February 1, 2023

Bhavana Tv

Its Your Channel

ಇತ್ತೀಚಿಗೆ ನಿಧನರಾದ ವಿದ್ಯುತ್ ಗುತ್ತಿಗೆದಾರ ವಿನೋದ ಪಾಟೀಲ್‌ಗೆ ಶೃದ್ದಾಂಜಲಿ

ವರದಿ: ವೇಣುಗೋಪಾಲ ಮದ್ಗುಣಿ

ಯಲ್ಲಾಪುರ: ಇತ್ತೀಚಿಗೆ ನಿಧನರಾದ ವಿದ್ಯುತ್ ಗುತ್ತಿಗೆದಾರ ವಿನೋದ ಪಾಟೀಲ್ ನಿಧನಕ್ಕೆ ಗುರುವಾರ ಪಟ್ಟಣದ ವಿದ್ಯುತ್ ಗುತ್ತಿಗೆದಾರರ ಸಂಘದ ಸಭಾಭವನದಲ್ಲಿ ಶೃದ್ದಾಂಜಲಿ ಸಲ್ಲಿಸಲಾಯಿತು.
ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ತಾಲೂಕಾ ಅಧ್ಯಕ್ಷ ವೇಣುಗೋಪಾಲ ಮದ್ಗುಣಿ ಮಾತನಾಡಿ,” ವಿನೋದ ಪಾಟೀಲ್ ವಿದ್ಯುತ್ ಗುತ್ತಿಗೆದಾರರಾಗಿ ಅಪಾರ ಸೇವೆ ಸಲ್ಲಿಸಿದ್ದರು.ಅವರ ಅಕಾಲಿಕ ನಿಧನದಿಂದ ಸಂಘಕ್ಕೆ ಸಮಾಜಕ್ಕೆ ನಷ್ಟ ಉಂಟಾಗಿದೆ ” ಎಂದರು.
ಗುತ್ತಿಗೆದಾರ ಶಾಂತಾರಾಮ ಹೆಗಡೆ ಮಾತನಾಡಿ,ಹುಟ್ಟು ಆಕಸ್ಮಿಕ ಸಾವು ಖಚಿತ.ನಡುವೆ ಸಮಾಜಕ್ಕೆ ನಾವು ಮಾಡಿದ ಸೇವೆ ಮಾತ್ರ ನೆನಪಿನಲ್ಲಿ ಉಳಿಯಬಲ್ಲದು. ವಿನೋದ ಪಾಟೀಲರ ಅಕಾಲಿಕ ಅಗಲಿಕೆ ನೋವು ತಂದಿದೆ ಎಂದರು.
ಗುತ್ತಿಗೆದಾರರಾದ ಗೋಪಾಲಕೃಷ್ಣ ಕರುಮನೆ,ವಿ.ಕೆ.ಭಟ್ಟ ಶೀಗೆಪಾಲ,ದಾದಾಫಿರ್ ಹನುಮಸಾಗರ,ದಿನೇಶ ರೇವಣಕರ್,ವಿನಯ ಹೆಗಡೆ,ವಿಶ್ವನಾಥ ಕರುಮನೆ,ನಾಗರಾಜ ಕೊರ್ನಳ್ಳಿ,ಪ್ರಶಾಂತ ಮಹೇಕರ್,ರೀಗನ್ ಡಿಸೋಜಾ,ಜಾಫರ್,ರಾಮಚಂದ್ರ ಮುಂತಾದವರು ಶೃದ್ದಾಂಜಲಿ ಸಲ್ಲಿಸಿದರು.

About Post Author

error: