December 6, 2022

Bhavana Tv

Its Your Channel

ವರ್ತಮಾನವನ್ನು ಅರಿಯಬೇಕಾದರೆ ಇತಿಹಾಸ ಅರಿಯುವ ಅಗತ್ಯವಿದೆ_ ದತ್ತಾತ್ರೇಯ. ಎಸ್. ಶೇವ್ಕಾರ

ವರದಿ: ವೇಣುಗೋಪಾಲ ಮದ್ಗುಣಿ

ಯಲ್ಲಾಪುರ: ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ವಿಶ್ವದರ್ಶನ ಪ್ರೌಢಶಾಲೆ ಇಡಗುಂದಿಯಲ್ಲಿ ಪಠ್ಯದ ಮೂಲಕ ವಿದ್ಯಾರ್ಥಿಗಳಲ್ಲಿ ರಾಷ್ಟ್ರಭಕ್ತಿಯನ್ನು ಮೂಡಿಸುವ ವಿನೂತನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಹತ್ತನೇ ತರಗತಿಯ ಪಠ್ಯದಲ್ಲಿ ಬರುವ ಡಾ.ಕೇಶವ ಬಲಿರಾಮ ಹೆಡಗೆವಾರ್ ಅವರ ” ನಿಜವಾದ ಆದರ್ಶ ಪುರುಷ ಯಾರಾಗಬೇಕು?”ಎಂಬ ಪಾಠದ ಬಗ್ಗೆ ವಿದ್ಯಾರ್ಥಿಗಳಿಗೆ ವಿಷಯವನ್ನು ಮನವರಿಕೆ ಮಾಡುವುದರ ಜೊತೆಗೆ ರಾಷ್ಟ್ರಾಭಿಮಾನ ಮೂಡಿಸಲೆಂದು ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಉಪನ್ಯಾಸಕರಾಗಿ ಆಗಮಿಸಿದ್ದ ದತ್ತಾತ್ರೇಯ ಎಸ್ ಭಟ್ಟ ಶೇವ್ಕಾರ ಅವರು ಮಾತನಾಡುತ್ತಾ ” ಆದರ್ಶ ಪುರುಷರನ್ನು ಅರಿಯಬೇಕಾದರೆ ಇತಿಹಾಸವನ್ನು ಅರಿಯಬೇಕಾಗುತ್ತದೆ.
ವರ್ತಮಾನವನ್ನು ಅರಿಯಬೇಕಾದರೆ ಇತಿಹಾಸವನ್ನು ಅರಿಯಬೇಕಾಗುತ್ತದೆ.ಭಾರತದಲ್ಲಿ ನಾವು ಎಂಟು ಪ್ರಮುಖ ಆದರ್ಶಪುರುಷರನ್ನು ಕಾಣುತ್ತೇವೆ.
ರಾಮನು ” ತನ್ನ ಉದಾತ್ತ ಚಿಂತನೆ,ದೃಷ್ಟಿ ಯ ಮೂಲಕ ಆದರ್ಶಪುರುಷ”ನಾಗಿದ್ದರೆ, ಕೃಷ್ಣ ನು ” ಪ್ರತಿಯೊಬ್ಬರಲ್ಲಿಯೂ ಜ್ಞಾನ ಅಂಕುರಿಸಬೇಕು”ಎAದು ಹೇಳಿದ್ಧಾನೆ.ಬುದ್ಧನು ” ಅಹಿಂಸಾಮಾರ್ಗವನ್ನು ಅನುಸರಿಸಬೇಕು”ಎಂಬ ಆದರ್ಶವನ್ನು ನೀಡಿದರೆ,
ಚಾಣಕ್ಯನು “ವ್ಯಕ್ತಿ ಸ್ವಾಭಿಮಾನಿಯಾಗಿ ಬದುಕಬೇಕು”ಎಂದರು.ಶAಕರಾಚಾರ್ಯರು” ವ್ಯಕ್ತಿ ವ್ಯಕ್ತಿಯಲ್ಲಿ ಭೇದವಿರಬಾರದು,ಸಮಾನ ಮನೋಭಾವವಿರಬೇಕು”ಎಂಬ ಆದರ್ಶ ಸಾರಿದರೆ, ಶಿವಾಜಿಯ ” ಶಕ್ತಿ ,ಭಕ್ತಿ, ಯುಕ್ತಿಗಳ ಸಂಯುಕ್ತ ರೂಪವಾಗಿದ್ಧು ಹೈಂದವೀ ಸಾಮ್ರಾಜ್ಯ ಸ್ಥಾಪನೆಯ ಕನಸು ಕಂಡ ಆದರ್ಶ ವ್ಯಕ್ತಿ ” ಸ್ವಾಮಿ ವಿವೇಕಾನಂದರು ” ಭಾರತದ ಪರಂಪರೆ,ಹಿರಿಮೆಯನ್ನು ಇಡಿ ಜಗತ್ತಿಗೆ ತೋರಿಸಿಕೊಟ್ಟ ಮಹಾನ್ ಆದರ್ಶ ವ್ಯಕ್ತಿ “.
ಡಾ.ಕೇಶವ ಬಲಿರಾಮ ಹೆಡಗೆವಾರ ಅವರು ಭಾರತದಲ್ಲಿರುವ ಜನರಲ್ಲಿ “ನಾವೆಲ್ಲ ಒಂದು,ನಾವೆಲ್ಲ ಬಂಧು,ನಮ್ಮ ನಮ್ಮಲ್ಲಿರುವ ಒಡಕನ್ನು ,ಭೇದಭಾವಗಳನ್ನುದೂರಮಾಡೋಣ ” ಎನ್ನುತ್ತಾ ಒಗ್ಗಟ್ಟನ್ನು ಮೂಡಿಸಲು ಸಂಘಟನಾತ್ಮಕವಾಗಿ ಪ್ರಯತ್ನಿಸಿದ ಇನ್ನೊಬ್ಬ ಪ್ರಮುಖ ಆದರ್ಶ ವ್ಯಕ್ತಿಗಳು. ಕೇಶವ ಬಲಿರಾಮ ಹೆಡಗೆವಾರ್ ಅವರ ಜೀವನ,ಹೋರಾಟ,ಸಂಘಟನಾ ಶಕ್ತಿ, ಆದರ್ಶಗಳು,ದೇಶ ಕಟ್ಟುವ ಕನಸು ಹಾಗೂ ಪ್ರಯತ್ನ, ರಾಷ್ಟ್ರೀಯ ಮಟ್ಟದ ಸಂಘಟನಾ ಸಾಮರ್ಥ್ಯ ಇಂದು ಎಲ್ಲರಿಗೂ ಆದರ್ಶಮಯವಾದುದು.
ಭಾರತದ ಮೇಲೆ ಹಲವಾರು ರೀತಿಗಳಲ್ಲಿ ದಾಳಿಗಳಾದವು.ಇಲ್ಲಿಯವರೆಗೆ ಭಾರತದ ಮೇಲೆ ಸುಮಾರು 20 ಬೇರೆ ಬೇರೆ ಕಡೆಗಳಿಂದ ದಾಳಿಗಳಾಗಿವೆ.ಇಷ್ಟೆಲ್ಲ ದಾಳಿಗಳ ನಂತರವೂ ಕೂಡ ಭಾರತ ಇಂದು ಸುಭದ್ರವಾಗಿ ನಿಂತಿದೆಯೆAದರೆ ಇದು ಭಾರತದ ಸಂಸ್ಕೃತಿಯ ಶ್ರೇಷ್ಠತೆಯಾಗಿದೆ.ಹಲವು ಶ್ರೇಷ್ಠ ಮಹಾಪುರುಷರ ಪ್ರಭಾವ ಇಂದಿಗೂ ನೆಲೆನಿಂತಿರುವುದರಿAದ ಭಾರತ ಇಂದಿಗೂ ಯಾವುದಕ್ಕೂ ಅಂಜದೆ ತಲೆಯೆತ್ತಿ ನಿಂತು ಅಭಿವೃದ್ಧಿಯೆಡೆಗೆ ಮುನ್ನುಗ್ಗುತ್ತಿದೆ ” ಎಂದರು. ರಾಜೀವ ಗಾಂವ್ಕಾರ ಪ್ರಾರ್ಥನೆ ನೆರವೇರಿಸಿದರು.
ಶಿಕ್ಷಕರಾದ ರಾಘವೇಂದ್ರ ಎಸ್ ಹೆಗಡೆಯವರು ಸ್ವಾಗತಿಸಿದರು. ಶಿಕ್ಷಕರಾದ ಡಾ.ನವೀನ್ ಕುಮಾರವರು ವಂದಿಸಿದರು.ಕುಮಾರಿ ರಮ್ಯಾ ಮಡಿವಾಳ ಕಾರ್ಯಕ್ರಮ ನಿರ್ವಹಿಸಿದರು.

About Post Author

error: