March 22, 2024

Bhavana Tv

Its Your Channel

ಸೇತುವೆ ದಾಟುವ ವೇಳೆ ಕೊಚ್ಚಿ ಹೋದ ಲಾರಿ, ಐವರ ರಕ್ಷಣೆ ಓರ್ವ ನಾಪತ್ತೆ

ಯಲ್ಲಾಪುರ ತಾಲೂಕಿನ ಪಣಸಗುಳಿ ಸೇತುವೆ ದಾಟುವ ವೇಳೆ ಲಾರಿಯೊಂದು ನದಿ ನೀರಿಗೆ ಕೊಚ್ಚಿ ಹೋಗಿದ್ದು, ಓರ್ವ ನಾಪತ್ತೆಯಾಗಿರುವ ಘಟನೆ ನಡೆದಿದೆ.

ಯಲ್ಲಾಪುರ ತಾಲೂಕಿನ ಗುಳ್ಳಾಪುರ ವ್ಯಾಪ್ತಿಯಲ್ಲಿ ಹರಿಯುವ ಗಂಗಾವಳಿ ನದಿಗೆ ಪಣಸಗುಳಿ ಸೇತುವೆ ನಿರ್ಮಿಸಲಾಗಿದೆ. ಆದರೆ, ಕಳೆದೆರಡು ದಿನಗಳಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಹೆಚ್ಚಾಗಿರುವ ಕಾರಣ ಗಂಗಾವಳಿ ಮತ್ತೆ ತುಂಬಿ ಹರಿಯುತ್ತಿದ್ದು, ಸೇತುವೆಯ ಮೇಲೆ ನೀರು ಹರಿಯಲಾರಂಭಿಸಿದೆ.

ನದಿ ನೀರು ಹರಿಯುತ್ತಿದ್ದರೂ ಇದೇ ಸೇತುವೆಯನ್ನ ಬಳಸಿ ಓಡಾಡುವುದು ಈ ಭಾಗದ ಜನತೆಗೆ ಅನಿವಾರ್ಯವಾಗಿದೆ. ಹೀಗಾಗಿ ಇಂದು ಚಿರೇಕಲ್ಲು ತುಂಬಿಕೊAಡು ಆರು ಮಂದಿ ಲಾರಿಯಲ್ಲಿ ಇದೇ ಸೇತುವೆಯನ್ನು ದಾಟಿ ತೆರಳಿದ್ದರು. ಚಿರೇಕಲ್ಲು ಅನ್‌ಲೋಡ್ ಮಾಡಿಕೊಂಡು ವಾಪಸ್ಸಾಗುವ ವೇಳೆ ನದಿಯಲ್ಲಿನ ನೀರು ಇನ್ನಷ್ಟು ಹೆಚ್ಚಾಗಿದ್ದು, ಸೇತುವೆಯ ಮೇಲ್ಭಾಗದಿಂದ ಹರಿಯಲಾರಂಭಿಸಿದೆ. ಆದರೂ ಅನಿವಾರ್ಯವಾಗಿ ಸೇತುವೆ ದಾಟಲು ಮುಂದಾದಾಗ ಲಾರಿ ನದಿಯ ನೀರಿನ ರಭಸಕ್ಕೆ ಕೊಚ್ಚಿ ಹೋಗಿದೆ.

ಲಾರಿ ಕೊಚ್ಚಿ ಹೋದ ಪರಿಣಾಮ ಆರು ಮಂದಿಯೂ ನೀರು ಪಾಲಾಗಿದ್ದಾರೆ. ಆದರೆ, ಐವರನ್ನ ಗುಳ್ಳಾಪುರದಲ್ಲಿನ ಬೋಟ್ ಮೂಲಕ ರಕ್ಷಿಸಲಾಗಿದೆ. ಲಾರಿ ಚಾಲಕ ರಾಜೇಶ್ ಹರಿಕಂತ್ರ, ಕಾರ್ಮಿಕರಾದ ಸುನೀಲ, ರಾಜು, ಶಿವಾನಂದ, ದಿನೇಶ ಎಂಬುವವರನ್ನ ರಕ್ಷಣೆ ಮಾಡಲಾಗಿದೆ.
ವರದಿ: ನರಸಿಂಹ ನಾಯ್ಕ್ ಹರಡಸೆ ಓರ್ವ ನಾಪತ್ತೆ

ಯಲ್ಲಾಪುರ ತಾಲೂಕಿನ ಪಣಸಗುಳಿ ಸೇತುವೆ ದಾಟುವ ವೇಳೆ ಲಾರಿಯೊಂದು ನದಿ ನೀರಿಗೆ ಕೊಚ್ಚಿ ಹೋಗಿದ್ದು, ಓರ್ವ ನಾಪತ್ತೆಯಾಗಿರುವ ಘಟನೆ ನಡೆದಿದೆ.

ಯಲ್ಲಾಪುರ ತಾಲೂಕಿನ ಗುಳ್ಳಾಪುರ ವ್ಯಾಪ್ತಿಯಲ್ಲಿ ಹರಿಯುವ ಗಂಗಾವಳಿ ನದಿಗೆ ಪಣಸಗುಳಿ ಸೇತುವೆ ನಿರ್ಮಿಸಲಾಗಿದೆ. ಆದರೆ, ಕಳೆದೆರಡು ದಿನಗಳಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಹೆಚ್ಚಾಗಿರುವ ಕಾರಣ ಗಂಗಾವಳಿ ಮತ್ತೆ ತುಂಬಿ ಹರಿಯುತ್ತಿದ್ದು, ಸೇತುವೆಯ ಮೇಲೆ ನೀರು ಹರಿಯಲಾರಂಭಿಸಿದೆ.

ನದಿ ನೀರು ಹರಿಯುತ್ತಿದ್ದರೂ ಇದೇ ಸೇತುವೆಯನ್ನ ಬಳಸಿ ಓಡಾಡುವುದು ಈ ಭಾಗದ ಜನತೆಗೆ ಅನಿವಾರ್ಯವಾಗಿದೆ. ಹೀಗಾಗಿ ಇಂದು ಚಿರೇಕಲ್ಲು ತುಂಬಿಕೊAಡು ಆರು ಮಂದಿ ಲಾರಿಯಲ್ಲಿ ಇದೇ ಸೇತುವೆಯನ್ನು ದಾಟಿ ತೆರಳಿದ್ದರು. ಚಿರೇಕಲ್ಲು ಅನ್‌ಲೋಡ್ ಮಾಡಿಕೊಂಡು ವಾಪಸ್ಸಾಗುವ ವೇಳೆ ನದಿಯಲ್ಲಿನ ನೀರು ಇನ್ನಷ್ಟು ಹೆಚ್ಚಾಗಿದ್ದು, ಸೇತುವೆಯ ಮೇಲ್ಭಾಗದಿಂದ ಹರಿಯಲಾರಂಭಿಸಿದೆ. ಆದರೂ ಅನಿವಾರ್ಯವಾಗಿ ಸೇತುವೆ ದಾಟಲು ಮುಂದಾದಾಗ ಲಾರಿ ನದಿಯ ನೀರಿನ ರಭಸಕ್ಕೆ ಕೊಚ್ಚಿ ಹೋಗಿದೆ.

ಲಾರಿ ಕೊಚ್ಚಿ ಹೋದ ಪರಿಣಾಮ ಆರು ಮಂದಿಯೂ ನೀರು ಪಾಲಾಗಿದ್ದಾರೆ. ಆದರೆ, ಚನ್ನ ಗುಳ್ಳಾಪುರದಲ್ಲಿನ ಬೋಟ್ ಮೂಲಕ ರಕ್ಷಿಸಲಾಗಿದೆ. ಲಾರಿ ಚಾಲಕ ರಾಜೇಶ್ ಹರಿಕಂತ್ರ, ಕಾರ್ಮಿಕರಾದ ಸುನೀಲ, ರಾಜು, ಶಿವಾನಂದ, ದಿನೇಶ ಎಂಬುವವರನ್ನ ರಕ್ಷಣೆ ಮಾಡಲಾಗಿದೆ.
ವರದಿ: ನರಸಿಂಹ ನಾಯ್ಕ್ ಹರಡಸೆ

error: