February 1, 2023

Bhavana Tv

Its Your Channel

ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದ ದ್ವಾರಕ್ಕೆ ಪ.ಗ.ಭಟ್ಟ ಗುಡ್ಡೆ ಹೆಸರಿಡಲು ಬೀರಣ್ಣಾ ನಾಯಕ ಮೊಗಟಾ ಮನವಿ

ವರದಿ: ವೇಣುಗೋಪಾಲ ಮದ್ಗುಣಿ

ಯಲ್ಲಾಪುರ: ಡಿಸೆಂಬರ ತಿಂಗಳ 18 ಮತ್ತು 19 ರಂದು ಪವಿತ್ರ ಹಾಗೂ ಐತಿಹಾಸಿಕ ಕ್ಷೇತ್ರ ಉಳವಿಯಲ್ಲಿ ನಡೆಯಲಿರುವ ಜಿಲ್ಲಾ ಸಾಹಿತ್ಯ ಸಮ್ಮೇಳನದ ಪ್ರದಾನ ವೇದಿಕೆ ಅಥವಾ ಪ್ರದಾನ ದ್ವಾರಕ್ಕೆ ಸಾಹಿತಿ, ತಜ್ಞ ಹಾಗೂ ಯಲ್ಲಾಪುರ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಪ.ಗ. ಭಟ್ಟ,ಗುಡ್ಡೆಯವರ ಹೆಸರಿಡಬೇಕೆಂದು ಜಿಲ್ಲಾ ಕಸಾಪದ ಮಾಜಿ ಕಾರ್ಯದರ್ಶಿ ಹಾಗೂ ಕೋಶಾಧ್ಯಕ್ಷರಾದ ಬೀರಣ್ಣ ನಾಯಕ ಮೊಗಟಾ ಜಿಲ್ಲಾ ಕಸಾಪದ ಅಧ್ಯಕ್ಷರಾದ ಬಿ.ಎನ್.ವಾಸರೆ ಅವರಲ್ಲಿ ಮನವಿ ಮಾಡಿದ್ದಾರೆ.ಇದು ಯಲ್ಲಾಪುರ ತಾಲೂಕಿನ ಸಾಹಿತ್ಯಾಭಿಮಾನಿಗಳ ಎಲ್ಲರ ಆಶಯವಾಗಿದ್ದು ಇದನ್ನು ಜಿಲ್ಲಾ ಕಸಾಪ ಪರಿಗಣಿಸಬೇಕೆಂದು ಮೊಗಟಾ ಕೇಳಿ ಕೊಂಡಿದ್ದಾರೆ.

About Post Author

error: