April 25, 2024

Bhavana Tv

Its Your Channel

ವಿಶ್ವದರ್ಶನ ಕೇಂದ್ರಿಯ ಶಾಲೆಯಲ್ಲಿ ಹಾವುಗಳ ಜೊತೆಗೆ ಸಹಜೀವನ ಕಾರ್ಯಾಗಾರ

ವರದಿ: ವೇಣುಗೋಪಾಲ ಮದ್ಗುಣಿ

ಯಲ್ಲಾಪುರ : ಮಾನವನ ಉಳಿವಿಗೆ ಹಾವುಗಳ ಕೊಡುಗೆ ಅಪಾರ. ಹೀಗಾಗಿ ಅವುಗಳಿಗೆ ತೊಂದರೆ ಕೊಡುವ ಬದಲು, ಹೊಂದುಕೊAಡು ಜೀವನ ನಡೆಸುವ ಪದ್ದತಿಯನ್ನು ನಾವು ರೂಢಿಸಿಕೊಳ್ಳಬೇಕಿದೆ ಎಂದು ಉರಗ ತಜ್ಞ ಸುಹಾಸ ಹೆಗಡೆ ಹೇಳಿದರು.
ಪಟ್ಟಣದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಶ್ರೀ ಗಂಗಾಧರೇAದ್ರ ಸರಸ್ವತೀ ಸಭಾಭವನದಲ್ಲಿ, ಟಿಆರ್‌ಇಸಿ ಸ್ವಯಂ ಸೇವಾ ಸಂಸ್ಥೆ, ಮೋಟರ್ ಸ್ಪೋರ್ಟ್ಸ್ & ಅಡ್ವೆಂಚರ್ ಕ್ಲಬ್ ಯಲ್ಲಾಪುರ ವತಿಯಿಂದ ಹನ್ಸ್ ನ್ಯಾಚುರಲ್ಸ್ ಸಹಯೋಗದೊಂದಿಗೆ ಉರಗಗಳ ಮಾಹಿತಿ ಕುರಿತು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ “ಹಾವುಗಳ ಜೊತೆ ಸಹಜೀವನ” ಎಂಬ ವಿಷಯದ ಕುರಿತು ಉಪನ್ಯಾಸ ನೀಡಿ ಮಾತನಾಡಿದ ಅವರು, ಮಾನವ ಸಂತತಿ ಜನ್ಮತಾಳುವುದಕ್ಕೂ ಸಾವಿರಾರು ವರ್ಷಗಳ ಹಿಂದಿನಿAದಲೇ ಸರಿಸೃಪಗಳು ಭೂಮಿಯ ಮೇಲೆ ವಾಸಿಸುತ್ತಿವೆ. ಹೀಗಾಗಿ ಮಾನವನ ಜಾಗಕ್ಕೆ ಅವು ಬಂದಿಲ್ಲ. ಬದಲಾಗಿ ಅವುಗಳ ಜಾಗವನ್ನು ಮಾನವ ಆಕ್ರಮಿಸಿದ್ದಾನೆ. ನಮ್ಮ ಜಿಲ್ಲೆಯು ಅನೇಕ ವಿಶಿಷ್ಟ ಹಾವಿನ ಪ್ರಜಾತಿಗಳ ತಾಣವಾಗಿದೆ. ಅವುಗಳನ್ನು ಸಂರಕ್ಷಿಸಿಕೊAಡು ಪ್ರಕೃತಿಯ ಸಮೋತಲನ ಕಾಪಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ನಂತರ ಪಿಪಿಟಿ ಮೂಲಕ ಹಾವಿನ ಕುರಿತಾದ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ನೀಡಿದರು. ನಮ್ಮ ಜಿಲ್ಲೆಯಲ್ಲಿ ಸಾಮಾನ್ಯವಾಗಿ ಕಂಡುಬರುವ ಹಾವುಗಳು, ವಿಷದ ಆಧಾರದ ಮೇಲೆ ಹಾವುಗಳ ವರ್ಗೀಕರಣ, ಹಾವುಗಳನ್ನು ಕಂಡಾಗ ವಹಿಸಬೇಕಾದ ಮುನ್ನಚ್ಚರಿಕೆ ಕ್ರಮಗಳು, ಹಾವಿನ ಕಡಿತವಾದಾಗ ತೆಗೆದುಕೊಳ್ಳಬೇಕಾದ ಕ್ರಮಗಳು ಕುರಿತು ವಿವರಿಸಿದರು. ವಿದ್ಯಾರ್ಥಿಗಳು ಕುತೂಹಲದಿಂದ ತಮಗಿದ್ದ ಸಂದೇಹಗಳನ್ನು ಬಗೆಹರಿಸಕೊಂಡರು. ಕೊನೆಯಲ್ಲಿ ವಿದ್ಯಾರ್ಥಿಗಳಿಗೆಲ್ಲ ಹಾವುಗಳ ಕುರಿತು ಸಾಮಾನ್ಯ ಮಾಹಿತಿಯಿರುವ ಕೈಪಿಡಿಯನ್ನು ಉಚಿತವಾಗಿ ವಿತರಿಸಲಾಯಿತು.
ಶಿಕ್ಷಕಿ ವನಿತಾ ಭಾಗ್ವತ ಸರ್ವರನ್ನು ಸ್ವಾಗತಿಸಿದರು. ಈ ಸಂದರ್ಭದಲ್ಲಿ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕ ಗುರುರಾಜ ಕುಂದಾಪುರ, ಅರಣ್ಯ ಅಧಿಕಾರಿ ಸಂಜೀವಕುಮಾರ್, ಪದ್ಮನಾಭ ಶಾನಭಾಗ, ವಸಂತ ಹೆಗಡೆ , ಮೋಟರ್ ಸ್ಪೋರ್ಟ್ಸ್ & ಅಡ್ವೆಂಚರ್ ಕ್ಲಬ್‌ನ ಅಧ್ಯಕ್ಷ ಜಯಂತ ಮಾವಳ್ಳಿ ಹಾಗೂ ಕೇಂದ್ರಿಯ ಶಾಲೆಯ ಪ್ರಾಂಶುಪಾಲೆ ಮಹಾದೇವಿ ಭಟ್ ಸೇರಿದಂತೆ ಉಪನ್ಯಾಸಕರು, ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

error: