March 29, 2024

Bhavana Tv

Its Your Channel

ಕೆರೆಹೊಸಳ್ಳಿಯಲ್ಲಿ ಆಯುಷ್ ಸೇವಾ ಗ್ರಾಮ ನಾಮಫಲಕ ಉದ್ಘಾಟಿಸಿದ ಶಾಂತಾರಾಮ ಸಿದ್ದಿ

ವರದಿ: ವೇಣುಗೋಪಾಲ ಮದ್ಗುಣಿ

ಯಲ್ಲಾಪುರ: ವಿಧಾನ ಪರಿಷತ ಸದಸ್ಯರಾದ ಶಾಂತಾರಾಮ ಸಿದ್ದಿಯವರು ತಾಲೂಕಿನ ಕಂಪ್ಲಿ ಪಂಚಾಯತದ ಕೆರೆಹೊಸಳ್ಳಿ ಗ್ರಾಮದಲ್ಲಿ ಕರ್ನಾಟಕ ಸರ್ಕಾರ ಆಯುಷ್ ಇಲಾಖೆ ಬೆಂಗಳೂರು ,ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ ಉತ್ತರ ಕನ್ನಡ,ಜಿಲ್ಲಾ ಆಯುಷ್ ಅಧಿಕಾರಿಗಳ ಕಛೇರಿ, ಕಾರವಾರ 2021-22 ನೇ ಸಾಲಿನ ಟಿಎಸ್.ಪಿ ಯೋಜನೆಯಡಿಯಲ್ಲಿ ಆಯುಷ್ ಸೇವಾಗ್ರಾಮ ಕಾರ್ಯಕ್ರಮದ ಅನುಷ್ಠಾನ ಸರಕಾರಿ ಆಯುರ್ವೇದ ಚಿಕಿತ್ಸಾಲಯ ,ಉಮ್ಮಚಗಿ, ತಾಲೂಕ ಯಲ್ಲಾಪುರ , ಆಯುಷ್ ಸೇವಾ ಗ್ರಾಮ ಕೆರೆಹೊಸಳ್ಳಿ ಇದರ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ನಾಮಫಲಕವನ್ನು ಉದ್ಘಾಟಿಸಿ ಕಾರ್ಯಕ್ರಮ ಉದ್ಧೇಶಿಸಿ ಮಾತನಾಡಿದರು.
ಆಯುರ್ವೇದವನ್ನು ಕೇವಲ ಒಂದು ಔಷದಿಯನ್ನಾಗಿ ಪರಿಗಣಿಸದೆ ಜೀವನ ಪದ್ಧತಿಯನ್ನಾಗಿ ಅಳವಡಿಸಿಕೊಂಡರೆ ಆರೋಗ್ಯಕರವಾದ ಜೀವನ ನಡೆಸಬಹುದು ಎಂದರು.
ಈ ಸಂದರ್ಭದಲ್ಲಿ ಕಂಪ್ಲಿ ಪಂಚಾಯತ ಅಧ್ಯಕ್ಷರಾದ ವಿನಾಯಕ ನಾಯ್ಕ ,ಹಾಸಣಗಿ ಪಂಚಾಯತ ಅಧ್ಯಕ್ಷರಾದ ಪುರಂದರ ನಾಯ್ಕ,ಕಂಪ್ಲಿ ಪಂಚಾಯತ ಉಪಾಧ್ಯಕ್ಷರಾದ ಕುಮಾರಿ ರಂಜನಾ ಆಚಾರಿ,ಕಂಪ್ಲಿ ಹಾಗೂ ಹಾಸಣಗಿ ಪಂಚಾಯತ ಸದಸ್ಯರು,ಗ್ರಾಮ ಅರಣ್ಯ ಸಮಿತಿಯ ಅಧ್ಯಕ್ಷರಾದ ಸುರೇಶ ಸಿದ್ದಿ, ಪಂಚಾಯತ ಅಧಿಕಾರಿಗಳು, ಸಮಾಜ ಕಲ್ಯಾಣ ಅಧಿಕಾರಿಗಳು, ಆಯುಷ್ ವೈಧ್ಯಾಧಿಕಾರಿಗಳಾದ ಯೋಗಿಶ ಹಾಗೂ ಮಂಜುನಾಥ ಭಟ್, ಆಯುಷ್ ಆರೋಗ್ಯ ಕಾರ್ಯಕರ್ತರು, ಕೆರೆಹೊಸಳ್ಳಿ ಶಾಲೆಯ ಮುಖ್ಯಾಧ್ಯಾಪಕರು,ಸ್ಥಳಿಯ ಪ್ರಮುಖರಾದ ಡಿ.ಜಿ ಭಾಗ್ವತ, ಅಂಗನವಾಡಿ ಕಾರ್ಯಕರ್ತೆಯರು,ಎಸ್.ಎಸಿ.ಎಸ್.ಟಿ.ಫಲಾನುಭವಿಗಳು ಉಪಸ್ಥಿತರಿದ್ದರು.

error: