April 20, 2024

Bhavana Tv

Its Your Channel

ಸ್ಟೂಡೆಂಟ್ ಪೊಲೀಸ್ ಯೋಜನೆಗೆ ಯಲ್ಲಾಪುರದ ಎರಡು ಶಾಲೆಗಳ ಆಯ್ಕೆ

ವರದಿ: ವೇಣುಗೋಪಾಲ ಮದ್ಗುಣಿ

ಯಲ್ಲಾಪುರ : ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪೊಲೀಸ್ ಇಲಾಖೆಯ ಹೊಸ ಯೋಜನೆಯಾದ ಸ್ಟೂಡೆಂಟ್ ಪೊಲೀಸ್ ಕೆಡೆಟ್ ಯೋಜನೆಯನ್ನು ಸರಕಾರಿ ಪ್ರೌಢಶಾಲೆ ಬಿಸಗೋಡ್ ಮತ್ತು ಸರಕಾರಿ ಪ್ರೌಢಶಾಲೆ ಮಲವಳ್ಳಿ ಈ ಎರಡು ಶಾಲೆಯನ್ನು ಆಯ್ಕೆ ಮಾಡಿರುವುದು ಅದರಂತೆ ಈ ಯೋಜನೆಯನ್ನು ಸರಕಾರಿ ಪ್ರೌಢಶಾಲೆ ಬಿಸ್ಗೊಡದಲ್ಲಿ ಸ್ಟೂಡೆಂಟ್ ಪೊಲೀಸ್ ಕೆಡೆಟ್ ಯೋಜನೆಯ ಉದ್ಘಾಟನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪೊಲೀಸ್ ನಿರೀಕ್ಷಕರಾದ ಸುರೇಶ ಯಳ್ಳೂರು ರವರು ಪೊಲೀಸ್ ಇಲಾಖೆ ಹುಟ್ಟಿ ಬಂದ ರೀತಿ , ಪೊಲೀಸ್ ಇಲಾಖೆಯ ಹಿನ್ನಲೆ , ಉದ್ದೇಶ ,ಗುರಿ ಮತ್ತು ಈ ಸ್ಟೂಡೆಂಟ್ ಪೊಲೀಸ್ ಕೆಡೆಟ್ ಯೋಜನೆಯ ಉದ್ದೇಶ ಗುರಿ ಮತ್ತು ಅದರ ರೀತಿ ನೀತಿಗಳ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿದ್ದರು , ಮತ್ತೊಬ್ಬ ಮುಖ್ಯಅತಿಥಿಗಳಾದ ಯಲ್ಲಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಆರ್.ಹೆಗಡೆಯವರು ಮಾತನಾಡಿ ಪೊಲೀಸ್ ಇಲಾಖೆ ಈ ಹೊಸ ಯೋಜನೆಯ ತಂದಿರುವುದು ಬಹಳ ಉತ್ತಮ ಕೆಲಸ ಮತ್ತು ನಮ್ಮ ತಾಲೂಕಿನಲ್ಲಿ ಎರಡು ಶಾಲೆಯನ್ನು ಆಯ್ಕೆ ಮಾಡಿರುವುದು ಬಹಳ ಒಳ್ಳೆಯದು ಇದರ ಉದ್ದೇಶವನ್ನು ಎಲ್ಲಾ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದು ತಿಳಿಸಿದರು , ಈ ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರು ಅಧ್ಯಕ್ಷತೆಯನ್ನು ವಹಿಸಿದ್ದರು. ಮತ್ತು ಶಾಲೆ ಮುಖ್ಯ ಗುರುಗಳು , ದೈಹಿಕ ಗುರುಗಳು ಮತ್ತು ದೈಹಿಕ ತರಬೇತಿ ನೀಡುವ ಡ್ರಿಲ್ ಇನ್ಸ್ಪೆಕ್ಟರ್ ಈರಣ್ಣ ಕೆಳಗಿನ ಮನೆ ಇವರು ಹಾಗೂ 42 ಸ್ಟೂಡೆಂಟ್ ಪೊಲೀಸ್ ಕೆಡೆಟ್ ಗಳು ಹಾಜರಿದ್ದರು .
ಅದರಂತೆ ಇನ್ನೊಂದು ಶಾಲೆಯಾದ ಸರಕಾರಿ ಪ್ರೌಢಶಾಲೆ ಮಲವಳ್ಳಿ ಶಾಲೆಯಲ್ಲಿ ಅಮೀನ್ ಅತ್ತಾರ ಅವರ ಉದ್ಘಾಟಿಸಿದರು ಆ ವೇಳೆ ಶಾಲಾ ಮುಖ್ಯ ಗುರುಗಳು , ದೈಹಿಕ ಶಿಕ್ಷಕರು , ಡ್ರಿಲ್ ಇನ್ಸ್ಪೆಕ್ಟರ್ ಮತ್ತು ಶಾಲೆಯ ಎಲ್ಲಾ ಶಿಕ್ಷಕರ ಹಾಗೂ 42 ಸ್ಟೂಡೆಂಟ್ ಪೊಲೀಸ್ ಕೆಡೆಟ್ ಜನ ವಿಧ್ಯಾರ್ಥಿಗಳ ಹಾಜರಿದ್ದರು.

error: