April 20, 2024

Bhavana Tv

Its Your Channel

ಜನ್ಮ ಕೊಟ್ಟ ತಂದೆಯನ್ನು, ವಿದ್ಯೆ ಕೊಟ್ಟ ಗುರುವನ್ನು, ಅನ್ನಕೊಟ್ಟ ಸಂಸ್ಥೆಯನ್ನು ಸದಾ ಸ್ಮರಣೆಯಲ್ಲಿ ಇಟ್ಟುಕೊಳ್ಳುವುದು ನಮ್ಮ ಕರ್ತವ್ಯ- ವಿ.ಕೆ.ಗಾಂವ್ಕರ

ವರದಿ: ವೇಣುಗೋಪಾಲ ಮದ್ಗುಣಿ

ಯಲ್ಲಾಪುರ : ವಿದ್ಯಾ ಸೇವೆ ಸಂಪಾದನೆಯ ಮಾರ್ಗ ಎಂದು ನಾನು ತಿಳಿದವನಲ್ಲ ಅದು ಮಾನವ ಸಮಾಜದೊಂದಿಗೆ ಸಂಬAಧವನ್ನು ವಿಸ್ತರಿಸಿಕೊಳ್ಳುವ ಮಹಾ ಮಾರ್ಗವೆಂದು ನಂಬಿದ್ದೇನೆ ಎಂದು ಸೇವಾ ನಿವೃತ್ತಿಯನ್ನು ಹೊಂದಿದ ದೈಹಿಕ ಶಿಕ್ಷಣ ಶಿಕ್ಷಕರಾದ ವಿ. ಕೆ. ಗಾಂವ್ಕರ ಅಭಿಪ್ರಾಯಪಟ್ಟರು.

ಅವರು ೨೯ ವರ್ಷಗಳ ಸುದೀರ್ಘಕಾಲ ಇಡಗುಂದಿಯ ವಿಶ್ವದರ್ಶನ ಪ್ರೌಢ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು. ಅದಕ್ಕಾಗಿ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಶ್ರೀ ಶ್ರೀಮದ್ ಗಂಗಾಧರೇAದ್ರ ಸರಸ್ವತಿ ಸಭಾಭವನದಲ್ಲಿ ಬೀಳ್ಕೊಡುಗೆ ಸಮಾರಂಭವನ್ನು ಆಯೋಜಿಸಲಾಗಿತ್ತು. ಶೈಕ್ಷಣಿಕ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದ ಹಿರಿಯರಾದ ಪ್ರಕಾಶ ಕುಂಜಿ ಯವರು ತಮ್ಮ ವಿದ್ಯಾರ್ಥಿಯಾಗಿದ್ದ ವಿ.ಕೆ ಗಾವ್ಕರ್ ರವರು ಪ್ರಾಮಾಣಿಕತೆಗೆ ಮತ್ತು ಪರಿಶ್ರಮಕ್ಕೆ ಮಾದರಿಯಾಗಿದ್ದಾರೆ. ಅಂತಹ ವ್ಯಕ್ತಿಯ ಸೇವೆಯನ್ನು ಪಡೆದ ಮತ್ತು ಅದಕ್ಕೆ ಯೋಗ್ಯವಾದ ಗೌರವವನ್ನು ನೀಡಿದ ಸಂಸ್ಥೆಗೆ ಅಭಿನಂದನೆಗಳು. ಕ್ರೀಡೆ ಸಂಸ್ಕೃತಿ, ವಿದ್ಯೆ ಎಲ್ಲವನ್ನು ಪ್ರೀತಿಸುವ ಸಂಸ್ಥೆಗಳು, ಅವುಗಳನ್ನು ಸಂವಹನ ಮಾಡಿದ ವಿ .ಕೆ ಗಾಂವ್ಕರ ಹಾಗೂ ಅವರ ಕುಟುಂಬಕ್ಕೂ ಅವರಿಗೂ ಶುಭವಾಗಲೆಂದು ಹಾರೈಸಿದರು.

ಸಮಾಜದಲ್ಲಿ ಶಿಕ್ಷಕ ಮತ್ತು ಮಾಧ್ಯಮದ ಸೇವೆ ಗಣನೀಯವಾದದ್ದು. ಉಭಯ ಕ್ಷೇಮವನ್ನು ಕಾಪಾಡಿಕೊಳ್ಳುವುದು ಸಮಾಜದ ಹೊಣೆಯಾಗಿದೆ. ಶಿಕ್ಷಕರು ನೀಡಿದ ಸಂಸ್ಕಾರ ವಿದ್ಯಾರ್ಥಿಗಳ ಜೀವನಕ್ಕೆ ನೀಡಿದ ಪಾಠವಾಗಿದೆ. ಪಾಠವನ್ನು ಯಶಸ್ವಿಯಾಗಿ ಸಂವಹನ ಮಾಡಿದ ನಮ್ಮ ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕರಾದ ವಿ.ಕೆ.ಗಾಂವ್ಕರ್ ರವರಿಗೆ ಅಭಿನಂದನೆಗಳು. ಆದರ್ಶ ಮೌಲ್ಯಗಳು ಸಮಾಜದ ಆಶಯ ಇನ್ನೂ ಗಟ್ಟಿಯಾಗಿದೆ. “ಶಿಕ್ಷಕ ಇದು ವೃತ್ತಿಯಲ್ಲ ಇದೊಂದು ಜವಾಬ್ದಾರಿ” ಎಲ್ಲ ವೃತ್ತಿಯಲ್ಲಿ ಇರುವವರು ಸಮಾನ ಗೌರವವನ್ನು ಪಡೆಯಬಹುದು. ಪಡೆಯುವ ಶಿಕ್ಷಣ ಜವಾಬ್ದಾರಿಯಾಗಬೇಕು. ಜೀವನ ನಿಂತಿರುವುದು ಶಿಕ್ಷಣದ ತಳಹದಿಯ ಮೇಲೆ. ಶಿಕ್ಷಣದ ಗುರಿ ಕೇವಲ ಅಂಕ ಪಡೆಯುವುದಿಲ್ಲ. ಮಹೋನ್ನತ ಗುರಿಯನ್ನು ಸಾಧಿಸುವುದು ಹಾಗೂ ಶ್ರೇಷ್ಠ ಪ್ರಜೆ ಯಾಗುವುದು ಎಂದು ಸಂಸ್ಥೆಯ ಅಧ್ಯಕ್ಷರಾದ ಹರಿಪ್ರಕಾಶ ಕೋಣೆಮನೆ ತಮ್ಮ ಅಧ್ಯಕ್ಷೀಯ ಮಾತಿನಲ್ಲಿ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ನಿವೃತ್ತಿಯ ಜೀವನದ ಬದ್ರತೆಗಾಗಿ ಪಿಂಚಣಿ ನೀಡುವುದು ಸರಕಾರದ ನೀತಿಯಾಗಿದೆ ಹಾಗೂ ಅದು ಅನಿವಾರ್ಯವಾಗಿದೆ. ಆದರೆ ಇತ್ತೀಚೆಗೆ ಈ ಸೌಲಭ್ಯದಿಂದ ವಂಚಿತರಾದ ಸಿಬ್ಬಂದಿಗಳಿಗೆ ಅನುಕೂಲವಾಗುವಂತೆ ಯೋಜನೆಗಳನ್ನು ರೂಪಿಸಬೇಕಾದ ಅಗತ್ಯವಿದೆ ಎಂದು ಸಂಸ್ಥೆಯ ಕಾರ್ಯದರ್ಶಿಗಳಾದ ನರಸಿಂಹ ಕೋಣೆಮನೆಯವರು ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಇಡಗುಂದಿ ಪ್ರೌಢ ಶಾಲೆಯ ಮುಖ್ಯಸ್ಥರಾದ ಪ್ರಸನ್ನ ಹೆಗಡೆಯವರು ಸುದೀರ್ಘಕಾಲದ ತಮ್ಮ ಒಡನಾಟದ ಅನುಭವವನ್ನು ಸ್ಮರಿಸಿಕೊಂಡರು.
ಕೇಂದ್ರೀಯ ಶಾಲೆಯ ಪ್ರಾಚಾರ್ಯರಾದ ಮಹಾದೇವಿ ಭಟ್ಟ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಡಾ.ದತ್ತಾತ್ರೇಯ ಗಾಂವ್ಕರ ತಮ್ಮ ಅನಿಸಿಕೆಯನ್ನು ಹಂಚಿಕೊAಡರು ಹಾಗೂ ವಿ.ಕೆ ಗಾಂವ್ಕರ್ ರವರ ಸೇವಾ ಅವಧಿಯ ಸಾಕ್ಷ್ಯಚಿತ್ರ ಪ್ರಸ್ತುತಿಯನ್ನು ನಡೆಸಿಕೊಟ್ಟರು . ವಿದ್ಯಾರ್ಥಿನಿಯರಾದ ಕುಮಾರಿ ಪಲ್ಲವಿ ಭಟ್ ಹಾಗೂ ಅಶ್ವಿನಿಗೌಡ ಈ ಸಂದರ್ಭದಲ್ಲಿ ತಮ್ಮ ಮೆಚ್ಚಿನ ಶಿಕ್ಷಕರಾದ ವಿ. ಕೆ ಗಾಂವ್ಕರ್ ಕುರಿತು ಅನಿಸಿಕೆ ಹಂಚಿಕೊAಡರು. ಸಂಗೀತ ಶಿಕ್ಷಕಿ ಪುಷ್ಪಾ ಭಟ್ಟ ಪ್ರಾರ್ಥಿಸಿದರು. ವಿಶ್ವದರ್ಶನ ಕನ್ನಡ ಮಾಧ್ಯಮ ಪ್ರೌಢಶಾಲೆಯ ಮುಖ್ಯಾಧ್ಯಾಪಕಿ ಮುಕ್ತಾ ಶಂಕರ ಸ್ವಾಗತಿಸಿದರು. ಶಿಕ್ಷಕಿ ಪ್ರೇಮಾ ಗಾಂವ್ಕರ ಕಾರ್ಯಕ್ರಮ ನಿರ್ವಹಿಸಿದರು. ಹಾಗೂ ಬಿ.ಇಡಿ ಕಾಲೇಜಿನ ಪ್ರಾಚಾರ್ಯ ಡಾ. ಎಸ್. ಎಲ್. ಭಟ್ ಕಾರ್ಯಕ್ರಮದ ಕೊನೆಯಲ್ಲಿ ವಂದಿಸಿದರು.

error: