October 4, 2022

Bhavana Tv

Its Your Channel

ಕೃತಿ ಅವಲೋಕನ ಮತ್ತು ಸ್ವಾತಂತ್ರ‍್ಯ ಅಮೃತ ಮಹೋತ್ಸವ ವಿಶೇಷ ಕವಿಗೋಷ್ಠಿ ಕಾರ್ಯಕ್ರಮ

ವರದಿ: ವೇಣುಗೋಪಾಲ ಮದ್ಗುಣಿ

ಶಿರಸಿ:- ಶಿರಸಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಶಿರಸಿ ತಾಲೂಕು ಸಾಹಿತ್ಯ ಹಾಗೂ ಕಲೆಯಲ್ಲಿ ಹಲವು ಪ್ರತಿಭೆಗಳನ್ನು ನೀಡಿದ ಕೀರ್ತಿ ಈ ಮಣ್ಣಿಗೆ ಇದೆ ಎಂದು ಜಿ.ವಿ.ಭಟ್ ಕೊಪ್ಪಲತೋಟ ಅವರು ನುಡಿದರು.

ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ತಾಲೂಕು ಘಟಕ ಶಿರಸಿ, ವಾಸ್ತವ ವಾರ್ತೆ ಸೇವಾ ವಾಹಿನಿ ಹಾಗೂ ಓದುಗರ ಬಳಗದ ಸಂಯುಕ್ತಾಶ್ರಯದಲ್ಲಿ ಇಲ್ಲಿನ ನೆಮ್ಮದಿ ಕುಟೀರದಲ್ಲಿ ನಡೆದ ಕೃತಿ ಅವಲೋಕನ ಮತ್ತು ಸ್ವಾತಂತ್ರ‍್ಯ ಅಮೃತ ಮಹೋತ್ಸವ ವಿಶೇಷ ಕವಿಗೋಷ್ಠಿ ಕಾರ್ಯಕ್ರಮದ ಅಧ್ಯಕ್ಷರಾಗಿ ಜಿ.ವಿ. ಭಟ್ಟ ಕೊಪ್ಪಲತೋಟ ಅವರು ಮಾತನಾಡಿದರು.
ದತ್ತಗುರು ಕಂಠಿಯವರ ಮಕ್ಕಳ ಕಥಾ ಸಂಕಲನ ಗೂಳಿಯ ಹೋಳಿ ಎನ್ನುವ ಕೃತಿಯನ್ನು ಪ್ರತಿಭಾ ಎಂ ನಾಯ್ಕ ಪರಿಚಯಿಸಿದರು. ಮಕ್ಕಳಿಗೆ ಕಥೆ ಹೇಳುವ ಪದ್ದತಿ ಈಗ ಕಡಿಮೆಯಾದಂತೆ, ಓದುವ ಹವ್ಯಾಸವೂ ಕಡಿಮೆಯಾಗುತ್ತಿದೆ. ಬರೆಯುವ ಪದಗಳು ಪುಸ್ತಕ ರೂಪದಲ್ಲಿ ಪ್ರಕಟವಾಗಬೇಕು. ಮಕ್ಕಳಿಗೆ ಓದುವ ಹವ್ಯಾಸ ಬೆಳೆಸಬೇಕು ಕಂಠಿಯವರ ಪುಸ್ತಕದ ಎರಡು ಕಥೆಗಳನ್ನು ವಿಶ್ಲೇಷಿಸಿ ನಂತರ ಮಾತನಾಡಿದ ದತ್ತಗುರು ಕಂಠಿಯವರು ತನ್ನ ಮಗನಿಗೆ ಹೇಳುವ ಕಥೆಗಳೆಲ್ಲವೂ ಬರೆದು ಇಡುತ್ತಿದ್ದೆ. ಈಗ ಅವೇ ಪುಸ್ತಕದ ರೂಪ ಪಡೆದಿವೆ. ಪ್ರತಿಯೊಂದು ಕಥೆಯೂ ಪತ್ರಿಕೆಯವರು ಮೆಚ್ಚಿ ಪ್ರಕಟ ಪಡಿಸಿದ ಕಥೆಯೇ ಆಗಿದೆ ಎಂದು ನುಡಿದರು.
ಗಣಪತಿ ಭಟ್ಟ ವರ್ಗಾಸರ ಇವರು ಭವ್ಯಾ ಹಳೆಯೂರು ಅವರ ಶೂನ್ಯಗರ್ಭ ಎನ್ನುವ ಕಥಾಸಂಕಲನವನ್ನು ಪರಿಚಯಿಸಿ, ಬುದ್ದಿಗಿಂತಲೂ ಇಲ್ಲಿಯ ಕಥೆ ಮನಸ್ಸಿಗೆ ಕೆಲಸ ಕೊಡುತ್ತದೆ. ಒಮ್ಮೆ ಓದಿದ ಮೇಲೆ ಕೆಲ ಸಮಯದ ವರೆಗೆ ಕಾಡುವಂತಹ ಕಥೆಗಳು , ನಮ್ಮ ಬದುಕಿನಲ್ಲೂ ಹೀಗೊಮ್ಮೆ ಆಗಿತ್ತಲ್ಲ ಎಂದು ಅನ್ನಿಸುವಂತಹ ಕಥೆಗಳು ಇಲ್ಲಿವೆ. ಎಂದು ಕೆಲ ಕಥೆಗಳನ್ನು ವಿವರಿಸಿದರು.
ಬರಹಗಾರ ಯಾವ ಯೋಚನೆಯಿಂದ ಬರೆದಿರುತ್ತಾನೋ ಅದೇ ರೀತಿಯಲ್ಲಿ ಓದುಗನಿಗೆ ತಲುಪಬೇಕೆಂದೇನು ಇಲ್ಲ. ಓದುಗರು ಅವರಿಷ್ಟದಂತೆಯೇ ಓದಿಕೊಳ್ಳಲಿ. ಓದಿ ಖುಶಿ ಪಟ್ಟಾಗ ಒಬ್ಬ ಬರಹಗಾರನ ಬರಹಕ್ಕೆ ಸಾರ್ಥಕತೆ ಲಭ್ಯವಾಗುತ್ತದೆ ಎಂದು ಕಥೆಗಾರ್ತಿ ಭವ್ಯಾ ಹಳೆಯೂರು ನುಡಿದರು. ಡಾ.ಜಿ.ಎ.ಹೆಗಡೆ ಸೋಂದಾ ಬರಹ ಯಾವಾಗಲೂ ಚಾಲ್ತಿಯಲ್ಲಿರಬೇಕು, ನಿಲ್ಲದೇ ಮುನ್ನಡೆಯುತ್ತಿರು ಎಂಬುದನ್ನು ಹೇಳಿದರು.
ಇನ್ನೊರ್ವ ಗೌರವ ಉಪಸ್ಥಿತರಿದ್ದ ಹಿರಿಯ ಸಾಹಿತ್ಯಾಭಿಮಾನಿ ಜಲಜಾಕ್ಷಿ ಶೆಟ್ಟಿ ಅವರು ಸ್ವತಂತ್ರ ಹೋರಾಟಗರಾರನ್ನು ನೆನೆಯುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ ಎಂದು ದೇಶಭಕ್ತಿಗೆ ಪೂರಕವಾದ ಕವನ ವಾಚನ ಮಾಡಿದರು.
ರಾಜಲಕ್ಷ್ಮೀ ಭಟ್, ವಿಮಲಾ ಭಾಗ್ವತ್, ಗೋಪಾಲಕೃಷ್ಣ ಹೆಗಡೆ, ಸೌಮ್ಯ ಗಣಪತಿ ನಾಯ್ಕ, ದಿನೇಶ ಅಮ್ಮಿನಳ್ಳಿ, ದಾಕ್ಷಾಯಣಿ ಪಿ.ಸಿ, ರಮೇಶ ಹೆಗಡೆ ಕೆರೆಕೋಣ, ರೇಖಾ ಭಟ್, ಮಹೇಶಕುಮಾರ ಹನಕೆರೆ, ಜ್ಯೋತಿ ಭಟ್,ಶೋಭಾ ಭಟ್, ಉಮೇಶ ದೈವಜ್ಞ, ಕೆ.ಎಸ್.ಅಗ್ನಿಹೋತ್ರಿ, ಶರಧಿ ಪಾಯದೆ, ಈ ಎಲ್ಲ ಕವಿಗಳು ಕವನ ವಾಚಿಸಿದರು.
ದಿನೇಶ್ ಅಮ್ಮಿನಳ್ಳಿ ಸ್ವಾಗತಿಸಿದರು. ರಾಜಲಕ್ಷ್ಮೀ ಭಟ್ ಪ್ರಾರ್ಥನೆ ಮಾಡಿದರು. ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಅಧ್ಯಕ್ಷ ಕೃಷ್ಣ ಪದಕಿ ವಂದಿಸಿದರು. ಯಶಸ್ವಿನಿ ಶ್ರೀಧರಮೂರ್ತಿ ಕಾರ್ಯಕ್ರಮವನ್ನು ನಿರೂಪಿಸಿದರು. ರಾಷ್ಟ್ರಗೀತೆಯಿಂದಲೆ ಕಾರ್ಯಕ್ರಮದ ಉದ್ಘಾಟನೆ ವಿಶೇಷವಾಗಿತ್ತು.
ಇದೇ ಸಂದರ್ಭದಲ್ಲಿ ಕಲಾ ಪೋಷಕಿ ಜಲಜಾಕ್ಷಿ ಶೆಟ್ಟಿ, ಹಿರಿಯ ಸಾಹಿತಿ ಜಿ.ವಿ.ಭಟ್, ಕಥೆಗಾರ್ತಿ ಹಾಗೂ ಪತ್ರಕರ್ತೆ ಭವ್ಯಾ ಹಳೆಯೂರು, ಕೃತಿ ಅವಲೋಕಿಸಿದ ಕವಯತ್ರಿ ಕಥೆಗಾರ್ತಿ ಪ್ರತಿಭಾ ಎಂ ನಾಯ್ಕ ಅವರನ್ನು ಗೌರವಿಸಲಾಯಿತು.
ಸಾಹಿತ್ಯ ವಲಯದ ಡಿ.ಎಸ್.ನಾಯ್ಕ, ಮಹೇಶಕುಮಾರ ಹನಕೆರೆ, ರಾಜು ಉಗ್ರಾಣಕರ, ವಿಮಲಾ ಭಾಗ್ವತ, ಮಹಾಬಲೇಶ್ವರ ಭಟ್, ಮಹಾಬಲೇಶ್ವರ ಮಡಿವಾಳ, ಡಿ.ಜಿ.ಹೆಗಡೆ, ವಿ.ಪಿ.ಹೆಗಡೆ,ಜಿ.ಎನ್.ಹೆಗಡೆ, ಮಾನಸ ಹೆಗಡೆ ಎಮ್.ಎಸ್.ಹೆಗಡೆ ಮುಂತಾದವರು ಉಪಸ್ಥಿತರಿದ್ದರು.

About Post Author

error: