April 19, 2024

Bhavana Tv

Its Your Channel

ವಿಶ್ವದರ್ಶನ ಪ್ರೌಢಶಾಲೆ ವಿದ್ಯಾರ್ಥಿಗಳಿಂದ ಫುಡ್ ಮಾರ್ಕೆಟ್

ವರದಿ: ವೇಣುಗೋಪಾಲ ಮದ್ಗುಣಿ

ಯಲ್ಲಾಪುರ: ವಿಶ್ವದರ್ಶನ ಪ್ರೌಢಶಾಲೆ ಇಡಗುಂದಿಯಲ್ಲಿ ಸಮೃದ್ದಿ ಇಕೋ ಕ್ಲಬ್ ಅಡಿಯಲ್ಲಿ ಪೋಷಕಾಂಶಗಳ ನಿರ್ವಹಣೆ ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಂದ “ ಫುಡ್ ಮಾರ್ಕೆಟ್ “ ಏರ್ಪಡಿಸಲಾಗಿತ್ತು. ವಿಜ್ಞಾನ ಶಿಕ್ಷಕರಾದ ಲತಾ ಹೆಗಡೆಯವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ 40 ವಿದ್ಯಾರ್ಥಿಗಳು ಭಾಗವಹಿಸಿದ್ದರು.ವಿವಿಧ ರೀತಿಯ ಪೋಷಕಾಂಶಗಳಿಗೆ ಸಂಬAಧಿಸಿದ ಆಹಾರ ವಸ್ತುಗಳನ್ನು ತಯಾರಿಸಿ ಮಾರಾಟ ಮಾಡಿದರು.ವಿದ್ಯಾರ್ಥಿಗಳಿಗೆ ಪೋಷಕಾಂಶಗಳ ಮಹತ್ವದ ಅರಿವು, ಮಾರಾಟ ಪ್ರಕ್ರಿಯೆ, ವ್ಯವಹಾರ ನಿರ್ವಹಣೆಯ ರೀತಿ ಮುಂತಾದವುಗಳ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಹಲವಾರು ಬಗೆಯ ಸಿಹಿ ಉಂಡೆಗಳು,ಹಸಿ ತರಕಾರಿಗಳು, ಮೊಳಕೆ ಕಾಳುಗಳು,ಶರಬತ್,ಹಲ್ವಾ, ಬರ್ಫಿ,ಫ್ರುಟ್ ಸಲಾಡ್,ಜ್ಯೂಸ್,ನಿಪ್ಪಟ್ಟು,ಚಕ್ಕುಲಿ,ಗಿರ್ಮಿಟ್,ಕಠ್ಠಾ ಮೀಠಾ,ಚಿಕ್ಕಿ,ಹೋಳಿಗೆ,ರಾಗಿ ಮಣ್ಣಿ,ಕೋಕಂ ಮುಂತಾದ ಖಾದ್ಯ ಪದಾರ್ಥಗಳನ್ನು ತಯಾರಿಸಿ ತಂದು ಮಾರಾಟ ಮಾಡಿದರು.ಪುಸ್ತಕೀಯ ವಿಷಯಗಳ ಪ್ರತ್ಯಕ್ಷ ಅನುಭವವು ವಿದ್ಯಾರ್ಥಿಗಳಲ್ಲಿ ಹಬ್ಬದ ವಾತಾವರಣವನ್ನು ಉಂಟುಮಾಡಿತ್ತು.

error: