April 24, 2024

Bhavana Tv

Its Your Channel

ಉಮ್ಮಚ್ಗಿಯಲ್ಲಿ ನಡೆದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯಲ್ಲಿ ಬರ್ಗಿ ತಂಡ ಪ್ರಥಮ

ವರದಿ:ವೇಣುಗೋಪಾಲ ಮದ್ಗುಣಿ

ಯಲ್ಲಾಪುರ : ದೇಹದ ಆರೋಗ್ಯಕ್ಕಷ್ಟೇ ಅಲ್ಲ,ಮನಸ್ಸಿನ ಆರೋಗ್ಯಕ್ಕೂ ಆಟಗಳು ಸಹಕಾರಿಯಾಗಿವೆ. ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿಯೂ ಆಟಗಳು ಮಹತ್ತರ ಕೊಡುಗೆ ನೀಡುತ್ತವೆ. ಯುವಕರು ಈ ಮೂಲಕ ಸಮಾಜಕ್ಕೆ ಆದರ್ಶವಾಗಬೇಕು ಎಂದು ಕಾರ್ಮಿಕ ಇಲಾಖೆಯ ಸಚಿವರಾದ ಶಿವರಾಮ ಹೆಬ್ಬಾರವರು, ಪಾಂಚಜನ್ಯ ಸ್ಪೋರ್ಟ್ಸ್ ಕ್ಲಬ್ ಉಮ್ಮಚ್ಗಿ ಹಾಗೂ ಗ್ರಾಮ ಪಂಚಾಯತ ಉಮ್ಮಚ್ಗಿ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡುತ್ತ ಹೇಳಿರು.
ಮಕ್ಕಳಿಗೆ ಆಟದೊಂದಿಗೆ ಪಾಠವೂ ಮುಖ್ಯವಾಗಿದೆ. ಮನೆಯಲ್ಲಿ ಹಿರಿಯರಿಗೂ ಅವರು ನೆರವು ನೀಡ ಬೇಕು. ಹಾಗಾದಾಗ ಉತ್ತಮವಾದ ಸದೃಢ ಸಮಾಜದ ನಿರ್ಮಾಣಕ್ಕೆ ಕಾರಣವಾಗುತ್ತದೆ ಎಂದು ಅತಿಥಿಗಳಾಗಿ ಭಾಗವಹಿಸಿದ್ದ ಉಮ್ಮಚ್ಗಿ ಗ್ರಾಮ ಪಂಚಾಯತ ಸದಸ್ಯರಾದ ಕುಪ್ಪಯ್ಯ ಪೂಜಾರಿ ಮಾತನಾಡುತ್ತ ಹೇಳಿದರು.
ಉಮ್ಮಚ್ಗಿ ಗ್ರಾಮ ಪಂಚಾಯತ ಅಧ್ಯಕ್ಷೆ ರೂಪಾ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯತ ಉಪಾಧ್ಯಕ್ಷರಾದ ಶಿವರಾಯ ಪೂಜಾರಿ, ಸದಸ್ಯರುಗಳಾದ ತಿಮ್ಮವ್ವ ಬಸಾಪುರ, ಲಲಿತಾ ವಾಲೀಕಾರ,ತಾಲೂಕ ಪಂಚಾಯತ ಮಾಜಿ ಸದಸ್ಯೆ ರಾಧಾ ಹೆಗಡೆ,ಹಿತ್ಲಳ್ಳಿ ಗ್ರಾಮ ಪಂಚಾಯತ ಸದಸ್ಯರಾದ ಸತ್ಯನಾರಾಯಣ ಹೆಗಡೆ, ಸಾಮಾಜಿಕ ಕಾರ್ಯಕರ್ತರಾದ ಮಂಜುನಾಥ್ ಕೆ ಮೊಗೇರ,ಲಕ್ಷ್ಮಣ ಪೂಜಾರಿ, ಶ್ರೀಧರ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.
ಗಿರಿಧರ ನಾಯ್ಕ ಸ್ವಾಗತಿಸಿ, ನಿರ್ವಹಿಸಿ, ವಂದನಾರ್ಪಣೆ ಸಲ್ಲಿಸಿದರು. ನಂತರ ನಡೆದ ಪಂದ್ಯಾವಳಿಯಲ್ಲಿ ಹನ್ನೆರಡು ತಂಡಗಳು ಭಾಗವಹಿಸಿ, ಬರ್ಗಿ ತಂಡ ಪ್ರಥಮ ಮತ್ತು ಉಮ್ಮಚ್ಗಿ ತಂಡ ದ್ವಿತೀಯ,ಹುಲೇಕಲ್ ತಂಡ ಮೂರು, ಗೋಕರ್ಣ ತಂಡ ನಾಲ್ಕನೇ ಸ್ಥಾನ ಪಡೆದುಕೊಂಡವು.

error: