಾರಿ ಸಚಿವರಿಗೆ ಪತ್ರ

ವರದಿ: ವೇಣುಗೋಪಾಲ ಮದ್ಗುಣಿ

ಯಲ್ಲಾಪುರ: ಕೊವಿಡ-19 ಸಾಂಕ್ರಾಮಿಕ 3ನೇ ಅಲೆಯ ನಿಮಿತ್ತ ರಾಜ್ಯ ಸರ್ಕಾರ ವಿಕೇಂಡ್ ಕರ್ಫ್ಯೂನಲ್ಲಿ ಯಾವುದೆ ಸಭೆ ಸಮಾರಂಭ ಮಾಡಬಾರದೆಂಬ ಆದೇಶವನ್ನು ಹೊರಡಿಸಿದ ಹಿನ್ನಲೆಯಲ್ಲಿ ರಂಗಭೂಮಿ ಕಲಾವಿದರ ಬದುಕು ಕಳೆದ ಮೂರು ವರ್ಷಗಳಿಂದ ಲಾಕಡೌನನಿಂದಾಗಿ ಸಂಕಷ್ಟಕ್ಕೆ ಸಿಲುಕಿ, ಸಂಸಾರವನ್ನು ಮುನ್ನಡೆಸುವುದು ತುಂಬಾ ಕಷ್ಟದಾಯಕವಾಗಿದೆ.ಮಕ್ಕಳ ಶಿಕ್ಷಣಕ್ಕೆ ಫೀ ಹಣವನ್ನು ಕಟ್ಟಲು ಸಾಧ್ಯವಾಗದೆ ಅವರನ್ನು ಕೆಲಸಕ್ಕೆ ಕಳುಹಿಸುವ ಸಂದರ್ಭ ಬಂದಿದೆ.ಹೀಗಾಗಿ ಕಲಾವಿದರ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ.ಕಾರಣ ಹಬ್ಬ ಹರಿದಿನಗಳಲ್ಲಿ ಹಾಗೂ ಜಾತ್ರೆ ಗಳಲ್ಲಿ ಕೋವಿಡ್ ಮಾರ್ಗಸೂಚಿ ಅನುಸರಿಸಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡಲು ಸಂಬoಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡುವಂತೆ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು, ಕಾರ್ಮಿಕ ಇಲಾಖೆಯ ಸಚಿವರಾದ ಶಿವರಾಮ ಹೆಬ್ಬಾರವರಿಗೆ ಶ್ರೀಗುರು ಜಿಲ್ಲಾ ರಂಗಭೂಮಿ ಕಲಾವಿದರ ವೇದಿಕೆಯ ಅಧ್ಯಕ್ಷರಾದ ಡಾ. ಜಯರಾಂ ಭಟ್ಟರವರು ಪತ್ರ ಬರೆದು ವಿನಂತಿಸಿದ್ದಾರೆ.

error: