February 1, 2023

Bhavana Tv

Its Your Channel

ಪಾಟೀಲ ಇಲೇಕ್ಟ್ರಿಕಲ್ಸ್ ಮಾಲಿಕ ವಿನೋದ ಪಾಟೀಲ ನಿಧನ

ಯಲ್ಲಾಪುರ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನಲ್ಲಿ ಕಳೆದ ಹದಿನೇಳು ವರ್ಷಗಳಿಂದ ವಿದ್ಯುತ ಗುತ್ತಿಗೆದಾರರಾಗಿ ಕೆಲಸ ನಿರ್ವಹಿಸಿ ಜನಮೆಚ್ಚುಗೆ ಗಳಿಸಿದ ಪಾಟೀಲ ಇಲೇಕ್ಟ್ರಿಕಲ್ಸ್ ಮಾಲಿಕರಾದ ವಿನೋದ ಪಾಟೀಲರು (48)ನಿಧನರಾಗಿದ್ದಾರೆ.

ಇವರ ತಂದೆ ಸ್ಟೇಟ್ ಬ್ಯಾಂಕಿನಲ್ಲಿ ಕೆಲಸ ನಿರ್ವಹಿಸಿ ನಿವೃತ್ತಿ ಹೊಂದಿದ್ದಾರೆ ಅವರು ತಮ್ಮ ಹಾಗೂ ತಂಗಿಯನ್ನು ಬಿಟ್ಟು ಅಗಲಿದ್ದಾರೆ.
ಅವರ ನಿಧನಕ್ಕೆ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ ಗುತ್ತಿಗೆದಾರರ ಸಂಘ ಬೆಂಗಳೂರು ಇದರ ರಾಜಾಧ್ಯಕ್ಷರಾದ ಸಿ.ರಮೇಶ, ಕಾರ್ಯದರ್ಶಿಯಾದ ಚಂದ್ರಬಾಬು,ಕನ್ನಡ ಕ್ರಿಯಾ ಸಮಿತಿ ಛೇರ್ಮನ್ ವೇಣುಗೋಪಾಲ ಮದ್ಗುಣಿ, ಸಚಿವರಾದ ಶಿವರಾಮ ಹೆಬ್ಬಾರ, ವಿಧಾನ ಪರಿಷತ್ತಿನ ಸದಸ್ಯರಾದ ಶಾಂತಾರಾಮ ಸಿದ್ದಿ, ಮುಂತಾದವರು ಶೋಕ ವ್ಯಕ್ತಪಡಿಸಿದ್ದಾರೆ

About Post Author

error: